ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತಿರುವ ಎಲ್ಲ ಅಕ್ರಮ ಕಲ್ಲುಕ್ವಾರಿಗಳನ್ನು ಸೀಜ್ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಜಿಲ್ಲೆಯಲ್ಲಿ ೯೭ ಅಧಿಕೃತ ಕ್ವಾರಿಗಳಿವೆ. ಮೂರು ಅರ್ಜಿಗಳು ಸಕ್ರಮಕೋರಿ ಬಂದಿವೆ. ಅವು ಪರವಾನಗಿ ಪಡೆದರೆ ನೂರು ಕ್ವಾರಿಗಳಿಂದ ಮೆಟೀರಿಯಲ್ ಪೂರೈಕೆ ಆದರೆ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಸಾಕು. ಇನ್ನು ೭೦ ರಿಂದ ೮೦ ಕ್ವಾರಿಗಳು ಅಕ್ರಮ ಎಂದು ಗುರುತಿಸಲಾಗಿದ್ದು, ಎಲ್ಲವೂ ತಕ್ಷಣವೇ ಬಂದ್ ಆಗುತ್ತವೆ. ಅವುಗಳನ್ನು ನೋಟಿಸ್ ಕೊಟ್ಟು ವಶಕ್ಕೆ ಪಡೆಯಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಜೀವ ವೈವಿದ್ಯ ನಿಗಮದ ಅಧ್ಕ್ಷ ಅನಂತಹೆಗಡೆ ಅಶೀಸರ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಸಿಇಒ ಎಂ.ಎಲ್.ವೈಶಾಲಿ, ಡಿಎಫ್‌ಒ ಶಂಕರ್ ಮತ್ತಿತರರು ಹಾಜರಿದ್ದರು.
previous post
next post