Malenadu Mitra
ಸಾಹಿತ್ಯ ಸೊರಬ

ಫೆ.೧೦ ಕ್ಕೆ ಸೊರಬ ಸಾಹಿತ್ಯ ಸಮ್ಮೇಳನ

ಸೊರಬ ತಾಲೂಕು ಜಡೆಯಲ್ಲಿ ನಡೆಯುವ ಸೊರಬ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ನಾಡಿಗೆ ಹೊಸ ಸಂದೇಶ ನೀಡುವಂತೆ ನಡೆಯುವ ಜತೆಗೆ ಯಶಸ್ಸು ಕಾಣಬೇಕು ಎಂದು ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾ ಮಠದ ಡಾ.ಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಕಸಾಪ ವತಿಯಿಂದ ಬುಧವಾರ ಹಮ್ಮಿಕೊಂಡ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕಸಾಪ ಅಧ್ಯಕ್ಷ ಮಧುರಾಯ್ ಜಿ.ಶೇಟ್ ಮಾತನಾಡಿ, ತಾಲೂಕು ಸಾಹಿತ್ಯ ಸಮ್ಮೇಳನವನ್ನು ಯಾವುದೇ ವ್ಯತ್ಯಾಸ ಬರದಂತೆ ನಡೆಸುವ ಜವಬ್ದಾರಿ ಎಲ್ಲರ ಮೇಲಿದೆ. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಗಳು ನಡೆಯುವುದಕ್ಕೆ ಮುಂಜಾಗೃತಿ ವಹಿಸಬೇಕು ಎಂದರು.
ಸಮ್ಮೇಳನದ ಸಂಚಾಲಕ ವಿಜೇಂದ್ರ ಕುಮಾರ್ ಮಾತನಾಡಿದರು.
ಕಸಾಪ ಜಡೆ ಘಟಕದ ಅಧ್ಯಕ್ಷ ಮೃತ್ಯುಂಜಯಗೌಡ ಸ್ವಾಗತಿಸಿ, ಮಾತನಾಡಿದರು. ಉಷಾ ಪ್ರಾರ್ಥಿಸಿ, ನಿರೂಪಿಸಿದರು.
ಜಿ.ಪಂ ಸದಸ್ಯ ಶಿವಲಿಂಗೇಗೌಡ, ಕಸಾಪ ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಶಾಂತ ಹುನವಳ್ಳಿ, ಕೋಶಾಧ್ಯಕ್ಷ ಮಹೇಶ್ ಗೋಖಲೆ, ಉಳವಿ ಘಟಕದ ಅಧ್ಯಕ್ಷ ಈ. ಶಿವಕುಮಾರ್, ಕಜಾಪ ಅಧ್ಯಕ್ಷ ಎಸ್.ಎಂ.ನೀಲೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಸಿ.ಶಿವಕುಮಾರ್, ಕೋಟೆ ಬಸವಂತಪ್ಪ, ನಿಂಗಪ್ಪ ದೊಡ್ಡೇರಿ, ವಿನಯ್ ಶೆರ್ವಿ, ಬಾಬಣ್ಣ, ಸುರೇಶ್, ಅಶೋಕ್ ಪಾಟೀಲ್, ಶಿವಾನಂದ್, ಪ್ರದೀಪ್ ಇತರರಿದ್ದರು.

ಡಾ.ಎಂ.ಕೆ.ಭಟ್ ಸರ್ವಾಧ್ಯಕ್ಷರು:


