ಹಲವು ವಂಚನೆ ಪ್ರಕರಣಗಳಲ್ಲಿ ಬಂಧಿತನಾಗಿರುವ ಯುವರಾಜ್ ಎಂಬ ವ್ಯಕ್ತಿಗೂ ಸೇವಾಲಾಲ್ ಗುರುಪೀಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕನಾಋಟಕ ರಾಜ್ಯ ಬಂಜಾರ ವಿದ್ಯಾಥರ್ಿ ಸಂಘ ಸ್ಪಷ್ಟನೆ ನೀಡಿದೆ.
ಕೋಟ್ಯಂತರೂ ವಂಚನೆ ಮಾಡಿ ಸಿಸಿಬಿ ಪೊಲೀಸರಿಂದ ಬಂಧಿತನಾಗಿರುವ ಯುವರಾಜ ಎಂಬ ವ್ಯಕ್ತಿ ಹಿಂದೆ ನಮ್ಮ ಸೂರಗೊಂಡನಕೊಪ್ಪದಲ್ಲ ಇದ್ದ. ಸುಮಾರು 20 ವರ್ಷಗಳ ಹಿಂದೆಯೇ ಲೌಕಿಕ ಬದುಕಿಗೆ ಬಂದಿರುವ ಆತ ಸಮಾಜ ಹಾಗೂ ಗುರುಪೀಠದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಡಿ.ಆರ್.ಗಿರೀಶ್ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯುವರಾಜ್ ಹಲವು ಗಣ್ಯ ರಾಜಕಾರಿಣಿಗಳು, ಅಧಿಕಾರಸ್ಥರ ಜತೆ ಫೋಟೋ ತೆಗೆಸಿಕೊಂಡು ಅದನ್ನು ಬಳಸಿಕೊಂಡು ವಂಚನೆ ಮಾಡಿದ್ದಾನೆ. ಸರಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಯಾನಾಯ್ಕ್, ಉಮಾಮಹೇಶ್ವರ್ ನಾಯ್ಕ, ಉಷಾನಾಯ್ಕ್ ಮತ್ತಿತರರಿದ್ದರು.
previous post
next post