ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಸಮೀಪದ ಮೂವಳ್ಳಿಯ ಸಿದ್ದರಾಮಯ್ಯ ಅಪ್ಪಟ ಅಭಿಮಾನಿಯಾಗಿದ್ದ ವೃದ್ಧೆಯನ್ನು ಯಾರೊ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಚಿತ್ರದುರ್ಗ ಮೂಲದ ಶಾರದಮ್ಮ ಕರಿಯಣ್ಣ(೬೫) ಅವರು ಮೂವತ್ತು ವರ್ಷಗಳಿಂದ ಮೂವಳ್ಳಿಯಲ್ಲಿ ನೆಲೆಸಿದ್ದರು. ಮನೆಯ ಹಿಂದಿನ ಕಟ್ಟಿಗೆ ರಾಶಿಯಲ್ಲಿ ಶಾರಮ್ಮರ ಶವ ಪತ್ತೆಯಾಗಿದ್ದು, ಎರಡು ದಿನದ ಹಿಂದೆಯೇ ಕೊಲೆ ನಡೆದಿರುವ ಸಾಧ್ಯತೆಯಿದೆ. ವೃದ್ಧೆಯ ಕಿವಿಯಲ್ಲಿನ ಓಲೆಯನ್ನು ಕಿತ್ತುಕೊಂಡು ಹೋಗಿದ್ದು, ಯಾರೊ ದರೋಡೆಕೋರರೇ ಈ ಕೃತ್ಯ ಎಸಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಊರೂರು ತಿರುಗಿ ಕಂಬಳಿ ವ್ಯಾಪಾರ ಮಾಡುತ್ತಿದ್ದ ಶಾರದಮ್ಮ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಅಪಾರವಾದ ಗೌರವ ಮತ್ತು ಅಭಿಮಾನ ಹೊಂದಿದ್ದರು. ಇವರು ಸದಾ ಸಿದ್ದರಾಮಯ್ಯರನ್ನ ಕೊಂಡಾಡುತ್ತಿದ್ದ ಮತ್ತು ಅವರ ಆಡಳಿತವನ್ನು ಬಣ್ಣಿಸುತ್ತಿದ್ದ ಕಾರಣಕ್ಕಾಗಿಯೇ ಸುತ್ತಲಿನ ಹಳ್ಳಿಗಳಲ್ಲಿ ಜನಪ್ರಿಯರಾಗಿದ್ದರು. ಊರ ಮಂದಿ ಇವರನ್ನು ಸಿದ್ದರಾಮಣ್ಣ ಅಭಿಮಾನಿ ಶಾರದಕ್ಕ ಅಂತಾನೆ ಕರೀತಿದ್ರು. ಸ್ಥಳ ಮಹಜರು ನಡೆಸಿರುವ ಮಾಳೂರು ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
previous post