ತಾಲೂಕಿನ ಜಡೆ ಸಂಸ್ಥಾನ ಮಠದ ಶ್ರೀ ಸಿದ್ಧವೃಷಬೇಂದ್ರ ಸಭಾಭವನದಲ್ಲಿ ಫೆ.೧೦ರಂದು ಸೊರಬ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಸರ್ವಾಧ್ಯಕ್ಷರಾಗಿ ವೈದ್ಯರು ಹಾಗೂ ಆರೋಗ್ಯ ಸಂಪತ್ತು ಪತ್ರಿಕಾ ಸಂಪಾದಕರಾದ ಡಾ.ಎಂ.ಕೆ.ಭಟ್ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಲಿದ್ದಾರೆ. ಬೆಳಗ್ಗೆ ೮-೩೦ಕ್ಕೆ ತಾಯಿ ಭುವನೇಶ್ವರಿ ಮೆರವಣಿಗೆಗೆ ಜಿ.ಪಂ ಸದಸ್ಯ ಶಿವಲಿಂಗೇಗೌಡ ಚಾಲನೆ ನೀಡಲಿದ್ದಾರೆ. ೧೦ ಗಂಟೆಗೆ ಸಮ್ಮೇಳನವನ್ನು ಶಾಸಕರು ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಡಿ.ಬಿ.ಶಂಕರಪ್ಪ ಆಶಯ ನುಡಿ ನುಡಿಯುವರು. ದಿವ್ಯ ಸಾನ್ನಿದ್ಯವನ್ನು ಡಾ.ಮಹಾಂತ ಸ್ವಾಮೀಜಿ ವಹಿಸುವರು. ಮಧ್ಯಾಹ್ನ ೨ ಗಂಟೆಗೆ ಮೊದಲ ಗೋಷ್ಠಿ ನಡೆಯಲಿದ್ದು ಶ್ರೀ ಸಿದ್ಧವೃಷಬೇಂದ್ರ ಸಂಸ್ಥಾನ ಮಠ ನಡೆದು ಬಂದ ದಾರಿ ಮತ್ತು ಜಡೆ ಸುತ್ತಮುತ್ತಲಿನ ಪರಿಸರ ಬಗ್ಗೆ ನಿವೃತ್ತ ಪ್ರಾಂಶುಪಾಲ ಜಯಶೀಲಪ್ಪಗೌಡ ಅವರು, ಸಮ್ಮೆಳನದ ಸರ್ವಾಧ್ಯಕ್ಷರಾದ ಡಾ.ಎಂ.ಕೆ.ಭಟ್ ಅವರ ಬದುಕು-ಬರಹದ ಬಗ್ಗೆ ಉಪನ್ಯಾಸಕ ಉಮೇಶ್ ಬಿಚ್ಚುಗತ್ತಿ ಅವರು ವಿಷಯ ಮಂಡನೆ ಮಾಡುವರು. ಮಧ್ಯಾಹ್ನ ೨ ಗಂಟೆಗೆ ಕವಿಗೋಷ್ಠಿ ನಡೆಯಲಿದೆ. ೩.೧೫ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ತಾಲೂಕು ಕಸಾಪ ಅಧ್ಯಕ್ಷ ಮಧುರಾಯ್ ಜಿ.ಶೇಟ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಂದರ್‌ರಾಜ್ ಸಮಾರೋಪ ಭಾಷಣವನ್ನು, ಡಾ.ಎಂ.ಕೆ.ಭಟ್ ಸರ್ವಾಧ್ಯಕ್ಷರ ನುಡಿಗಳನ್ನಾಡಲಿದ್ದಾರೆ.

Ad Widget

Related posts

ಚಂದ್ರಗುತ್ತಿ ರೇಣುಕಾಂಬೆ ರಥೋತ್ಸವ ಹೊರಗಿನವರು ಬಾರದೆ ಸೊರಗಿದ ಸಂಭ್ರಮ

Malenadu Mirror Desk

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ತೋಟ ಬೆಂಕಿಗೆ ಆಹುತಿ

Malenadu Mirror Desk

ಮೆಗ್ಗಾನ್‍ನಲ್ಲಿ ಸತ್ತವರ ಸಂಖ್ಯೆ ಮುಚ್ಚಿಡಲಾಗುತ್ತಿದೆಯೇ ? ಎರಡು ದಿನಗಳಲ್ಲಿ 41 ಸಾವು ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.