Malenadu Mitra
ರಾಜ್ಯ ಶಿವಮೊಗ್ಗ

ಶಿವಮೊಗ್ಗದಲ್ಲಿ ಸ್ಮಾರ್ಟ್ ತರಗತಿ ವೀಕ್ಷಿಸಿದ ಶಿಕ್ಷಣ ಸಚಿವ

ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಂಗಳವಾರ ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ನಿರ್ಮಿಸಿರುವ ಸ್ಮಾರ್ಟ್ ಕೊಠಡಿಗಳನ್ನು ವೀಕ್ಷಿಸಿದರು.ದುರ್ಗಿಗುಡಿ ಸರಕಾರಿ ಶಾಲೆಯ ಸ್ಮಾರ್ಟ್ ಕೊಠಡಿಗೆ ಭೇಟಿ ನೀಡಿದ್ದ ಸಂದರ್ಭ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆ ಕಮೀಷನರ್ ಆದ ಚಿದಾನಂದ ವಟಾರೆ ಅವರು, ಸ್ಮಾರ್ಟ್ ಬೋರ್ಡ್‌ನಿಂದ ವಿದ್ಯಾರ್ಥಿಗಳಿಗಿರುವ ಸೌಲಭ್ಯಗಳನ್ನು ವಿವರಿಸಿದರು. ಸಚಿವ ಸುರೇಶ್ ಕುಮಾರ್ ಅವರು, ಪ್ರತಿಯೊಬ್ಬ ಮಕ್ಕಳಿಗೂ ಮುಂದುವರಿದ ತಂತ್ರಜ್ಞಾನದ ಲಾಭ ಸಿಗಬೇಕು. ಸರಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳು ಯಾವುದರಲ್ಲೂ ಹಿಂದುಳಿಯಬಾರದು. ಸರಕಾರಿ ಶಾಲೆಯಲ್ಲಿ ಅಳವಡಿಸಿರುವ ಸ್ಮಾರ್ಟ್ ಬೋರ್ಡ್ ಮತ್ತು ಸ್ಮಾರ್ಟ್ ಕೊಠಡಿಗಳಿಂದ ಎಲ್ಲರಿಗೂ ಪ್ರಯೋಜನ ಆಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌ಈಶ್ವರಪ್ಪ, ಮಹಾನಗರ ಪಾಲಿಕೆ ಮೇಯರ್ ಸುವರ್ಣಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಎಡಿಸಿ ಅನುರಾಧಾ, ಪಾಲಿಕೆ ಸದಸ್ಯ ಚನ್ನಬಸಪ್ಪ, ಆರ್ಯವೈಶ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಿ.ಎಸ್.ಅರುಣ್, ಮತ್ತಿತರರು ಇದ್ದರು,

Ad Widget

Related posts

ಸೊರಬದಲ್ಲಿ ಬಗರ್‌ಹುಕುಂ ರೈತರ ಬೃಹತ್ ಹೋರಾಟ ಪ್ರಧಾನಿ ಎದುರು ಮಾತನಾಡಲು ಧೈರ್ಯ ಇಲ್ಲದವರಿಂದ ನ್ಯಾಯ ಮರೀಚಿಕೆ ಎಂದ ಮಧು ಬಂಗಾರಪ್ಪ. ,ಹೋರಾಟ,ಜೈಲು: ಅನ್ಯಾಯ ಬಯಲು ಎಂದು ಗುಡುಗಿದ ಕಾಗೋಡು

Malenadu Mirror Desk

ಅಕೇಶಿಯಾ ವಿರುದ್ಧ ಭುಗಿಲೆದ್ದ ಆಕ್ರೋಶ

Malenadu Mirror Desk

ಮಾರ್ಗಸೂಚಿಯಂತೆ ಶಾಲೆ ಆರಂಭ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.