ಹುಣಸೋಡು ಹಾಗೂ ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸಬೇಕೆಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಒತ್ತಾಯಿಸಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸ್ಫೋಟಗಳನ್ನು ಗಮನಿಸಿದಾಗ ಇಲ್ಲಿನ ಅಕ್ರಮ ವ್ಯವಹಾರ ಬಯಲಾಗುತ್ತಿದೆ. ಸ್ಫೋಟಕದ ಮಾಫಿಯಾವನ್ನು ಮಟ್ಟಹಾಕಬೇಕು. ಈ ದಿಸೆಯಲ್ಲಿ ಸಿಬಿಐ ತನಿಖೆ ಮಾಡಿದರೆ ಸತ್ಯ ಹೊರಬರಲಿದೆ ಬರಲಿದೆ. ಇಂತಹ ದೊಡ್ಡ ಅನಾಹುತ ನಡೆದರೂ ಸೂಕ್ತ ತನಿಖೆ ನಡೆಯುತ್ತಿಲ್ಲ. ನಿಜವಾದ ಅಪರಾಧಿಗಳನ್ನು ಬಂಧಿಸಿಲ್ಲ. ಕ್ವಾರಿ ವ್ಯವಹಾರದಲ್ಲಿ ಬಿಜೆಪಿಯವರೇ ಇರುವ ಕಾರಣ ತನಿಖೆ ನಿಂತಲ್ಲಿಯೇ ನಿಂತಿದೆ ಎಂದು ಕಿಮ್ಮನೆ ಆರೋಪಿಸಿದರು.ಆರ್‌ಎಸ್ ಎಸ್ ೧೯೬೨ರ ನಂತರ ಜಾತಿ ಆಧಾರಿತ ಮೀಸಲಾತಿ ಮುಂದುವರಿಯಬಾರದು, ಬದಲಿಗೆ ಆರ್ಥಿಕ ಆಧಾರಿತ ಮೀಸಲಾತಿ ಬರಬೇಕು ಎಂದು ಅದು ಪ್ರತಿಪಾದಿಸಿತ್ತುಆದರೆ ಇಂದು ಬಿಜೆಪಿಯ ಸಚಿವರಲ್ಲಿ ಶ್ರೀರಾಮುಲು, ಈಶ್ವರಪ್ಪ, ಮಾಲೀಕಯ್ಯ ಗುತ್ತೇದಾರ್ ಸೇರಿದಂತೆ ಅನೇಕರು ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದಾರೆ.ಹಾಗಿದ್ದರೆ ಇವರೆಲ್ಲ ಹೋರಾಟ ಮಾಡುತ್ತಿರುವುದು ಸಂಘಪರಿವಾರದ ವಿರುದ್ಧವೆ ಎಂದು ಕಿಮ್ಮನೆ ಪ್ರಶ್ನಿಸಿದ್ದಾರೆ.
ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದು ಜಾತ್ಯತೀತತೆಯ ಆಶಯ. ಆದರೆ ಜಾತ್ಯಾತೀತತೆಯನ್ನು ಆರ್ ಎಸ್ ಎಸ್ ಚಿಂತನೆಗಳು ಒಪ್ಪುವುದಿಲ್ಲ. ಆದರೆ ಈ ಚಿಂತನೆಯನ್ನೇ ಅಂಬೇಡ್ಕರ್, ಗಾಂಧೀಜಿ ಹಾಗೂ ಕಾಂಗ್ರೆಸ್ ಪ್ರತಿಪಾದಿಸಿದ್ದು . ಸಚಿವರೇ ತಮ್ಮ ಜಾತಿಗಳ ಪರವಾಗಿ ಹೋರಾಟ ಮಾಡುವುದಾದರೆ ಹಿಂದುತ್ವ ಹಾಗೂ ಜಾತ್ಯಾತೀತತೆಗೆ ಅರ್ಥ ಏನು ಎಂದು ಕಿಮ್ಮನೆ ರತ್ನಾಕರ್ ಪ್ರಶ್ನಿಸಿದ್ದಾರೆ.
ರಾಜೀನಾಮೆ ನೀಡಲಿ:
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಅನೇಕ ಬಿಜೆಪಿ ನಾಯಕರು ಅವರ ಸರಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಕಚ್ಚಾ ವಸ್ತು ಇಲ್ಲ. ಸರಕಾರ ಕ್ವಾರಿಗಳಿಗೆ ಅಡ್ಡಿಮಾಡಬಾರದು ಎಂದು ಶಾಸಕ ಜ್ಞಾನೇಂದ್ರ ಹೇಳುತ್ತಾದ್ದಾರೆ. ಸರಕಾರ ಕ್ವಾರಿ ವಿರುದ್ಧ ಕ್ರಮ ಅಂತಿದೆ ಹಾಗಾದರೆ ಸರಕಾರದ ಮಾತನಾಡುವ ಇವರು ರಾಜೀನಾಮೆ ನೀಡಲಿ ಎಂದು ಕಿಮ್ಮನೆ ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ವೇದಾ ವಿಜಯ್ ಕುಮಾರ್ ಕಲಗೋಡು ರತ್ನಾಕರ್, ಮುಡುಬ ರಾಘವೇಂದ್ರ, ಬಿ.ಎ ರಮೇಶ್ ಹೆಗ್ಡೆ, ಎಚ್.ಸಿ.ಯೋಗೇಶ್ ಇದ್ದರು