Malenadu Mitra
ರಾಜ್ಯ ಶಿವಮೊಗ್ಗ

ಬಿಎಸ್‌ವೈಗೆ ನಮ್ಮೊಲುಮೆಯ ಭಾವಾಭಿನಂದನೆ

ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಜನ್ಮದಿನದ ನಿಮಿತ್ತ ಜಿಲ್ಲೆಯ ಸಮಸ್ತ ಜನರ ಪರವಾಗಿ `ನಮ್ಮೊಲುಮೆ’ಯ ಭಾವಾಭಿನಂದನೆಯನ್ನು ಫೆ.೨೮ ರಂದು ಸಂಜೆ ೬ ಗಂಟೆಗೆ ಹಳೆಯ ಜೈಲು ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಅಭಿನಂದನಾ ಸಮಿತಿಯ ಅಧ್ಯಕ್ಷ ಎಸ್. ರುದ್ರೇಗೌಡ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ ಅವರು, ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಡಿ.ಎಸ್. ಶಂಕರಮೂರ್ತಿ ಅಭಿನಂದನಾ ನುಡಿಗಳನ್ನು ನುಡಿವರು. ಸಚಿವ ಕೆ.ಎಸ್. ಈಶ್ವರಪ್ಪರವರು ರಾಜಕಾರಣದ ತ್ರಿವಿಕ್ರಮ ಪುಸ್ತಕ ಬಿಡುಗಡೆ ಮಾಡುವರು. ಇವರ ಜೊತೆಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಅರಗಜ್ಞಾನೇಂದ್ರ, ಕುಮಾರ್‍ಬಂಗಾರಪ್ಪ, ಕೆ.ಬಿ.ಅಶೋಕ್‌ನಾಯ್ಕ್, ಆಯನೂರು ಮಂಜುನಾಥ್, ಭಾರತಿಶೆಟ್ಟಿ, ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ ಉಪಸ್ಥಿತರಿರುವರು ಎಂದರು.
ಡಿ.ಎಸ್.ಅರುಣ್ ಮಾತನಾಡಿ, ಮುಖ್ಯಮಂತ್ರಿಗಳ ಸನ್ಮಾನದ ನಂತರ ನಾಡಿನ ಹೆಸರಾಂತ ಗಾಯಕರಾದ ವಿಜಯ್‌ಪ್ರಕಾಶ್ ಹಾಗೂ ರಾಜೇಶ್‌ಕೃಷ್ಣನ್ ಅವರಿಂದ ವಿಶೇಷ ಸಂಯೋಜನೆಯ ಭಾವಾಭಿನಂದನಾ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಅನುಶ್ರೀ ನಿರೂಪಣೆ ಮಾಡಲಿದ್ದಾರೆ ಎಂದರು.
ಮಾ.೧ ರಂದು ಸಂಜೆ ೬ ಗಂಟೆಗೆ ಇದೇ ಸ್ಥಳದಲ್ಲಿ ಆಳ್ವಾಸ್ ನುಡಿಸಿರಿ ತಂಡದವರಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ೨೫೦ ಕಲಾವಿದರು ಭಾಗವಹಿಸಲಿದ್ದು, ಈ ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು. ಡಾ.ಮೋಹನ್ ಆಳ್ವಾ ಅಧ್ಯಕ್ಷತೆ ವಹಿಸುವರು.
ಈ ೨ ದಿನದ ಕಾರ್ಯಕ್ರಮದಲ್ಲಿ ಸುಮಾರು ೪೦ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದೆ. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ .ಎಸ್.ಜ್ಯೋತಿಪ್ರಕಾಶ್, ವಕೀಲ ಬಸಪ್ಪಗೌಡರು, ಟಿ.ಆರ್.ಅಶ್ವಥ್‌ನಾರಾಯಣ ಶೆಟ್ಟಿ, ಬಳ್ಳೆಕೆರೆ ಸಂತೋಷ್, ಲಕ್ಷ್ಮೀನಾರಾಯಣ ಕಾಶಿ, ರಮೇಶ್‌ಹೆಗ್ಡೆ, ಮಾಲತೇಶ್, ಹಿರಣ್ಣಯ್ಯ ಇನ್ನಿತರರು ಉಪಸ್ಥಿತರಿದ್ದರು. 

ReplyForward
Ad Widget

Related posts

ಸುವರ್ಣ ಮಹೋತ್ಸವ: ಪದವೀಧರ ಸಹಕಾರ ಸಂಘದಿಂದ ಕುವೆಂಪು ವಿವಿಯಲ್ಲಿ ಮೂರು ಚಿನ್ನದ ಪದಕ ಸ್ಥಾಪನೆ

Malenadu Mirror Desk

ಜೆಪಿ ಪ್ರತಿಷ್ಠಾನದಿಂದ ವಿದ್ಯಾರ್ಥಿ ವೇತನ ವಿತರಣೆ, ಈಡಿಗ ಸ್ವಾಮೀಜಿಗೆ ಗುರುವಂದನೆ ಜಿಲ್ಲಾ ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ಮಾಹಿತಿ

Malenadu Mirror Desk

ಎಂಜನಿಯರಿಂಗ್ ಕಾಲೇಜಲ್ಲಿ ಆಂಧ್ರ ಸಚಿವರ ಕನ್ನಡ ಕಲರವ
ಹಳೆಯ ವಿದ್ಯಾರ್ಥಿಗಳು ಜಾಗತಿಕ ಸಮ್ಮಿಲನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.