ಕುಡಿದ ಮತ್ತಲ್ಲಿ ಕೊರಿಯೊಗ್ರಾಫರ್ ಕೊಲೆ ಮಾಡಿದ ದುಷ್ಕರ್ಮಿಗಳು
ಶಿವಮೊಗ್ಗದ ಸುಂದರ ಆಶ್ರಯ ಹೋಟೆಲ್ ಬಳಿ ಕುಡಿದ ಮತ್ತಿನಲ್ಲಿ ಪಡ್ಡೆಹುಡುಗರ ಗ್ಯಾಂಗ್ ಒಂದು ಕೆಆರ್‌ಪುರಂ ರಸ್ತೆ ನಿವಾಸಿ ಕೊರಿಯೊಗ್ರಾಫರ್ ಜೀವನ್(೨೬) ಎಂಬಾತನನ್ನು ಕೊಲೆ ಮಾಡಿದೆ. ಜೀವನ್ ಮಿತ್ರ ಕೇಶವ್ ಶೆಟ್ಟಿ (೨೭)ಗೆ ಗಂಭೀರ ಗಾಯವಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬುಧವಾರ ರಾತ್ರಿ ಸುಂದರ ಆಶ್ರಯ ಹೋಟೆಲ್‌ಗೆ ಬಂದಿದ್ದ ಪಡ್ಡೆಗಳ ಗುಂಪು ಅದೇ ಹೋಟೆಲ್‌ನಲ್ಲಿ ಊಟಕ್ಕೆ ಬಂದಿದ್ದ ಕೇಶವ್ ಹಾಗೂ ಜೀವನ್ ಜತೆ ಕಿರಿಕ್ ಮಾಡಿಕೊಂಡಿದೆ. ಊಟ ಮುಗಿದ ಬಳಿಕ ಅಲ್ಲೇ ತಳ್ಳಾಡಿಕೊಂಡಿದೆ. ಜೀವನ್ ಹಾಗೂ ಕೇಶವ್ ತಪ್ಪಿಸಿಕೊಂಡು ಹೋಗುವಾಗ ಹೋಟೆಲ್‌ನ ಕೆಳಭಾಗಕ್ಕೆ ಬಂದ ಗುಂಪು ಮತ್ತೆ ಅಟ್ಯಾಕ್ ಮಾಡಿದೆ. ಈ ಸಂದರ್ಭ ಚಾಕು ಇರಿತಕ್ಕೊಳಗಾದ ಡ್ಯಾನ್ಸ್ ಮಾಸ್ಟರ್ ಜೀವನ್ ಸಾವಿಗೀಡಾಗಿದ್ದು, ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಕೇಶವ್ ಗಾಯಗೊಂಡಿದ್ದಾನೆ.
ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ದೊಡ್ಡಪೇಟೆ ಸಿಪಿಐ ವಸಂತ್‌ಕುಮಾರ್ ,ಪಿಎಸೈ ಶಂಕರ್‌ಮೂರ್ತಿ ಸ್ಥಳಕ್ಕೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
previous post
next post