ಏನೂ ಅರಿಯದ ಮಕ್ಕಳವು ಹೆಸರು ಅಶ್ವಿನ್ (೮) ಆಕಾಂಕ್ಷಾ (೪) ಶಿವಮೊಗ್ಗ ಗಾಂಧಿಪಾರ್ಕಿನಲ್ಲಿ ಆಡಿ ನಲಿದಿವೆ. ಭದ್ರಾವತಿಯಿಂದ ಅಮ್ಮನೊಂದಿಗೆ ಬಂದಿದ್ದ ಅ ಹಸುಳೆಗಳು ಅಲ್ಲೇ ಇದ್ದ ಜ್ಯೂಸ್ ಕುಡಿದಿವೆ.ಆದರೆ ಆ ಜ್ಯೂಸೇ ತಮ್ಮ ಜೀವಕ್ಕೆ ಕೊನೆ ಹಾಡುತ್ತದೆ ಎಂದು ಕಂದಮ್ಮಗಳಿಗೆ ಗೊತ್ತಿರಲಿಲ್ಲ. ಆಟ ಮುಗಿಸಿ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಂತೆ ಬಾಯಲ್ಲಿ ನೊರೆ ಬರಲಾರಂಭಿಸಿದೆ. ಕೂಡಲೇ ಅಲ್ಲಿದ್ದ ಆಟೊ ಚಾಲಕರು ಮಕ್ಕಳನ್ನು ಹತ್ತಿರದಲ್ಲಿಯೇ ಇದ್ದ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಸ್ಥಿತಿ ಗಂಭೀರ ಎನ್ನುತ್ತಿದ್ದಂತೆ ಸರ್ಜಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮಕ್ಕಳು ಅಸುನೀಗಿದ್ದಾರೆ.
ತಾಯಿ ವಿಚಾರಣೆ:
ಇಡೀ ಪ್ರಕರಣದಲ್ಲಿ ಹಲವು ಅನುಮಾನಗಳಿದ್ದು, ಪೊಲೀಸರು ಮಕ್ಕಳ ತಾಯಿ ಗೀತಾ ಅವರನ್ನು ವಿಚಾರಣೆ ನಡೆಸಿದ್ದಾರೆ. ಜ್ಯೂಸ್‌ನಲ್ಲಿ ವಿಷ ಇತ್ತೆ, ಅಥವಾ ವಿಷ ಬೆರೆಸಿ ಜ್ಯೂಸ್ ನೀಡಲಾಯಿತೆ. ತಾಯಿಗೆ ಇದೆಲ್ಲವೂ ಗೊತ್ತಿಲ್ಲವೆ ಎಂಬಿತ್ಯಾದಿ ಅನುಮಾನಗಳು ಕಾಡುತ್ತಿವೆ. ಕಂಡೋರ ಕಷ್ಟ ಬಲ್ಲೋರು ಯಾರು, ಆದರೆ ಏನೂ ಅರಿಯದ ಮುಗ್ಧ ಕಂದಮ್ಮಗಳು ಯಾವ ಲೀಲೆಗೊ ಬಲಿಯಾಗಿದ್ದು ಮಾತ್ರ ಘೋರ ದುರಂತ