Malenadu Mitra
ದೇಶ ರಾಜ್ಯ ಶಿವಮೊಗ್ಗ

ಡಿಆರ್ ಡಿಒ ಲ್ಯಾಬ್ ಚಿಂತನ ಮಂಥನ

ದೇಶದ ಜ್ಞಾನವಂತರು ವಿದೇಶಗಳಲ್ಲಿ ಕೆಲಸ ಮಾಡಿ ತಮ್ಮ ಬುದ್ದಿಮತ್ತೆಯನ್ನು ಪರದೇಶಿಗರಿಗೆ ಧಾರೆ ಎರೆಯುತ್ತಿರುವುದು ದುರಾದೃಷ್ಟಕರ ಸಂಗತಿ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಡಿಆರ್‌ಡಿಒ ಪ್ರಯೋಗಾಲಯ ಸ್ಥಾಪನೆಗೆ ಅಗತ್ಯವಿರುವ ಯೋಜನಾ ವರದಿ ತಯಾರಿಸುವ ಉದ್ದೇಶದಿಂದ ನಡೆದ ಚಿಂತನಮಂಥನ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಡಿಆರ್‌ಡಿಒ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಯೋಗಾಲಯವನ್ನು ಪ್ರಾರಂಭಿಸಲು ತಾತ್ವಿಕ ಒಪ್ಪಿಗೆ ನೀಡಿರುವ ಹಿನ್ನಲೆಯಲ್ಲಿ ರಕ್ಷಣಾಪಡೆಗಳಿಗೆ ಪ್ರಾಯೋಗಿಕವಾಗಿ ಸಹಾಯಕವಾಗುವಂತಹ ಸಂಶೋಧನೆಯನ್ನು ಈ ಭಾಗದ ತಜ್ಞರು ಕೈಗೊಳ್ಳಬೇಕಾದ ಅಗತ್ಯತೆ ಇದೆ. ಪಶ್ಚಿಮ ಘಟ್ಟಗಳಲ್ಲಿ ಯಥೇಚ್ಚವಾಗಿ ಲಭ್ಯವಿರುವ ಸಸ್ಯ ಪ್ರಭೇದಗಳು, ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ದೇಶದ ರಕ್ಷಣಾಪಡೆಯ ಒಳಿತಿಗಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆಗಳನ್ನು ಕೈಗೊಳ್ಳಲು ಪರಿಣತ ಮಾನವ ಸಂಪನ್ಮೂಲ ಮಲೆನಾಡು ಭಾಗದಲ್ಲಿದೆ. ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಈ ಭಾಗದ ತಜ್ಞರ ಸಂಶೋಧನೆಗಳನ್ನು  ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.
ಹೀಗಾಗಿ ಸ್ಥಳೀಯ ಮಾನವ ಸಂಪನ್ಮೂಲವನ್ನು, ಅವರ ಬುದ್ಧಿಮತ್ತೆಯನ್ನು ದೇಶದ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಬೇಕಿದೆ. ಈ ಹಿನ್ನಲೆಯಲ್ಲಿ ಡಿಆರ್ ಡಿಒ ಪ್ರಯೋಗಾಲಯದ ಸ್ಥಾಪನೆ ಮಹತ್ವದ ಹೆಜ್ಜೆಯಾಗಲಿದೆ. ಈ ಬಗ್ಗೆ ರಕ್ಷಣಾ ಸಚಿವರಿಗೆ ಮನವಿ ಮಾಡಲಾಗಿದೆ. ಮಲೆನಾಡಿನಲ್ಲಿ ಸಿಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಯೋಗಾಲಯವನ್ನು ಯಾವ ರೀತಿ ರೂಪಿಸಬಹುದು ಎಂಬ ಬಗ್ಗೆ ತಜ್ಞರ ಅಭಿಪ್ರಾಯವನ್ನು ಸಭೆಯಲ್ಲಿ ಮಾಹಿತಿ ಪಡೆಯಲಾಗುವುದು ಎಂದು ಹೇಳಿದರು.
ಕುವೆಂಪುವಿಶ್ವವಿದ್ಯಾಲಯಹಾಗೂಜಿಲ್ಲಾಡಳಿತದಸಹಯೋಗದಲ್ಲಿ ಹರ್ಷ  ಹೋಟೆಲ್‌ನಲ್ಲಿ ನಡೆದಸಭೆಯಲ್ಲಿಕೃಷಿವಿವಿಕುಲಪತಿಡಾ.ಎಂ.ಕೆ.ನಾಯ್ಕ್,ಕುವೆಂಪುವಿವಿಕುಲಪತಿಪ್ರೊ,ಬಿ.ವಿ.ವೀರಭದ್ರಪ್ಪ,ಕುಲಸಚಿವಪ್ರೊ.ಎಸ್.ಎಸ್.ಪಾಟೀಲ್,ವಿಧಾನಪರಿಷತ್ಸದಸ್ಯಎಸ್.ರುದ್ರೇಗೌಡ,ಜಿಲ್ಲಾಧಿಕಾರಿಕೆ.ಬಿ.ಶಿವಕುಮಾರ್. ಪರಿಸರ ಹಾಗೂ ಜೈವಿಕ ವಿಜ್ಞಾನ ಕ್ಷೇತ್ರದ ಹಲವು ಸಂಶೋಧಕರು ಸಭೆಯಲ್ಲಿ ಭಾಗವಹಿಸಿದ್ದರು.

Ad Widget

Related posts

ಪುನೀತ್ ಸ್ಮರಣೆ: ಊರಿಗೇ ಊಟ ಹಾಕಿದ ಹಳ್ಳಿಗರು

Malenadu Mirror Desk

ವಿಶೇಷ ಕ್ರೀಡಾ ಸಂಕೀರ್ಣ ಖಂಡಿಸಿ  ಪ್ರತಿಭಟನೆ

Malenadu Mirror Desk

ಜೆಸಿಐ ಶಿವಮೊಗ್ಗದಿಂದ ವಿಶಿಷ್ಟ ಮಹಿಳಾ ದಿನಾಚರಣೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.