ರಣಭೀಕರ ಶಬ್ಧಕ್ಕೆ ಬೆಚ್ಚಿಬಿದ್ದ ಜನ , ರಸ್ತೆ ಗೋಡೆಗಳಲ್ಲಿ ಬಿರುಕು
ರಾತ್ರಿ ಅಚಾನಕ್ ಆಗಿ ಕೇಳಿದ ರಣಭೀಕರ ಶಬ್ಧದಿಂದ ಶಿವಮೊಗ್ಗ ನಗರ ಸುತ್ತಮುತ್ತಲ ಜನ ಭಯಬೀತರಾಗಿದ್ದಾತೆ. ರಾತ್ರಿ ಸುಮಾರು ೧೦,೨೫ ಕ್ಕೆ ಸಂಭವಿಸಿದ ಸಿಡಿಲಬ್ಬರದ ಶಬ್ಧಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಹಠಾತ್ ಶಬ್ಧ ಹೊರ ಬರುತ್ತಿದ್ದಂತೆ ಜನರು ಮನೆಯಿಂದ ಹೊರ ಬಂದು ಆತಂಕ ತೋಡಿಕೊಂಡರು. ಕೆಲವರು ಮನೆಯ ಕಿಟಕಿಗಳು ಅಲುಗಾಡಿದವು ಎಂದು ಹೇಳಿದರೆ ಮತ್ತೆ ಕೆಲವರು ನಮಗೆ ಒಂದು ರೀತಿಯ ವೈಬ್ರೇಷನ್ ಅನುಭವ ಆಯಿತು ಎಂದು ತಮ್ಮ ಅನುಭವ ಹಂಚಿಕೊಂಡರು.
ರಣಭೀಕರ ಶಬ್ಧಕ್ಕೆ ಅಂಜಿದ ಜನರು ತಮ್ಮ ಬಂಧುಬಾಂದವರಿಗೆ ಫೋನ್ ಮಾಡಿ ತಮಗಾದ ಆತಂಕ ಹೇಳುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬಂತು. ಶಿವಮೊಗ್ಗ ಜಿಲ್ಲೆಯದ್ಯಂತ ಈ ಭಾರೀ ಶಬ್ಧದಿಂದ ಜನರು ಆತಂಕಗೊಳ್ಳುವಂತಾಯಿತು.
ಶಿವಮೊಗ್ಗ ನಗರದಲ್ಲಿ ಹಲವು ಕಟ್ಟಡಗಳಲ್ಲಿ ಬಿರುಕು ಬಿಟ್ಟ ಅನುಭವವಾಗಿದೆ. ಪ್ರತಿಷ್ಠಿತ ಹೋಟೆಲ್‌ವೊಂದರ ಗೋಡೆಯಲ್ಲಿ ಚಕ್ಕಳಿಕೆ ಬಿದ್ದಿವೆ. ಶಿವಮೊಗ್ಗ ಸಮೀಪದ ಚೋರಡಿಯಲ್ಲಿ ಬಿ.ಎಚ್.ರಸ್ತೆಯಲ್ಲಿ ಬಿರುಕು ಬಿದ್ದಿದೆ. ಸುಮಾರು ಒಂದು ದೂರದ ವರೆಗೆ ಭೂಮಿ ಬಿರುಕು ಬಿಟ್ಟ ದೃಶ್ಯ ಕಂಡುಬಂದಿದೆ.
ಭೂಕಂಪನ:
ಶಿವಮೊಗ್ಗ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಆಗಿರುವ ಭೂಕಂಪನಕ್ಕೆ ಹಳ್ಳಿಗಳಲ್ಲಿಯೂ ಜನರು ಹೊರಗೆ ಬಂದು ತಮ್ಮ ಆತಂಕ ತೋಡಿಕೊಂಡಿದ್ದಾರೆ.