ಶಿವಮೊಗ್ಗದ ಗಾಡಿಕೊಪ್ಪದಲ್ಲಿರುವ ಗಂಧರ್ವ ಡೆಲೆಕೆಸಿ ಸಮೀಪ ರಾತ್ರಿ 10.45ಕ್ಕೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಮತ್ತೊಬ್ಬ ತೀವ್ರ ಗಾಯಗೊಂಡಿದ್ದಾರೆ. ಎಕ್ಸೆಲ್ ಗಾಡಿಗೆ ಕಾರು ಡಿಕ್ಕಿ ಹೊಡೆದಿದ್ದು, ಒಬ್ಬಾತ ಸ್ಥಳದಲ್ಲಿಯೇ ಸಾವಿಗೀಡಾದರೆ, ಮತ್ತೊಬ್ಬ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ಸ್ಥಳದಲ್ಲಿ ನಾಗೇಶ್ ಟಿ ಹಾಗೂ ನಾಗಭೂಷಣ್ ಎನ್ನುವವರ ಗಾಡಿ ದಾಖಲೆ ಸಿಕ್ಕಿದ್ದು, ಹುಂಚದಕಟ್ಟೆ ಸಮೀಪದ ಜೋಗಿಸರ ಎಂದು ವಿಳಾಸ ನಮೂದಾಗಿದೆ.
ಅಪಘಾತದಲ್ಲಿ ದ್ವಿಚಕ್ರ ವಾಹನ ಗುರುತು ಸಿಗದಂತಾಗಿದೆ. ಸಾಗರ ಕಡೆಯಿಂದ ಬಂದ ಕಾರು ಎಕ್ಸೆಲ್ ಗಾಡಿಗೆ ಡಿಕ್ಕಿ ಹೊಡೆಯಿತೆಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ. ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಸಿಗಬೇಕಿದೆ. ಗಾಡಿಕೊಪ್ಪ ಭಾಗದಲ್ಲಿ ಇತ್ತಿಚೆಗೆ ಅಪಘಾತಗಳ ಸಂಖ್ಯೆ ಹೆಚ್ಚುತಿದ್ದ ರಸ್ತೆ ಕಾಮಗಾರಿ ಪೂರ್ಣವಾಗದ ಕಾರಣ ವಾಹನ ಸವಾರರಿಗೆ ತುಂಬಾ ಗೊಂದಲ ನಿರ್ಮಾಣವಾಗುತ್ತದೆ.
previous post