ಪರಿಸರ ವಿಚಾರದಲ್ಲಿ ಭಾರತದಲ್ಲಿ ತೀರಾ ಕಡಿಮೆ ಸಂಶೋಧನೆಗಳು ನಡೆದಿರುವುದು ಬೇಸರದ ಸಂಗತಿ ಎಂದು ಬೆಂಗಳೂರಿನ ಅಜೀಮ್ ಪ್ರೇಮ್‌ಜಿ ವಿಶ್ವ ವಿದ್ಯಾಲಯದ ಹವಾಮಾನ ಬದಲಾವಣೆ ಮತ್ತು ನಿರ್ವಹಣೆ ವಿಭಾಗದ ನಿರ್ದೇಶಕಿ ಡಾ. ಹರಿಣಿ ನಾಗೇಂದ್ರ ಹೇಳಿದ್ದಾರೆ.
ಶಿವಮೊಗ್ಗ ಮಾನಸಾ ಟ್ರಸ್ಟ್‌ನವರು ಏರ್ಪ ಡಿಸಿದ್ದ ಕಟೀಲು ಅಪ್ಪು ಪೈ ಸ್ಮಾರಕ ವಾರ್ಷಿಕ ಉಪನ್ಯಾಸ ಕಾರ್‍ಯಕ್ರಮದಲ್ಲಿ “ಭಾರತದ ನಗರಗಳ ಅಭಿವೃದ್ಧಿಯನ್ನು ಪಾರಿಸಾರಿಕವಾಗಿ ಚಿಂತಿಸಿ” ಎನ್ನುವ ವಿಷಯದ ಕುರಿತು ಮಾತನಾಡಿದರು.
ಸದ್ಯದ ಸ್ಥಿತಿಯಲ್ಲಿ ಯುರೋಪಿಯ್ ನ್ನರು ಹೇಳಿದ್ದೇ ನಮಗೆ ಪರಿಸರವಾಗಿದೆ. ಏಕೆಂದರೆ ನಮ್ಮಲ್ಲಿ ಪರಿಸರದ ಕುರಿತು ಯಾವುದೇ ಆಧುನಿಕ ಸಂಶೋಧನೆ ನಡೆದಿಲ್ಲ. ಯುರೋಪಿಯನ್ ವಿಚಾರಗಳು ಭಾರತದ ಪರಿಸರಕ್ಕೆ ಸರಿಹೊಂದುವುದಿಲ್ಲ. ಸಾಮಾನ್ಯ ಜನರಲ್ಲಿ ಪರಂಪರೆಯಿಂದ ಬಂದ ಜ್ಞಾನವೇ ಶ್ರೇಷ್ಠ. ಅದನ್ನು ನಾವು ಕಲೆಹಾಕಿ ಉಳಿಸಿಕೊ ಳ್ಳಬೇಕು ಎಂದು ಹೇಳಿದರು.
ಹಳ್ಳಿಯಲ್ಲಿರುವವರೇ ನಿಜಕ್ಕೂ ಪರಿಸರ ವನ್ನು ಇಲ್ಲಿಯವರೆಗೆ ಉಳಿಸಿದ್ದಾರೆ. ಜೀವಜಾಲ ಎಲ್ಲರ ಜೀವವನ್ನು ಉಳಿಸುತ್ತಿದೆ ಎಂದ ಮೇಲೆ ಅದನ್ನು ಉಳಿಸುವ ಮಹತ್ತರ ಜವಾಬ್ದಾರಿ ನಮ್ಮದಾಗಬೇಕು. ಸದ್ಯದ ಹವಾಮಾನ ಬದಲಾವಣೆ ಮತ್ತು ಪಾರಿ ಸಾರಿಕ ವಿಷಯಗಳ ಬಗ್ಗೆ ಹೆಚ್ಚು ಗಮನ ಕೊಡಬೇಕಾದ ಅಗತ್ಯತೆ ಇದ ಎಂದ ಅವರು, ಕೆರೆ, ಬಾವಿ., ಅಶ್ವತ್ಥಕಟ್ಟೆಯನ್ನು ಉಳಿಸುವ ಪಾರಂಪರಿಕ ಕೆಲಸ ನಡೆಯಬೇಕಿದೆಂದರು.
ಸಾರ್ವಜನಿಕ ಸಹಭಾಗಿತ್ವದಲ್ಲಿ ಪರಿಸರ ಉಳಿಸುವುದು ಆಗಬೇಕಿದೆ. ಕೆರೆ ಸಂರಕ್ಷಣೆ ಯಂತಹ ಕೆಲಸವನ್ನು ನಾವು ಮಾಡುತ್ತಿಲ್ಲ. ಬದಲಾಗಿ ಅದನ್ನು ಕಸದಗೂಡನ್ನಾಗಿ ಮಾಡುತ್ತಿದ್ದೇವೆ. ಎಲ್ಲವನ್ನೂ ಹಾಳುಮಾಡಿ ಕೊಂಡು “ಹುಯ್ಯೋ ಹುಯ್ಯೊ ಮಳೆ ರಾಯ” ಎಂದು ಮಳೆಗಾಗಿ ಪ್ರಾರ್ಥಿಸುವಂತಾಗಿದೆ ಎಂದರು.
ಬರಹಗಾರ ಜಯಂತ್ ಕಾಯ್ಕಿಣಿ ಸಿನಿಮಾ ಮತ್ತು ಸಾಹಿತ್ಯ, ಸಂಗೀತದ ಬಗ್ಗೆ ಮಾತನಾಡಿ, ಭಾರತದಲ್ಲಿ ಸಿನಿಮಾ ಹಾಡುಗಳು ಭಾವನಾತ್ಮಕವಾಗಿ ಜನರನ್ನು ಬಂಧಿಸಿಲ್ಲ, ಬೇರಾವ ದೇಶದಲ್ಲೂ ಬಂಧಿಸಿಲ್ಲ,ಎಂದರು.
ಅಧ್ಯಕ್ಷತೆಯನ್ನು ಮಾನಸಾ ಟ್ರಸ್ಟ್ ಕಾರ್‍ಯ ನಿರ್ವಾಹಕ ನಿರ್ದೇಶಕಿ ಡಾ. ರಜಿನಿ ಪೈ ವಹಿಸಿ ದ್ದರು. ಟ್ರಸ್ಟಿಗಳಾದ ಡಾ. ಪ್ರೀತಿ ಪೈ, ಡಾ. ಕಟೀಲ್ ಅಶೋಕ್ ಪೈ ಕಾಲೇಜಿನ ಪ್ರಾಚಾರ್‍ಯೆ ಸಂಧ್ಯಾ ಕಾವೇರಿ, ಸಂಸ್ಥೆಯ ಮಾರ್ಗದರ್ಶಕ ಡಾ. ರಾಜೇಂದ್ರ ಚೆನ್ನಿ ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ
ಸಂಜೆ ನಡೆದ ಕಾರ್ಯಕ್ರಮದಲ್ಲಿ ಡಾ.ಸ್ವಾಮಿನಾಥ ಗೋಪಾಲರಾವ್ ಹಾಗೂ ಜಗದೀಶ ತೀರ್ಥಹಳ್ಳಿ ಅವರಿಗೆ ಡಾ.ಅಶೋಕಪೈ ಸ್ಮರಣಾರ್ಥ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕವಿ ಜಯಂತ್ ಕಾಯ್ಕಿಣಿ, ಡಾ. ರಜನಿಪೈ, ಡಾ. ಪ್ರೀತಿ ಪೈ, ಡಾ.ಶಾನುಭಾಗ್, ಮತ್ತಿತರರಿದ್ದರು.