ಸಂಕೀರ್ಣವಾದ ಮಾನವನ ಜೀವನದಲ್ಲಿ ಸತ್ಕಾರ್‍ಯಗಳನ್ನು ಕೈಗೊಂಡು ಸಂತೃಪ್ತಿ ಪಡೆಯಲು ಸಾಧ್ಯವಿದೆ ಎಂದು ನಿಟ್ಟೂರಿನ ನಾರಾಯಣ ಗುರು ಮಹಾಸಂಸ್ಥಾನ ಶ್ರೀ ರೇಣುಕಾನಂದ ಸ್ವಾಮೀಜಿ ತಿಳಿಸಿದರು.
ಶನಿವಾರ ನಿಟ್ಟೂರಿನ ಶ್ರೀ ನಾರಾಯಣ ಗುರು ಮಹಾಸಂಸ್ಥಾನ ಮಠದಲ್ಲಿ ಭಾರತ ಹುಣ್ಣಿಮೆ ಪ್ರಯುಕ್ತ ಹಮ್ಮಿಕೊಂಡಿದ್ದ ಧರ್ಮ ಸಭೆ ಹಾಗೂ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಮಾನವ ಬದುಕಿನಲ್ಲಿ ಸುಖ ಮತ್ತು ನೆಮ್ಮದಿಯ ಬದುಕು ಕಾಣಬೇಕೆಂದರೆ ಉಸಿರು ಇರುವವರೆಗೆ ಸತ್ಕಾರ್‍ಯಗಳನ್ನು ಮಾಡಿ ಧರ್ಮ ಮಾರ್ಗದಲ್ಲಿ ಸಾಗಬೇಕು. ದೇವರು ಕೊಟ್ಟಿರುವ ಈ ನಿಸರ್ಗದೊಳಗೆ ಮಾನವರೆಲ್ಲರೂ ಒಂದೇ ಬಳ್ಳಿಂii ಹೂಗಳಂತೆ ಬದುಕಿ ಬಾಳಬೇಕು ಜೀವನವನ್ನು ಸಾರ್ಥಕಪಡಿಸಿಕೋಳ್ಳುವ ಕಡೆಗೆ ಗಮನ ಹರಿಸಬೇಕು ಇಂಥಹ ಮಾನವನ ಜೀವನ ಇನ್ನು ಸಿಗುವುದು ದುರ್ಲಬ. ಧರ್ಮ ನಶಿಸಿ ಧನ ಗಳಿಸುವ ಕಡೆಗೆ ಮುಖ ಮಾಡಿದ ಮನುಷ್ಯ ಕೊರೊನಾದಂಥಹ ಬೀಕರ ಕಾಯಿಲೆಯನ್ನು ಎದುರಿಸಿ ಹಣಗಳಿಸಿ ಇಡುವುದು ಮುಖ್ಯವಲ್ಲ. ಇಂಥ ಅಪರೂಪದ ಜೀವನವನ್ನು ಸತ್ಕಾರ್‍ಯಗಳನ್ನು ಮಾಡುವ ಮೂಲಕ ಸಂತೃಪ್ತಿಯಾದ ಜೀವನವನ್ನು ನಾವೆಲ್ಲರೂ ಸಾಗಿಸೋಣ ಎಂದರು
ಶಿವಮೊಗ್ಗದ ಬ್ರಹ್ಮಶ್ರೀ ನಾರಾಯಣ ಗುರು ಸೊಸೈಟಿಯ ನೂತನ ಉಪಾಧ್ಯಕ್ಷರಾದ ರವೀಂದ್ರ ಕೆ ಎಂ ನಿದೇರ್ಶಕರಾದ ಎಸ್ ಗೀತಾಜಂಲಿ, ದೇವಪ್ಪ ಡಿ, ರಘಪತಿ ಎನ್ ಬಿ, ಚೂಡಮಣಿ ಕೆ ಆರ್, ಕಲ್ಲನ್ ಹೆಚ್, ಕೆ ಪಿ ಗಣಪತಿ, ದಯಾನಂದ ಸಾಗರ, ಸುದರ್ಶನ್ ಬಿ ಕೇಶವಮೂರ್ತಿ ಎಲ್ ಮತ್ತಿತರರಿದ್ದರು
previous post