ಶಿವಮೊಗ್ಗದಲ್ಲಿ ಇತ್ತೀಚೆಗೆ ಬಜರಂಗದಳ ಕಾರ್‍ಯಕರ್ತನ ಮೇಲೆ ಹಲ್ಲೆ ನಡೆಸಿದ ಮುಸ್ಲಿಂ ಗೂಂಡಾಗಳನ್ನು ಬಂಧಿಸದಿರುವುದ್ನು ಖಂಡಿಸಿ ಹಿಂದೂ ಪರ ಸಂಘಟನೆಗಳಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಕೋಟೆ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ ಕಾರ್ಯಕರ್ತರು, ಇತ್ತೀಚೆಗೆ ನಾಗೇಶ್ ಎಂಬ ಕಾರ್ಯಕರ್ತನ ಮೇಲೆ ಮುಸ್ಲಿಂ ಗೂಂಡಾಗಳು ಹಲ್ಲೆ ನಡೆಸಿದ್ದರು. ಒಂದು ತಿಂಗಳಾಗುತ್ತಾ ಬಂದರೂ ಯಾರನ್ನೂ ಬಂಧಿಸಿಲ್ಲ. ಆದರೆ ಹಿಂದೂ ಯುವಕರನ್ನು ರಾತೋರಾತ್ರಿ ಕರೆದುಕೊಂಡು ಬಂದು ಕೇಸು ದಾಖಲಿಸಲಾಗುತ್ತಿದೆ. ಪೊಲೀಸರ ಈ ತಾರತಮ್ಯ ನೀತಿ ಖಂಡನೀಯ. ನಿಜವಾದ ಹಲ್ಲೆಕೋರರನ್ನು ಬಂಧಿಸಬೇಕು. ಮತ್ತು ಹಿಂದೂ ಸಮಾಜದ ಅಮಾಯಕ ಯುವಕರನ್ನು ಬಂಧಿಸಿ ಕೇಸು ದಾಖಲಿಸುವುದನ್ನು ನಿಲ್ಲಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ಪೊಲೀಸರು ಒಂದು ಕೋಮಿನ ಗೂಂಡಾಗಳನ್ನು ರಕ್ಷಿಸುತ್ತಿದ್ದಾರೆ ಎಂದು ಮುಖಂಡರು ಆರೋಪಿಸಿದರು.
ಪ್ರತಿಭಟನೆಯಲ್ಲಿ ನಗರಪಾಲಿಕೆ ಸದಸ್ಯರಾದ ಎಸ್.ಎನ್.ಚನ್ನಬಸಪ್ಪ, ವಿಶ್ವಾಸ್,ಪ್ರಭು,ಬಳ್ಳೆಕೆರೆ ಸಂತೋಷ್,ಜಗದೀಶ್,ದೀನ್ ದಯಾಳ್, ಗುರು ಮತ್ತಿತರರ ಮುಖಂಡರುಗಳು ಭಾಗವಹಿಸಿದ್ದರು
previous post
next post