ದೇವಸ್ಥಾನಗಳಲ್ಲಿ ಬರೀ ಪೂಜೆ ,ಹೋಮ&ಹವನಗಳು ನಡೆಯದೆ, ಅಲ್ಲಿ ಸಮಾಜಮುಖಿ ಕೆಲಸಗಳೂ ನಡೆಯಬೇಕು ಎಂದು ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಹೇಳಿದರು. ಗೋಪಾಳದ ರಂಗನಾಥ ಬಡಾವಣೆಯಲ್ಲಿ ಭಾನುವಾರ ಅಯ್ಯಪ್ಪಸ್ವಾಮಿ ದೇಗುಲದ ಪಂಚಲೋಹ ವಿಗ್ರಹ ಪ್ರತಿಷ್ಠಾಪನೆ ಹಾಗೂ ಗೋಪುರ ಕಳಸಾರೋಹಣ ನೆರವೇರಿಸಿ ಆಶೀರ್ವಚನ ನೀಡಿದರು. ದೇವಾಲಯಗಳು ಭಕ್ತಿಯ ಹೆಸರಲ್ಲಿ ಆಡಂಬರ ಪ್ರದರ್ಶನಕ್ಕೆ ವೇದಿಕೆಯಾಗದೆ ಶಕ್ತಿಕೇಂದ್ರಗಳಾಗಬೇಕು. ಆರೋಗ್ಯ ತಪಾಸಣೆ, ಅರಿವು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರನ್ನು ಸನ್ನಡತೆಯತ್ತ ನಡೆಸುವಲ್ಲಿಯೂ ದೇವಾಲಯಗಳು ಪಾತ್ರವಹಿಸಬೇಕು ಎಂದು ವಿನಯ್ ಗುರೂಜಿ ಹೇಳಿದರು.
ಸಾನ್ನಿದ್ಯವಹಿಸಿದ್ದ ಗುರಸ್ವಾಮಿ ರೋಜಾಷಣ್ಮುಗಂ ಮಾತನಾಡಿ, ಶಿವಮೊಗ್ಗದಲ್ಲಿ ಅಯ್ಯಪ್ಪ ಭಕ್ತರು ಹೆಚ್ಚಾಗಿದ್ದು, ಈ ದೇವಾಲಯದಲ್ಲಿ ಭಕ್ತಪರ ಕೆಲಸಗಳು ನಡೆಯಲಿ ಎಂದು ಹೇಳಿದರು.
ಅಯ್ಯಪ್ಪ ಸ್ವಾಮಿ ಸೇವಾ ಪ್ರತಿಷ್ಠಾನಂ ಅಧ್ಯಕ್ಷ ಸುರೇಶ್ ಕೆ.ಬಾಳೇಗುಂಡಿ ಮಾತನಾಡಿ, ೧.೨೦ ಕೋಟಿ ವೆಚ್ಚದಲ್ಲಿ ದೇಗುಲದ ಅಭಿವೃದ್ಧಿ ಕೆಲಸಗಳು ನಡೆದಿವೆ. ದೇಸ್ಥಾನದ ಜಾಗವನ್ನು ಹಲವು ವರ್ಷಗಳಿಂದ ಪೂಜೆ ಮಾಡಿಕೊಂಡು ಬಂದಿದ್ದ ಭಕ್ತೆಯೊಬ್ಬರು ದಾನವಾಗಿ ನೀಡಿ ಮಾದರಿ ಕೆಲಸ ಮಾಡಿದ್ದಾರೆ ಎಂದರು.
ಪಾಕೆ ಸದಸ್ಯ ಎನ್.ಎಸ್.ಮಂಜುನಾಥ್, ಟ್ರಸ್ಟಿಗಳಾದ ಗೋಪಾಲಕೃಷ್ಣ, ರುದ್ರನಗೌಡ, ಬಿ.ಸಿ.ರಾಜಣ್ಣ, ಸುರೇಶ್ ಬಾಬು ಮತ್ತಿತರರಿದ್ದರು.
previous post
next post