ಶಿಕಾರಿಪುರಕ್ಕೆ ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಕಾರಿ ಬಸ್ ಸೇವೆ ಆರಂಭಿಸಬೇಕೆಂದು ಅಲ್ಲಿನ ವಿದ್ಯಾರ್ಥಿಗಳು ಶಿವಮೊಗ್ಗಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಶಿಕಾರಿಪುರದಿಂದ ಸರಕಾರಿ ಬಸ್‌ಗಳ ಸೇವೆ ಕಡಿಮೆ ಇದೆ. ಜಿಲ್ಲೆಯ ವಿವಿಧ ಭಾಗಗಳಿಗೆ ವಿದ್ಯಾಭ್ಯಾಸಕ್ಕೆ ಹೋಗುವ ಮಕ್ಕಳಿಗೆ ತೊಂದರೆಯಾಗಿದೆ. ಖಾಸಗಿ ಬಸ್‌ಗಳಿಗೆ ದುಬಾರಿ ಹಣ ಕೊಟ್ಟು ಪ್ರಯಾಣ ಮಾಡುವುದು ಕಷ್ಟಕರವಾಗಿದೆ. ಸರಕಾರಿ ಬಸ್ ಸಂಪರ್ಕ ಇದ್ದರೆ ಪಾಸ್ ಮಾಡಿಕೊಂಡು ಓಡಾಟ ಮಾಡಬಹುದು ಆದ್ದರಿಂದ ಶಾಲಾ ಕಾಲೇಜು ಸಮಯಕ್ಕೆ ಅನುಕೂಲವಾಗುವಂತೆ ಶಿವಮೊಗ್ಗದಿಂದ ಶಿಕಾರಿಪು ಮತ್ತು ಶಿಕಾರಿಪುರದಿಂದ ಶಿವಮೊಗ್ಗ ಸರಕಾರಿ ಬಸ್ ಸೇವೆ ನೀಡಬೇಕೆಂದು ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
previous post
next post