Malenadu Mitra
ರಾಜ್ಯ ಶಿವಮೊಗ್ಗ

ಈಶ್ವರಪ್ಪರಿಗೆ ಸರಕಾರಿ ನೌಕರರ ಹೊಟ್ಟೆ ಮೇಲೇಕೆ ಕಣ್ಣು ?

ಯಾವುದೇ ವ್ಯಕ್ತಿ, ಕುಟುಂಬ ಸುಖಿಯಾಗಿರಬೇಕಾದರೆ ಆರೋಗ್ಯ ಮುಖ್ಯ. ಸದೃಢ ಆರೋಗ್ಯಕ್ಕಾಗಿ ದೈಹಿಕ ಕಸರತ್ತು ಅಗತ್ಯವಾಗಿ ಬೇಕು. ಅದರಲ್ಲೂ ಸರಕಾರಿ ನೌಕರರಿಗೆ ಅತ್ಯವಶ್ಯಕವಾಗಿ ಬೇಕು ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದ ನೆಹರೂ ಮೈದಾನದಲ್ಲಿ ರಾಜ್ಯ ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕ ಸೇವೆಯಲ್ಲಿರುವ ಸರಕಾರಿ ನೌಕರರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ವ್ಯಾಯಾಮ ಮಾಡಬೇಕು. ಕೋವಿಡ್ ಮತ್ತು ನೆರೆ ಬಂದಂತಹ ಸಮಯದಲ್ಲಿ ಸರಕಾರಿ ನೌಕರರು ಮಾಡಿರುವ ಸೇವೆ ಅನನ್ಯವಾದುದು ಎಂದು ಹೇಳಿದರು.
ರಾಜ್ಯ ಪ್ರವಾಸದ ಸಂದರ್ಭದಲ್ಲಿ ಯಾವುದೇ ಜಿಲ್ಲೆಯಲ್ಲಿ ದಢೂತಿ ಹೊಟ್ಟೆಯ ಅಧಿಕಾರಿಗಳು ಕಂಡರೆ ಅವರಿಗೆ ನಿಮ್ಮ ಹೊಟ್ಟೆ ಕಡಿಮೆ ಮಾಡಿಕೊಳ್ಳಿ ಎಂದು ನಾನು ಸಲಹೆ ನೀಡುತ್ತೇನೆ. ಯಾಕೆಂದರೆ ಹೊಟ್ಟೆ ಬರುವುದು ಆರೋಗ್ಯದ ಲಕ್ಷಣ ಅಲ್ಲ. ಕೆಲವರು ನನ್ನ ಸಲಹೆಯನ್ನು ಸ್ವೀಕಾರ ಮಾಡಿದ್ದಾರೆ. ಮರುಪ್ರವಾಸದ ವೇಳೆ ಅವರು ಸ್ಲಿಮ್ ಆಗಿರುವ ಉದಾಹರಣೆಗಳಿವೆ ಎಂದು ಈಶ್ವರಪ್ಪ ಹೇಳಿದರು.
ಯಾವುದೇ ಸರಕಾರ ನೌಕರ ತನ್ನ ಅಶಿಸ್ತಿನ ಕಾರಣಕ್ಕೆ ಅನಾರೋಗ್ಯ ಪೀಡಿತನಾಗಿ ಏನಾದರೂ ಅನಾಹುತ ಆದರೆ ಕುಟುಂಬಕ್ಕೆ ತೊಂದರೆಯಾಗುತ್ತದೆ ಎನ್ನುವ ಕಾಳಜಿಯಿಂದ ನಾನು ಈ ರೀತಿಯ ಸಲಹೆ ನೀಡುವುದನ್ನು ರೂಡಿ ಮಾಡಿಕೊಂಡಿದ್ದೇನೆ. ಶಿವಮೊಗ್ಗ ಜಿಲ್ಲೆಯ ನಾಲ್ಕು ಸಾವಿರ ಕ್ರೀಡಾಪಟುಗಳು ಇಲ್ಲಿ ಬಂದಿದ್ದೀರಿ, ಕ್ರೀಡಾ ಸ್ಫೂರ್ತಿಯಿಂದ ಆಟವಾಡಿ. ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಸರಕಾರದ ಜತೆ ಕೈಜೋಡಿಸಿ ಶ್ರಮಿಸಿದ ನೌಕರರ ಶ್ರಮ ಶ್ಲಾಘನೀಯ ಎಂದು ಸಚಿವರು ಹೇಳಿದರು.
ಸಂಸದ ಬಿ.ವೈ ರಾಘವೇಂದ್ರ ಅವರು ಕ್ರೀಡಾ ಜ್ಯೋತಿ ಸ್ವೀಕರಿಸಿ ಶುಭಹಾರೈಸಿದರು. ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಧ್ವಜಾರೋಹಣ ನೆರವೇರಿಸಿದರು. ಕೆಸ್‌ಎಸ್‌ಐಡಿಸಿ ಉಪಾಧ್ಯಕ್ಷ ದತ್ತಾತ್ರಿ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಸಿಇಒ ಎಂ.ಎಲ್.ವೈಶಾಲಿ, ಮೇಯರ್ ಸುವರ್ಣ ಶಂಕರ್, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಆಟವಾಡಿಸುವ ಷಡಾಕ್ಷರಿ !


ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ರಾಜಕಾಣಿಗಳನ್ನು ಆಟವಾಡಿಸುತ್ತರಂತೆ!, ಇದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ ಮಾತು. ಕ್ರೀಡಾ ಕೂಟ ಉದ್ಘಾಟಿಸಿದ ಅವರು, ಷಡಾಕ್ಷರಿ ಆಟವೇ ಬೇರೆ ಎಂದು ತಮಾಷೆ ಮಾಡಿದ ಸಚಿವರು, ರಾಜ್ಯದ ಎಲ್ಲಾ ಸರಕಾರಿ ನೌಕರರನ್ನು ಷಡಾಕ್ಷರಿ ಆಟವಾಡಿಸುತ್ತಾರೆ. ನೌಕರರನ್ನು ಮಾತ್ರವಲ್ಲ, ಅಧಿಕಾರಿಗಳು ಹಾಗೂ ರಾಜಕಾರಣಿಗಳನ್ನೂ ಆಟವಾಡಿಸುತ್ತಾರೆ ಎಂದು ಜೋಕ್ ಮಾಡುತ್ತಲೇ ಕಾಲೆಳೆದರು.

Ad Widget

Related posts

ವಿಕೃತಿ ತೊಡೆಯಲು ಸಾಮಾಜಿಕರಣ ಅಗತ್ಯ : ಡಿಡಿಪಿಐ ಬಸವರಾಜಪ್ಪ

Malenadu Mirror Desk

ಅಭಿವೃದ್ಧಿ ಕಾರ್ಯಗಳಲ್ಲಿ ಜನರ ಸಹಭಾಗಿತ್ವ ಅಗತ್ಯ: ಸಚಿವ ಕೆ.ಎಸ್.ಈಶ್ವರಪ್ಪ

Malenadu Mirror Desk

ಜೆಡಿಎಸ್‌ಗೆ ಮತ್ತೆ ಎಂ. ಶ್ರೀಕಾಂತ್ ಅಧ್ಯಕ್ಷ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.