ಸಾಗರ ತಾಲೂಕು ಶಿಗ್ಗಲು-ಕೋಗಾರು ಸಂಪರ್ಕ ಕಲ್ಪಿಸುವ ಶರಾವತಿ ಹಿನ್ನೀರಿನ ಎಣ್ಣೆಹೊಳೆಗೆ ಫೆ.೨೭ ರಂದು ನೂತನ ಲಾಂಚ್ ಸೌಲಭ್ಯ ಲೋಕರ್ಪಣೆಗೊಳ್ಳಲಿದೆ. ಶಾಸಕ ಹರತಾಳು ಹಾಲಪ್ಪ ಅವರು, ಬುಧವಾರ ಬಂದರು ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ವಿಷಯ ತಿಳಿಸಿದ್ದು, ಲಾಂಚ್‌ಗೆ ನುರಿತ ಚಾಲಕರನ್ನು ನೇಮಿಸುವಂತೆ ಬಂದರು ಇಲಾಖೆ ನಿರ್ದೇಶಕ ಕ್ಯಾಪ್ಟನ್ ಸ್ವಾಮಿ ಅವರಿಗೆ ಸೂಚಿಸಿದರು.
ಎಣ್ಣೆಹೊಳೆ ಲಾಂಚ್ ಕೋಗಾರು ಹಾಗೂ ಶಿಗ್ಗಲು ಭಾಗದ ಅನೇಕ ಹಳ್ಳಿಗಳಿಗೆ ಅನುಕೂಲವಾಗಲಿದ್ದು, ಸಾಗರ ಹಾಗೂ ಕಾರ್ಗಲ್‌ನ ಸಂಪರ್ಕ ಮಾರ್ಗದ ಅಂತರ ಕಡಿಮೆ ಮಾಡಲಿದೆ. ಇದರಿಂದ ಆ ಭಾಗದ ಬಹುವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಬಳಿಕ ಅವರು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದರು.
ದೈವಜ್ಞ ಸಮಾಜದಿಂದ ಸಾಧಕರಿಗೆ ಸನ್ಮಾನ:
ಸಾಗರದ ದೈವಜ್ಞ ಬ್ರಾಹ್ಮಣ ಸಮಾಜದ ೧೯ ನೇ ವರ್ದಂತಿ ಮಹೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು. ಶಾಸಕ ಹಾಲಪ್ಪ ಅವರನ್ನೂ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ದೈವಜ್ಞ ಬ್ರಾಹ್ಮಣ ಸಮಾಜದ ಪ್ರಮುಖರು ಭಾಗವಹಿಸಿದ್ದರು.