ಇತ್ತೀಚೆಗೆ ಭದ್ರಾವತಿ ಯಲ್ಲಿ ಸಂಭವಿಸಿದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಶಾಸಕ ಸಂಗಮೇಶ್ ಅವರ ವಿರುದ್ಧ ಪೊಲೀಸರು ದೂರು ದಾಖಲಿಸಿರುವುದು ದ್ವೇಷದ ರಾಜಕಾರಣವಾಗಿದೆ. ಇದನ್ನು ಪ್ರತಿಭಟಿ ಸಲು ಮಾ.೧೩ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಅವರು, ಜಿಲ್ಲೆಯಲ್ಲಿ ಬಿಜೆಪಿ ದ್ವೇಷದ ರಾಜಕಾ ರಣ ಮಾಡಲು ಹೊರಟಿದೆ. ಸ್ವಾತಂತ್ರದ ನಂತರ ಜಿಲ್ಲೆಯ ರಾಜಕಾರಣ ಇತಿಹಾಸದಲ್ಲಿಯೇ ಇಂತಹ ದ್ವೇಷದ ರಾಜಕಾರಣ ಇರಲಿಲ್ಲ. ಆದರೆ ಬಿಜೆಪಿಯ ಮುಖಂಡರು ಈ ಕೆಲಸವನ್ನು ಆರಂಭಿಸಿದ್ದಾರೆ ಎಂದು ದೂರಿದರು.
ಈ ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆರತ್ನಾಕರ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಬೇಳೂರು ಗೋಪಾಲ ಕೃಷ್ಣ, ಶಾಂತವೀರಪ್ಪ ಗೌಡ ಸೇರಿದಂತೆ ಎಲ್ಲಾ ಮುಖಂಡರು, ಜನಪ್ರ ತಿನಿಗಳು ಭಾಗವಹಿಸಲಿದ್ದಾರೆ ಎಂದರು.
ಸುಮಾರು ೧೧ ಲಕ್ಷ ಬೆಲೆ ಬಾಳುವ ಮ್ಯಾಟ್‌ನ್ನು ಸುಡುಲು ಹೋದಾಗ ತಳ್ಳಾಟ, ನೂಕಾಟ ನಡೆದಿದೆ. ಇದನ್ನೇ ಆಧಾರವಾಗಿಟ್ಟು ಕೊಂಡು ಕೋಮುಗಲಭೆ ಎಬ್ಬಿಸಿ ವಿನಾಕಾರಣ ಶಾಸಕರನ್ನು ಮತ್ತು ಅವರ ಕುಟುಂಬದವರನ್ನು, ಕಾರ್ಯಕರ್ತರನ್ನು ಎಳೆದುತಂದು ೩೦೭ ಕೇಸ್ ಹಾಗೂ ಜಾತಿನಿಂದನೆ ಕೇಸ್ ಹಾಕಿಸುತ್ತಾರೆ ಎಂದರೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಅವರು ಕಾರಣವಲ್ಲವೆ ಎಂದು ಪ್ರಶ್ನೆ ಮಾಡಿದರು.
ಶಾಸಕ ಸಂಗಮೇಶ್ ಅವರ ಸಹೋದರ ಜಗನ್ನಾಥ್ ಮಾತನಾಡಿ, ನನ್ನ ಹೆಸರು ಬಹುಶ ಪೊಲೀಸರಿಗೆ ಗೊತ್ತಿರಕ್ಕಿಲ್ಲ ಅಲ್ಲದೆ ನಾನು ಆ ದಿನ ಇರಲಿಲ್ಲ ಹಾಗಾಗಿ ನನ್ನ ಹೆಸರನ್ನು ಬಿಟ್ಟಿದ್ದಾರೆ ಅಷ್ಟೆ. ಆದರೆ ನಮ್ಮ ಕುಟುಂಬದ ಅನೇಕರು ಘಟನೆ ನಡೆದ ದಿನ ಇಲ್ಲದಿದ್ದರೂ ಕೂಡ ಪೊಲೀಸ್ ಕೇಸ್‌ನಲ್ಲಿ ಹೆಸರು ಸೇರಿಸಿದ್ದಾರೆ. ಇದಲ್ಲದೆ ಬಿಜೆಪಿಯವರು ನೀಡಿದ ಪಟ್ಟಿಯ ಆಧಾರದಲ್ಲಿ ಅನೇಕ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿ ದ್ದಾರೆ ಎಂದರು.
ಅನಿತಾ ಕುಮಾರಿ, ಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್.ಸಿ. ಯೋಗೀಶ್, ಪ್ರಮುಖರಾದ ವಿಶ್ವ ನಾಥ್ ಕಾಶಿ, ಪಲ್ಲವಿ, ವಿಜಯಲಕ್ಷ್ಮೀ ಪಾಟೀಲ್, ಸೌಗಂಕ, ಮಂಜುಳಾ ಶಿವಣ್ಣ, ಯಮುನಾ ರಂಗೇಗೌಡ, ಚಂದ್ರಭೂಪಾಲ್ ಇದ್ದರು.
previous post
next post