Malenadu Mitra
ಬೇಸಾಯ ರಾಜ್ಯ ಶಿವಮೊಗ್ಗ

ಬಿಜೆಪಿ ಅಡಕೆ ಬೆಳೆಗಾರರ ಕ್ಷಮೆ ಕೇಳಲಿ

ಅಡಕೆ ಮತ್ತು ವೀಳ್ಯದೆಲೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ವೆಬ್‌ಸೈಟ್‌ನಲ್ಲಿ ಮಾದಕ ವಸ್ತುಗಳ ಪಟ್ಟಿಯಲ್ಲಿ ಸೇರಿಸುವ ಮೂಲಕ ರಾಜ್ಯ ಸರಕಾರ ಅಡಕೆ ಬೆಳೆಗಾರರಿಗೆ ದ್ರೋಹ ಬಗೆದಿದೆ ಎಂದು ಅಡಕೆಬೆಳೆಗಾರರ ಸಂಘ ಹೇಳಿದೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎ.ರಮೇಶ್ ಹೆಗ್ಡೆ ಅವರ, ಬಿಜೆಪಿ ದೇಶ ಸಂಸ್ಕೃತಿ ಎಂದು ಬಾಯಲ್ಲಿ ಹೇಳುತ್ತದೆ. ಆದರೆ ದೇಶದ ಜನ ಪೂಜನೀಯ ಭಾವನೆ ಹೊಂದಿರುವ ಅಡಕೆ ಮತ್ತು ವೀಳ್ಯದೆಲೆಗೆ ಮಾದಕ ವಸ್ತುವಿನ ಪಟ್ಟ ನೀಡಲಾಗಿದೆ. ಮುಖ್ಯಮಂತ್ರಿ ಮತ್ತು ಬಿಜೆಪಿ ಕೂಡಲೇ ಕ್ಷಮೆ ಕೇಳಬೇಕು. ಚುನಾವಣೆ ಬಂದಾಗ ಮಾತ್ರ ಅಡಕೆ ಬೆಳೆಗಾರರ ಬಗ್ಗೆ ಮಾತನಾಡುವ ಬಿಜೆಪಿ ಅಧಿಕಾರದಲ್ಲಿರುವಾಗ ಬೆಳೆಗಾರರನ್ನು ನಾಶ ಮಾಡಲು ಹೊರಟಿದೆ. ಕೇಂದ್ರ ಹಾಗೂ ರಾಜ್ಯದಲ್ಲಿರುವ ಈ ಸರಕಾರಗಳಿಗೆ ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬುದನ್ನು ನಿರೂಪಿಸುವ ಪ್ರಯತ್ನ ಮಾಡುತಿಲ್ಲ. ದೇಶ ಹಾಗೂ ರಾಜ್ಯದ ಅಡಕೆ ಬೆಳೆಗಾರರಿಗೆ ಇವರು ಮೋಸ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದರು.
ಸುಳ್ಳು ಹೇಳಿದ ಅಮಿತ್ ಶಾ:
ಚುನಾವಣೆ ಸಂದರ್ಭ ಶಿವಮೊಗ್ಗಕ್ಕೆ ಬಂದಿದ್ದ ಅಮಿತ್ ಶಾ ಅವರು ಅಡಕೆ ಸಂಶೋಧನಾ ಕೇಂದ್ರ ಆರಂಭಿಸುವುದಾಗಿ ಹೇಳಿದ್ದರು. ಆದರೆ ಅಡಕೆ ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲೂ ಇವರಿಗೆ ಆಗಿಲ್ಲ. ಇತ್ತೀಚೆಗೆ ಭದ್ರಾವತಿಗೆ ಬಂದಿದ್ದ ಅವರು ಅಡಕೆ ಸಂಶೋಧನೆ ಕೇಂದ್ರದ ಬಗ್ಗೆ ಮಾತೇ ಆಡಿಲ್ಲ. ಬಿಜೆಪಿ ನಾಯಕರು,ಮುಖ್ಯಮಂತ್ರಿಗಳೂ ಆ ಬಗ್ಗೆ ಕೇಂದ್ರ ಸಚಿವರ ಗಮನ ಸೆಳೆಯಲಿಲ್ಲ ಎಂದು ರಮೇಶ್ ಹೆಗ್ಡೆ ದೂರಿದರು.


ಸಂಸತ್ತಿನಲ್ಲಿ ರಾಘವೇಂದ್ರ ಮಾತಾಡಲಿ:


ಅಡಕೆ ಬೆಳೆಗಾರರ ಜಿಲ್ಲೆಯನ್ನು ಪ್ರತಿನಿಧಿಸುವ ಶಿವಮೊಗ್ಗ ಸಂಸದ ರಾಘವೇಂದ್ರ ಅವರು ಪ್ರಸ್ತುತ ನಡೆಯುತ್ತಿರುವ ಸಂಸತ್ ಅದಿವೇಶನದಲ್ಲಿ ಒಮ್ಮೆಯಾದರೂ ಅಡಕೆ ಬೆಳೆಗಾರರ ಸಮಸ್ಯೆ ಕುರಿತು ಮಾತನಾಡಬೇಕು ಎಂದು ರಮೇಶ್ ಹೆಗ್ಡೆ ಆಗ್ರಹಿಸಿದರು. ಚುನಾವಣೆ ಸಂದರ್ಭದಲ್ಲಿ ಅಡಕೆ ಬೆಳೆಗಾರರಿಗೆ ಸುಳ್ಳು ಹೇಳಿ ಗೆದ್ದು ಬರುವ ಬಿಜೆಪಿ, ಈ ಬೆಳೆಗಾರರ ಬಗ್ಗೆ ಸಂಸತ್ತಿನಲ್ಲಿ ಯಾವ ಕಾಳಜಿಯನ್ನೂ ತೋರುವುದಿಲ್ಲ. ಆದ್ದರಿಂದ ರಾಘವೇಂದ್ರ ಅವರು ಸಂಸತ್ತಿನಲ್ಲಿ ಅಡಕೆ ಬೆಳೆಗಾರರ ಸಮಸ್ಯೆಯನ್ನು ಸಂಸತ್ತಿನಲ್ಲಿ ಚರ್ಚಿಸಬೇಕು ಎಂದು ಅವರು ಮನವಿ ಮಾಡಿದರು.ರಮೇಶ್ ಇಕ್ಕೇರಿ, ಡಿ. ಸಿ ಪ್ರವೀಣ್ ಮತ್ತಿತರರಿದ್ದರು

Ad Widget

Related posts

ಕಾಲಮಿತಿಯೊಳಗೆ ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ: ಸಿ.ಸಿ.ಪಾಟಿಲ್

Malenadu Mirror Desk

ಶಿವಮೊಗ್ಗದಲ್ಲಿ ಗಲಾಟೆ ಮಾಡ್ಸೋದೆ ಈಶ್ವರಪ್ಪ: ಸಿದ್ದರಾಮಯ್ಯ ಆರೋಪ

Malenadu Mirror Desk

ಕೊರೋನ ನಿಯಂತ್ರಣದಲ್ಲಿ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.