ಬಿಜೆಪಿ ಸರ್ಕಾರ ಶ್ರೀಮಂತರ ಪರ ಆಡಳಿತ ನಡೆಸುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆರೋಪಿಸಿದರು.
ಅವರು ಇಂದು ಗೋಪಿವೃತ್ತದಲ್ಲಿ ರೈತ ವಿರೋಧಿ ಕಾಯ್ದೆಗಳ ವಿರುದ್ಧ ನಡೆದ ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಈ ಪ್ರತಿಭಟನೆ ಎಚ್ಚರಿಕೆಯ ಗಂಟೆಯಾಗಲಿದೆ. ಕೇಂದ್ರ ಸರ್ಕಾರ ರೈತರ ವಿರುದ್ಧ ಸಮರ ಸಾರಿದಂತಿದೆ. ರೈತ ವಿರೋಧಿ ಕಾಯ್ದೆಗಳ ಮೂಲಕ ಅನ್ನದಾತನ ಕತ್ತು ಹಿಸುಕಲು ಹೊರಟಿದೆ ಎಂದು ದೂರಿದರು.
ಅಧಿಕಾರಕ್ಕೆ ಬರುವಾಗ ಇಲ್ಲದ ಭರವಸೆ, ಆಶ್ವಾಸನೆ ನೀಡಿ ಆಡಳಿತಕ್ಕೆ ಬಂದ ಬಿಜೆಪಿ ಸರ್ಕಾರ ಈಗ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದೆ. ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ಸರ್ಕಾರವನ್ನು ಕಿತ್ತೊಗೆಯಲು ಹೋರಾಟ ಅನಿವಾರ್ಯವೆಂದು ಹೇಳಿದರು. ಹಿಂದುಳಿದವರು ಬಡವರಿಗೆ ರಾಜಕೀಯ ಸಾಮಾಜಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಮಾನತೆ ಸಿಗಬೇಕು ಆದರೆ ಈ ಸರ್ಕಾರದಲ್ಲಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದು, ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ಶ್ರೀಮಂತರ ಪರ ಆಡಳಿತ ನಡೆಸುತ್ತಿರುವ ಸರ್ಕಾರ ಅಂತಹವರು ಅನುಕೂಲಕ್ಕಾಗಿ ಕಾನೂನು ತರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ಶಿವಪ್ಪನಾಯಕ ಪ್ರತಿಮೆಯ ಬಳಿ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಿ.ಹೆಚ್.ರಸ್ತೆ, ಎ.ಎ.ಸರ್ಕಲ್, ನೆಹರೂ ರಸ್ತೆ ಮಾರ್ಗವಾಗಿ ಗೋಪಿವೃತ್ತದಲ್ಲಿ ಸಮಾವೇಶ ಗೊಂಡಿತು. ಮೆರವಣಿಗೆಯ ಉದ್ದಕ್ಕೂ ಪ್ರತಿಭಟನಾಕಾರರು ರೈತ ವಿರೋಧಿ ಕಾಯ್ದೆಗಳ ವಿರುದ್ಧ ಮತ್ತು ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಬಿಜೆಪಿ ಹಠಾವೋ ದೇಶ್ ಬಚಾವೋ ಎಂಬ ಘೋಷಣೆ ಕೂಗಿದರು.
ಕೇಂದ್ರ ಸರ್ಕಾರ ಚರ್ಚೆಗೆ ಅವಕಾಶ ನೀಡದೆ ಸುಗ್ರೀವಾಜ್ಞೆಯ ಮೂಲಕ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಈ ಕಾಯ್ದೆಗಳ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ತಡೆಯುವ ಹುನ್ನಾರವನ್ನು ಕೇಂಸರ್ಕಾರ ರೈತ ವಿರೋಧಿ, ಜನ ವಿರೋಧಿ ಕಾಯ್ದೆ ಹಿಂಪಡೆಯಬೇಕು. ಬೆಲೆ ಏರಿಕೆ ತಡೆಯಬೇಕು. ಕಸ್ತೂರಿ ರಂಗನ್ ವರದಿ ಜಾರಿಗೆ ತರಬಾರದು. ಬಗರ್‌ಹುಕ್ಕುಂ ಸಾಗುವಳಿದಾರರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಕುಮಾರಿ, ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು, ಜಿ.ಪಂ. ಉಪಾಧ್ಯಕ್ಷೆ ವೇದ ವಿಜಯ್‌ಕುಮಾರ್, ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ಮುಖಂಡರುಗಳಾದ ವೈ.ಹೆಚ್. ನಾಗರಾಜ್, ತಿ.ನಾ.ಶ್ರೀನಿವಾಸ್, ವಿಜಯಲಕ್ಷ್ಮೀ ಪಾಟೀಲ್, ಇಸ್ಮಾಯಿಲ್‌ಖಾನ್, ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್, ಮಂಜುಳ ಶಿವಣ್ಣ, ಯಮುನಾ ರಂಗೇಗೌಡ, ಕೆ. ದೇವೆಂದ್ರಪ್ಪ ಮುಂತಾದವರಿದ್ದರು.ದ್ರ ಸರ್ಕಾರ ಮಾಡುತ್ತಿರುವುದು ಖಂಡನೀಯ. ಕೂಡಲೇ ಈ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು. ಬಗರ್‌ಹುಕ್ಕುಂ ಮತ್ತು ಕಸ್ತೂರಿ ರಂಗನ್ ವರದಿಯ ಬಗ್ಗೆ ಸರ್ಕಾರದ ವೈಫಲ್ಯವನ್ನು ಪ್ರತಿಭಟನಾಕಾರರು ಖಂಡಿಸಿದರು.
