Malenadu Mitra
ಜಿಲ್ಲೆ ಶಿವಮೊಗ್ಗ ಹೊಸನಗರ

ಹರತಾಳು ಕೆರೆ ಜೀರ್ಣೋದ್ದಾರಕ್ಕೆ ನಿರ್ಧಾರ

ರಿಪ್ಪನ್‌ಪೇಟೆ :ಹರತಾಳು ಗ್ರಾಮದ ಪಿಟಿ ಕೆರೆ ಹೂಳುತ್ತುವ ಮೂಲಕ ಕೆರೆಯ ಅಚ್ಚುಕಟ್ಟು ಪ್ರದೇಶದ ಜಮೀನುಗಳಲ್ಲಿನ ರೈತಾಪಿ ವರ್ಗಕ್ಕೆ ಅಂತರ್ಜಲ
ವೃದ್ದಿಯಾಗುವ ಮೂಲಕ ಕಾಡುಪ್ರಾಣಿ ಪಕ್ಷಿ ಸಂಕುಲಕ್ಕೆ ಹಾಗೂ ಜನಜಾನುವಾರಗಳಿಗೆ ನೀರು ದೊರೆಯುವುದರೊಂದಿಗೆ ತುಂಬಾ ಸಹಕಾರಿಯಾಗುವುದೆಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.ಅವರು ಸಮೀಪದ ಹರತಾಳು ಗ್ರಾಮದ ಪಿಟಿಕೆರೆ ಅವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಸಾರಾ ಸಂಸ್ಥೆ ಗ್ರಾಮ ಪಂಚಾಯ್ತಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಗ್ರಾ.ಪಂ.ವ್ಯಾಪ್ತಿಯ ಪಿಟಿಕೆರೆ ಜೀರ್ಣೋದ್ದಾರ ಮಾಡುವುದರ ಕುರಿತು ಸಾರ್ವಜನಿಕರ ಮತ್ತು ಅರಣ್ಯ ಕಂದಾಯ ಇತರ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿಮಾತನಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರಹೆಗ್ಗಡೆಯವರ ಕನಸಿನ ಯೋಜನೆಯಾದ “ನಮ್ಮೂರು ನಮ್ಮಕೆರೆ” ಯೋಜನೆಯಡಿಯಲ್ಲಿ ಗ್ರಾಮಾಭಿವೃದ್ದಿ ಸಂಸ್ಥೆಯಿಂದ ೧೧ ಲಕ್ಷ ರೂ
ಮೊತ್ತದಲ್ಲಿ ಹೂಳು ತೆಗೆಯಲು ಮಂಜೂರಾತಿ ನೀಡಿದ್ದು ತೆಗೆಯಲಾದ ಹೂಳನ್ನು ಗ್ರಾಮಸ್ಥರು ತಮ್ಮ ಹೊಲ ಗದ್ದೆಗಳಿಗೆ ಬಳಕೆಮಾಡಿಕೊಂಡು ಭೂಮಿಯ ಫಲವತ್ತತೆ ಹೆಚ್ಚಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಸಾಗಾಣಿಕೆ ಇನ್ನಿತರ ವೆಚ್ಚಗಳಿಗೆ ೧೧ ಲಕ್ಷ ರೂ ದೇಣಿಗೆ ಅಥವಾ ಶ್ರಮದಾನದ ಮೂಲಕ ಸಂಘ-ಸಂಸ್ಥೆಗಳು ಜವಾಬ್ದಾರಿ ವಹಿಸಿಕೊಂಡು ಗ್ರಾಮದ ಪಿಟಿ ಕೆರೆಯ ಜೀರ್ಣೋದ್ದಾರಕ್ಕೆ ಸಹಕರಿಸುವಂತೆ ಮನವಿ ಮಾಡಿದರು.
