ಸಿಗರೆಟ್, ಕಿರಾಣಿ ವಸ್ತುವನ್ನು ಉದ್ರಿ ಕೊಡಲಿಲ್ಲ ಎಂಬ ಕಾರಣಕ್ಕೆ ಅಂಗಡಿ ಮಾಲಕ ಮತ್ತು ಆತನ ಪತ್ನಿ ಮೇಲೆ ನಾಲ್ವರು ಯುವಕರು ಗಂಭೀರ ಹಲ್ಲೆ ನಡೆಸಿದ್ದು, ಪತಿ ಗುರುವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವಿಗೀಡಾದ ಘಟನೆ ವರದಿಯಾಗಿದೆ.
ವಿರೂಪಾಕ್ಷಪ್ಪ ಸಾವಿಗೀಡಾದವರು. ಅವರ ಪತ್ನಿ ಪಾರ್ವತಮ್ಮಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನ್ಯಾಮತಿ ತಾಲೂಕು ಸಿದ್ದಾಪುರ ಗ್ರಾಮದಲ್ಲಿ ಈ ಹಲ್ಲೆ ಫೆ. ೪ರಂದು ಸಂಭವಿಸಿತ್ತು. ಗಾಯಾಳು ದಂಪತಿಗಳು ಹಲವು ವರ್ಷಗಳಿಂದ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಆರೋಪಿಗಳಾದ ಟಿ. ಮಂಜಾ ನಾಯ್ಕ್ ಮತ್ತು ಇನ್ನೊಬ್ಬ ಮಂಜಾ ನಾಯ್ಕ್ (ಇಬ್ಬರೂ ೩೧ವಯಸ್ಸಿನವರು), ಸಿದ್ದೇಶ್ ನಾಯ್ಕ್ (೨೪) ಮತ್ತು ನಾಗರಾಜ ನಾಯ್ಕ (೨೭) ರಾಡ್ ನಿಂದ ತೀವ್ರ ಹಲ್ಲೆ ನಡೆಸಿದ್ದರು.
ಕೂಡಲೆ ಗಾಯಾಳುಗಳನ್ನು ಗ್ರಾಮಸ್ಥರು ಶಿವಮೊಗ್ಗಕ್ಕೆ ಸಾಗಿಸಿದ್ದರು.
ವಿರೂಪಾಕ್ಷಪ್ಪ ಚಿಕಿತ್ಸೆ ಫಲಿಸದೆ ಗುರುವಾರ ಸಂಜೆ ಸಾವಿಗೀಡಾಗಿದ್ದಾರೆ.
previous post
next post