Malenadu Mitra
ರಾಜ್ಯ ಶಿವಮೊಗ್ಗ

ಎಸಿಬಿ ಬಲೆಗೆ ಎಂಜಿನಿಯರ್

ಗಂಗಾ ಕಲ್ಯಾಣ ಬೋರ್‌ವೆಲ್‌ಗೆ ಟಿ.ಸಿ ಹಾಕಲು 5 ಸಾವಿರ ಲಂಚದ ಬೇಡಿಕೆ ಇಟ್ಟಿದ್ದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ.ಎಸ್.ಪ್ರಕಾಶ್ ಅವರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಭದ್ರಾವತಿ ತಾಲೂಕು ಆನವೇರಿಯ ಹರೀಶ್ ಎನ್. ಎಂಬುವರು ಪ್ರಕಾಶ್ ವಿರುದ್ಧ ಎಸಿಬಿಗೆ ದೂರು ಸಲ್ಲಿಸಿದ್ದರು. ದೂರು ದಾಖಲಿಸಿಕೊಂಡಿದ್ದ ಎಸಿಬಿ ಪೊಲೀಸರ್ ಗುರುವಾರ ಹೊಳೆಹೊನ್ನೂರಿನ ತಮ್ಮ ಕಚೇರಿಯಲಿ ಲಂಚ ಸ್ವೀಕರಿಸುವಾಗ ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಎಸಿಬಿ ಡೈವೈಎಸ್ಪಿ ಲೋಕೇಶ್ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ  ಸಿಪಿಐ ಇಮ್ರಾನ್ ಬೇಗ್, ಸಿಬ್ಬಂದಿಗಳಾದ ವಸಂತ,ರಘುನಾಯ್ಕ, ನಾಗರಾಜ್, ಸುರೇಂದ್ರ, ಯೋಗೇಶಪ್ಪ, ಹರೀಶ್, ಶ್ರೀನಿವಾಸ್ ಭಾಗವಹಿಸಿದ್ದರು.

Ad Widget

Related posts

ಮೂರ್ತಿರಾವ್ ಜನಪರ ಚಿಂತಕ: ಕಾಗೋಡು ತಿಮ್ಮಪ್ಪ

Malenadu Mirror Desk

ಅಪ್ಪ,ಇಬ್ಬರು ಮಕ್ಕಳ ಸಾವು, ಸಾವು ಬದುಕಿನ ಹೋರಾಟದಲ್ಲಿ ತಾಯಿ, ತಬ್ಬಲಿಯಾದ ಹೆಣ್ಣು ಮಗಳು, ದೇವಾ ಈ ಸಾವು ನ್ಯಾಯವೆ ?

Malenadu Mirror Desk

ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವ ಶಿಕ್ಷಣ ನೀತಿಯನ್ನು ಅಧ್ಯಯನ ಮಾಡಿ ಅನುಷ್ಟಾನಕ್ಕೆ ತರಬೇಕು : ಕೆ.ಎಸ್.ಈಶ್ವರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.