ಖ್ಯಾತ ಕವಿ ನಮ್ಮ ಶಿವಮೊಗ್ಗದ ಹೆಮ್ಮೆಯ ಲಕ್ಷ್ಮೀನಾರಾಯಣ ಭಟ್ (೮೪)ಅವರು ನಿಧನರಾಗಿದ್ದಾರೆ. ಬೆಂಗಳೂರಿನ ಬನಶಂಕರಿಯಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಎನ್ನೆಸ್ಸೆಲ್ ಎಂದೇ ಕರೆಯಲ್ಪಡುತ್ತಿದ್ದ ಅವರು ತಮ್ಮ ಹೃದಯ ಸ್ಪರ್ಶಿ ಗೀತೆಗಳ ಮೂಲಕ ಕೇಳುಗರನ್ನು ಭಾವ ಪ್ರಪಂಚಕ್ಕೆ ಕೊಂಡೊಯ್ಯುತ್ತಿದ್ದರು. ಭಾವಗೀತೆ, ಸಾಹಿತ್ಯ ವಿಮರ್ಶೆ, ನವ್ಯಗೀತೆ ಸೇರಿದಂತೆ ವಿವಿಧ ಪ್ರಾಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದ ಲಕ್ಷ್ಮಿನಾರಾಯಣ ಭಟ್ಟರು, ಇಂಗ್ಲೀಷ್ ಹಾಗೂ ಸಂಸೃತದಲ್ಲಿಯೂ ಸಾಹಿತ್ಯ ರಚನೆ ಮಾಡಿದ್ದಾರೆ.
ಶಿವಮೊಗ್ಗದ ಬಿಬಿ ಸ್ಟ್ರೀಟ್‌ನ ನಿವಾಸಿಗಳಾಗಿದ್ದ ಶಿವರಾಮ ಭಟ್ಟ ಹಾಗೂ ಮೂಕಾಂಬಿಕಾ ದಂಪತಿಯ ಪುತ್ರರಾಗಿದ್ದ ಹಿರಿಯ ಕವಿ, ಬೆಂಗಳೂರಿನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಶಿವಮೊಗ್ಗದೊಂದಿಗೆ ಯಾವತ್ತೂ ಬಾಂಧವ್ಯ ಇಟ್ಟುಕೊಂಡಿದ್ದ ಅವರು ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಡೆವ ಹಲವು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಆಂಗ್ಲ ಕವಿಗಳಾದ ಏಲಿಯೆಟ್, ವಿಲಿಯಂ ಶೇಕ್ಸ್‌ಪಿಯರ್ ,ಏಟ್ಸ್ ಕವಿಗಳ ಕಾವ್ಯಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು.
ಅದ್ಭುತ ಮಕ್ಕಳ ಭಾವಗೀತೆಗಳನ್ನು ರಚನೆ ಮಾಡಿದ್ದ ಲಕ್ಷ್ಮಿನಾರಾಯಣ ಭಟ್ಟರ ಕವಿತೆಗಳಲಿ ಆದ್ಯಾತ್ಮದ ಅಂತತ್ವವೇ ಹೆಚ್ಚಾಗಿ ಮಿಳಿತಗೊಂಡಿತ್ತು. ತೂಗಿ.. ತೂಗಿ ಮರಗಳೇ,,, ಇಳೆಗೆ ಇಳಿದ ವರಗಳೇ,,, ಭಟ್ಟರ ಜನಪ್ರಿಯ ಗೀತೆಯಾಗಿದೆ… ಪ್ರತಿ ಹೂವು ಸಾರುತ್ತಿದೆ ಭಗವಂತನ ಚೆಲುವಾ……..ಪ್ರತಿ ಬೆಳಗು ಹಾಡುತ್ತಿದೆ. ಭಗವಂತನ ಒಲವಾ ಎಂದು ಮುದ್ದು ಮಕ್ಕಳಲ್ಲಿ ಭಗವಂತನನ್ನು ಕಂಡ ಕವಿ ಎನ್ನೆಸ್ಸೆಲ್ ಅವರಾಗಿದ್ದರು.
ಲಕ್ಷ್ಮೀನಾರಾಯಣ ಭಟ್ಟರ ಭಾವಗೀತೆಗಳನ್ನು ನಾಡಿದ ಪ್ರಖ್ಯಾತ ಗಾಯಕ-ಗಾಯಕಿಯರು ಹಾಡಿದ್ದಾರೆ. ..ಹಿಂದೆ ಹೇಗೆ ಚಿಮ್ಮುತಿತ್ತು,.. ಕಣ್ಣ ತುಂಬ ಪ್ರೀತಿ… ಒಂದು ಸಣ್ಣ ಮಾತಿನಿರಿತ ತಾರದಾಯ್ತೆ ಪ್ರೀತಿ….ಕವಿತೆಯಲ್ಲಿ ಪ್ರೀತಿ, ಪ್ರೇಮ….ವಿರಸ, ನನ್ನ ಇನಿಯನ ನೆಲೆಯ ಬಲ್ಲೆಯೇನು…,ಎಂದು ಪ್ರೇಮಿಯ ಹುಡುಕಾಟ, ಎಲ್ಲಿ ಜಾರಿತೊ ಮನವೂ….ಎಲ್ಲೆ ಮೀರಿತೊ….ಎಂಬಂತಹ ಜನಪ್ರಿಯ ಹಾಡುಗಳ ಭಾವಗುಚ್ಚವನ್ನು ಕನ್ನಡ ಕಾವ್ಯಜಗತ್ತಿಗೆ ನೀಡಿದ ಸಿಹಿಮೊಗೆಯ ಪ್ರೇಮ ಕವಿ, ..ದೇವ ನಿನ್ನ ಬೇಡುವೆ … ಕಾಯಿ ದೂರ ಮಾಡದೆ ಎನ್ನುತ್ತಲೇ ಇಹ ಲೋಕ ತ್ಯಜಿಸಿದ್ದಾರೆ. ನೀನಿಲ್ಲದ ಬಾಳೊಂದು ಬಾಳೆ..ಕೃಷ್ಣ ಎಂದು ನಮ್ಮನ್ನಗಲಿದ ಕವಿಯಿಲ್ಲದೆ ಕನ್ನಡ ಕಾವ್ಯಲೋಕ ಬಡವಾಗಿದೆ. ಬೌತಿಕವಾಗಿ ಅವರಿಲ್ಲದಿದ್ದರೂ ಅವರ ಭಾವಗೀತೆಗಳು ಮಾತ್ರ, ಯಾಕೆ ಕಾಡುತಿದೆ.. ಸುಮ್ಮನೆ ನನ್ನನು…ಯಾವುದೀ ರಾಗ..ಎನ್ನುವ ಅವರದೇ ಸಾಲಿನ ಭಾವಾರ್ಥದಂತೆ ಕೇಳುಗರ ಎದೆಯಲ್ಲಿ ಸದಾ ನೆಲೆನಿಂತಿವೆ…. ಅಗಲಿದ ಕವಿಗೆ ಮಲೆನಾಡು ಮಿರರ್ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತದೆ.
previous post
next post