ಗಾಂಜಾ ದಂಧೆ ನಡೆಸುವವರ ಜಾಮೀನು ರದ್ದು
ಗಾಂಜಾ ಮಾರಾಟವನ್ನು ಸೈಡ್ ಬ್ಯುಸಿನೆಸ್ ಮಾಡಿಕೊಂಡು ದಂಧೆ ನಡೆಸುವವರ ಜಾಮೀನು ರದ್ದು ಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಎಂ.ಶಾಂತರಾಜ್ ಎಚ್ಚರಿಕೆ ನೀಡಿದರು.
ಶಿವಮೊಗ್ಗ ಉಪವಿಭಾಗದ ೮೯ ಗಾಂಜಾ ಮಾರಟಗಾರರ ಪೆರೇಡ್ ನಡೆಸಿ ಯಾವುದೇ ಗಾಂಜಾ ಪ್ರಕರಣ ಕಂಡು ಬಂದಲ್ಲಿ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ. ಇಂತಹ ಕೃತ್ಯಗಳಲ್ಲಿ ತೊಡಗಿಕೊಳ್ಳಬಾರದು ಎಂದು ತಾಕೀತು ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಪಿ.ಶಾಂತರಾಜ್ ಸಾಮಾಜಿಕ ಪಿಡುಗಾಗಿರುವ ಗಾಂಜಾವನ್ನು ಮಾರಾಟ ಮಾಡಬಾರದು. ಮಾಡುವವರ ಬಗ್ಗೆ ಮಾಹಿತಿ ಇದ್ದರೆ ತಿಳಿಸಬೇಕು ಎಂದು ಹೇಳಿದರು.
ನಿನ್ನೆ ಭದ್ರಾವತಿ ಉಪವಿಭಾಗದಲ್ಲಿ ೩೨ ಗಾಂಜಾ ಮಾರಾಟಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಭದ್ರಾವತಿ ಡಿ.ವೈ.ಎಸ್.ಪಿ. ನೇತೃತ್ವದಲ್ಲಿ ಈ ಹಿಂದೆ ಕೇಸು ದಾಖಲಾಗಿದ್ದವರ ಕರೆಸಿ ಇಂತಹ ಕೃತ್ಯಗಳಲ್ಲಿ ತೊಡಗಿಕೊಳ್ಳದಂತೆ ತಿಳಿಸಲಾಗಿದೆ. ಶಿವಮೊಗ್ಗ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಾಸೀನ್ ಎಂಬುವನನ್ನು ಬಂಧಿಸಿ ೭೦೦ ಗ್ರಾಂ. ಗಾಂಜಾ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಗಾಂಜಾ ಮಾರಾಟದ ಬಗ್ಗೆ ಯಾವುದೇ ಮಾಹಿತಿಯಿದ್ದಲ್ಲಿ ತಮ್ಮ ಮೊ:೯೪೮೦೮ ೦೩೩೦೧ ಗೆ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿದರು.
