Malenadu Mitra
ರಾಜ್ಯ ಶಿವಮೊಗ್ಗ

ವೈಶಾಲಿ ಅವರಿಗೆ ಪದೋನ್ನತಿ

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ ಅವರು ಐಎಎಸ್ ಕೇಡರ್‌ಗೆ ಪದೋನ್ನತಿ ಹೊಂದಿದ್ದಾರೆ. ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಧಿಕೃತ ಪಟ್ಟಿ ಪ್ರಕಟಿಸಿದೆ.
ಶಿವಮೊಗ್ಗ ಡಯೆಟ್‌ನಲ್ಲಿ ವಿದ್ಯಾಭ್ಯಾಸ ಮಾಡಿರುವ ವೈಶಾಲಿ ಅವರು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರದವರು. ಉಪನ್ಯಾಸಕಿಯಾಗಿ ಸರಕಾರಿ ಸೇವೆಗೆ ಸೇರಿದ್ದ ವೈಶಾಲಿ ಅವರು ಕೆ.ಎ.ಎಸ್ ಪಾಸಾಗಿ ನಾಗರಿಕಸೇವೆಗೆ ಬಂದಿದ್ದರು. ಶಿವಮೊಗ್ಗದಲ್ಲಿ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿದ್ದ ಅವರು ಬಳಿಕ ಚಿಕ್ಕಮಗಳೂರು ಎಡಿಸಿಯಾಗಿ ಸೇವೆ ಸಲ್ಲಿಸಿದ್ದರು.ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಅವರನ್ನು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗಾವಣೆ ಮಾಡಿಸಿಕೊಳ್ಳಲಾಗಿತ್ತು.
ಜನ ಸಾಮಾನ್ಯರ ಸಮಸ್ಯೆಗಳಿಗೆ ಸದಾ ಕಿವಿಯಾಗುವ ವೈಶಾಲಿ ಅವರಿಗೆ ಪದೋನ್ನತಿ ಸಿಕ್ಕಿರುವುದು ಅವರ ಸಹೋದ್ಯೋಗಿಗಳಿಗೆ ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಯೂ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಶಿವಮೊಗ್ಗದಲ್ಲಿಯೇ ವಿದ್ಯಾಭ್ಯಾಸ ಮಾಡಿರುವ ಮಹಿಳಾ ಅಧಿಕಾರಿಯೊಬ್ಬರು ಐಎಎಸ್‌ಗೆ ಬಡ್ತಿ ಹೊಂದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಈ ಸಂದರ್ಭದಲ್ಲಿ ಮಲೆನಾಡು ಮಿರರ್ ಅವರಿಗೆ ಅಭಿನಂದನೆ ಸಲ್ಲಿಸುತ್ತದೆ. ಮತ್ತು ಮಲೆನಾಡಿಗೆ ಅವರ ಹೆಚ್ಚಿನ ಸೇವೆ ಸಿಗಲಿ ಎಂದು ಹಾರೈಸುತ್ತದೆ.

Ad Widget

Related posts

ಜೆಡಿಎಸ್ ನಾಯಕ ಎಂ.ಶ್ರೀಕಾಂತ್‌ರತ್ತ ಕಾಂಗ್ರೆಸ್ ಚಿತ್ತ

Malenadu Mirror Desk

ಆಕ್ಸಿಜನ್, ವೆಂಟಿಲೇಟರ್ ಕೊರತೆ ಇಲ್ಲ

Malenadu Mirror Desk

ಹೊಸ ವರ್ಷದ ಶುಭಾಶಯಗಳು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.