ಪಿಟಿ ಕೆರೆಯ ಹೂಳು ತಗೆದ ನಂತರದಲ್ಲಿ ಕೆರೆಯ ದಂಡೆ ಮತ್ತು ಅಂಚಿನಲ್ಲಿ ಅರಣ್ಯ ಪ್ರದೇಶದಲ್ಲಿ ಅಕೇಶಿಯಾ ಮತ್ತು ನೀಲಗಿರಿ ಹೊರತು ಪಡಿಸಿ ನೈಸರ್ಗಿಕ ವಿವಿಧ ಕಾಡುಜಾತಿಯ ಮರಗಳನ್ನು ಮತ್ತು ಹಣ್ಣಿನ ಗಿಡಗಳನ್ನು ಬೆಳಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ್ ರಾಜೀವ್,ಇಓ ಪ್ರವೀಣ್‌ಕುಮಾರ್,ಲೋಕೋಪಯೋಗಿ ಇಲಾಖೆಯ ಎಇಇ ಶೇಷಪ್ಪ,ಜೆಇ ಚಂದ್ರಶೇಖರ್,ಎಸಿಎಫ್ ಶಿವಮೂರ್ತಿ,ವಲಯ ಅರಣ್ಯಾಧಿಕಾರಿ ಕೃಷ್ಣ ಅಣ್ಣಯ್ಯಗೌಡ,ಹೊಸನಗರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಯೋಜನಾಧಿಕಾರಿ ಸಂತೋಷ,ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಕೃಷಿ ಅಧಿಕಾರಿ ಮಂಜುನಾಥ,ಸಾರಾ ಸಂಸ್ಥೆಯ ಗಣೇಶ್ ಕುಮಾರ್,ಪಿಟಿಕೆರೆ ಅಭಿವೃದ್ದಿ ಸಂಸ್ಥೆಯ ನಿರ್ದೇಶಕ ಗುರುರಾಜ್,ರಮೇಶ್,ಶಿವಮೂರ್ತಿ,ರಾಮಚಂದ್ರಹರತಾಳು,ಗ್ರಾಮ ಪಂಚಾಯ್ತಿ ನೂತನ ಸದಸ್ಯರಾದ ನಾರಿರವಿ,ಪುಪ್ಪಾ,ಸತ್ಯವತಿ,ಚಂದ್ರಪ್ಪ,ಶಿವಮೂರ್ತಿ,ಸುದೀಂದ್ರಪೂಜಾರಿ,ಬೆಳ್ಳೂರು ತಿಮ್ಮಪ್ಪ,ಕೆರೆಹಳ್ಳಿ-ಹುಂಚಾ ಹೋಬಳಿಯ ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ,ಮುಖಂಡರಾದ
ಆರ್.ಟಿ.ಗೋಪಾಲ್,ಮೆಣಸೆ ಅನಂದ,ಕೆ.ಬಿ.ಹೂವಪ್ಪ,ಇನ್ನಿತರರು ಹಾಜರಿದ್ದರು.

ಬಿಜೆಪಿಗೆ ಸೇರ್ಪಡೆ

ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬಾಳೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಲೀಲಾವತಿ ದೊಡ್ಡಯ್ಯ ಹರತಾಳು ಗ್ರಾಮದಲ್ಲಿ ಶಾಸಕ ಹರತಾಳು ಹಾಲಪ್ಪನವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.

Ad Widget

Related posts

ಶಿವಮೊಗ್ಗದಲ್ಲಿ ಮೊದಲ ಲಸಿಕೆ ಯಾರು ತಗೊಂಡ್ರು ಗೊತ್ತಾ ?

Malenadu Mirror Desk

ಬಸವಣ್ಣನವರ ಜೀವನಾದರ್ಶಗಳು ಸಾರ್ವಕಾಲಿಕ

Malenadu Mirror Desk

ಕುಂಸಿ ಪೊಲೀಸ್ ಠಾಣೆಗೆ ಜಿ.ಪರಮೇಶ್ವರ್ ದಿಢೀರ್ ಭೇಟಿ : ಅಧಿಕಾರಿಗಳಿಗೆ ಪುಲ್ ಕ್ಲಾಸ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.