ಉಚಿತ ಬಂಜೆತನ ತಪಾಸಣೆ ಹಾಗೂ ಸಮಾಲೋಚನೆ
ರಾಜೇಂದ್ರ ನಗರದಲ್ಲಿರುವ ನಿರ್ಮಲ ಆಸ್ಪತ್ರೆಯಲ್ಲಿ ಪ್ರನಾಳ ಶಿಶು ಕೇಂದ್ರದಿಂದ ಉಚಿತ ಬಂಜೆತನ ತಪಾಸಣೆ ಹಾಗೂ ಸಮಾಲೋಚನೆ ಶಿಬಿರವನ್ನು ಫೆ.೧೪ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆಯವರೆಗೆ ಆಸ್ಪತ್ರೆಯ ಆವಣರದಲ್ಲಿ ಆಯೋಜಿಸಲಾಗಿದೆ ಎಂದು ಡಾ.ಕೆ.ವಿ.ಪಲ್ಲವಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪ್ರನಾಳ ಶಿಶು ಕೇಂದ್ರ (ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್) ನಿರ್ಮಲ ಮಡಿಲು ಹೆಸರಿನಲ್ಲಿ ಸ್ಥಾಪನೆಯಾಗಿ ೩ ವರ್ಷಗಳಾಗಿವೆ. ೩ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಈ ಸಮಾಲೋಚನೆ ಶಿಬಿರ ನಡೆಯುತ್ತಿದ್ದು, ಮಕ್ಕಳಿಲ್ಲದ ದಂಪತಿಗಳು ಇದರ ಸೌಲಭ್ಯ ಪಡೆಯಬೇಕು ಎಂದರು.
ನಿರ್ಮಲ ಮಡಿಲು ಯೋಜನೆ ನಮ್ಮ ತಾಯಿ ಡಾ.ಹೆಚ್.ಟಿ.ನಿರ್ಮಲ ಅವರ ಕನಸಾಗಿತ್ತು. ಅವರು ಸುಮಾರು ೪೮ ವರ್ಷಗಳ ಕಾಲ ವೈದ್ಯ ವೃತ್ತಿಯಲ್ಲಿದ್ದರು. ಸಾಮಾನ್ಯವಾಗಿ ಪ್ರನಾಳ ಶಿಶು ಪಡೆಯಲು ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಳಿಗೆ ಹೋಗಬೇಕಿತ್ತು. ಖರ್ಚುಕೂಡ ಹೆಚ್ಚಾಗುತ್ತಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಕೈಗೆಟುಕುವ ದರದಲ್ಲಿ ಶಿವಮೊಗ್ಗ ಮತ್ತು ಸುತ್ತ ಮುತ್ತಲ ಜಿಲ್ಲೆಯ ಮಕ್ಕಳಿಲ್ಲದ ದಂಪತಿಗಳಿಗೆ ಅನುಕೂಲವಾಗಬೇಕು ಎಂಬ ದೃಷ್ಟಿಯಿಂದ ಐವಿಎಫ್ ಕೇಂದ್ರ ತೆರೆಯಲಾಗಿದೆ. ಕಳೆದ ೩ ವರ್ಷದಲ್ಲಿ ಸುಮಾರು ೩೫ಕ್ಕೂ ಹೆಚ್ಚು ದಂಪತಿಗಳು ಇದರ ಪ್ರಯೋಜನ ಪಡೆದಿದ್ದು, ಶೇ.೪೫ ರಷ್ಟು ಫಲಿತಾಂಶ ಸಿಕ್ಕಿದೆ. ವಿಜ್ಞಾನದ ದೃಷ್ಟಿಯಿಂದ ಇದು ಒಳ್ಳೆಯ ಸಾಧನೆ ಎಂದರು.
ನಿರ್ಮಲ ಆಸ್ಪತ್ರೆಯಲ್ಲಿ ಒಳ್ಳೆಯ ಸೌಲಭ್ಯಗಳಿವೆ ಪ್ರನಾಳ ಶಿಶುವಿಗೆ ಸಂಬಂಧಿಸಿದಂತೆ ದಂಪತಿಗಳಿಗೆ ಉತ್ತಮ ಮಾಹಿತಿ ಮತ್ತು ಚಿಕಿತ್ಸೆ ನೀಡಲಾಗುವುದು ಎಲ್ಲಾ ರೀತಿಯ ತಪಾಸಣೆಯನ್ನು ಮಾಡಲಾಗುವುದು. ಇಲ್ಲಿ ಒಳ್ಳೆಯ ಪ್ರಯೋಗಶಾಲೆ ಕೂಡ ಇದೆ. ನುರಿತ ವೈದ್ಯರು ಕೂಡ ಇದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಹೆಚ್.ಟಿ.ನಿರ್ಮಲ, ಡಾ.ಶಮೀನಾ, ಡಾ.ಶಶಿಕುಮಾರ್ ಇದ್ದರು.