Malenadu Mitra
ಬೇಸಾಯ ಶಿವಮೊಗ್ಗ

ಅಡಿಕೆ ಕಳ್ಳರು ಅಂದರ್, ಕದ್ದದ್ದು ಎಷ್ಟು ಗೊತ್ತಾ ?

ಶಿವಮೊಗ್ಗ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಟ್ಟು ಐದು ಅಡಿಕೆ ಕಳ್ಳತನ ಪ್ರಕರಣಗಳನ್ನು ಬೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ಹತ್ತು ಕ್ವಿಂಟಾಲ್ ಅಡಿಕೆ ಹಾಗೂ ಮೂರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ತೌಸಿಫ್ ಉಲ್ಲಾ,ಮಹಾಪೂಸ್, ಅಜೀಜ್ ಉಲ್ಲಾಖಾನ್ ಎಂಬ ತುಂಗಾನಗರ ಹಾಗೂ ಆರ್‌ಎಂಲ್ ನಗರದ ಆರೋಪಿಗಳನ್ನು ಬಂಧಿಸಲಾಗಿದೆ. ಎಸ್ಪಿ ಕೆ.ಎಂ.ಶಾಂತರಾಜ್ , ಅಡಷನಲ್ ಎಸ್ಪಿ ಶೇಖರ್, ಡಿವೈಎಸ್ಪಿ ಈಶ್ವನಾಯ್ಕ ಅವರ ಮಾರ್ಗದರ್ಶನದಲ್ಲಿ ಸಿಪಿಐ ದೀಪಕ್, ಪಿಎಸ್‌ಐ ತಿರುಮಲೇಶ್ ತಂಡ ಈ ಕಾರ್ಯಾಚರಣೆ ಮಾಡಿದೆ. ಸಿಬ್ಬಂದಿಗಳಾದ ಸಯ್ಯದ್ ಇಮ್ರಾನ್, ರಾಜು, ಗುರುನಾಯಕ್, ಲಂಕೇಶ್ ಕುಮಾರ್ ಹಾಗೂ ಅರುಣ್ ಕುಮಾರ್ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಡಸ್ಟರ್ ಕಾರು ಹಾಗೂ ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಇವರು ಕದ್ದಿರುವ ಅಡಿಕೆ ಮೌಲ್ಯ ಸುಮಾರು 4,25000 ಎಂದು ಅಂದಾಜಿಸಲಾಗಿದೆ

Ad Widget

Related posts

ಬೇಲಿಕಳ್ಳಿ ಬೀಜ ತಿಂದ 12 ಮಕ್ಕಳು ಅಸ್ವಸ್ಥ

Malenadu Mirror Desk

ಶರಾವತಿ ಸಂತ್ರಸ್ಥರ ಭೂಮಿ ಸಮಸ್ಯೆಗೆ ಕಾನೂನು ಹೋರಾಟ, ಅರಣ್ಯ,ಕಂದಾಯ ಭೂಮಿ ಜಂಟಿ ಸರ್ವೆ,
ರಾಜ್ಯಸರಕಾರದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಣಯ

Malenadu Mirror Desk

ಆನೆ ಬಿಡಾರಕ್ಕೆ ತಾರಾ ಮೆರುಗು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.