ಶಿವಮೊಗ್ಗದ ದಿನಸಿ ಅಂಗಡಿ ಮಾಲೀಕನಲ್ಲಿ ದಕ್ಷಿಣಾ ಆಫ್ರಿಕಾ ರೂಪಾಂತರಿ ಕೊರೊನ ವೈರಸ್ ಪತ್ತೆಯಾಗಿದ್ದು, ಪ್ರಾಥಮಿಕ ಸಂಪರ್ಕಗಳನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಜೆಪಿ ನಗರದಲ್ಲಿ ಕೊರೊನ ಟೆಸ್ಟ್ ಕ್ಯಾಂಪ್ ಮಾಡಲು ಮುಂದಾಗಿದೆ.
ದುಬೈಗೆ ಹೋಗಿದ್ದ ೫೧ ವರ್ಷದ ವ್ಯಕ್ತಿ ಜೆಪಿ ನಗರದಲ್ಲಿ ದಿನಸಿ ಅಂಗಡಿ ಹೊಂದಿದ್ದಾರೆನ್ನಲಾಗಿದೆ. ಫೆಬ್ರವರಿ ೨೯ ರಂದು ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲ ಬಂದಿಳಿದಿದ್ದರು. ಅಲ್ಲಿಯೇ ಕೊರೊನ ಟೆಸ್ಟ್ ಮಾಡಿಸಿ ಊರಿಗೆ ಬಂದು ಹೋಮ್ ಕ್ವಾಂರಂಟೈನ್‌ನಲ್ಲಿದ್ದರು. ವ್ಯಕ್ತಿಯ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸಗಳು ಕಾಣದ್ದಿರಂದ ಸಹಜವಾಗಿಯೇ ಇದ್ದರು.
ಹನ್ನೆರಡು ದಿನದ ಬಳಿಕ:
ಊರಿಗೆ ಬರುವಾಗ ಟೆಸ್ಟ್‌ಗೆ ಕೊಟ್ಟಿದ್ದ ವ್ಯಕ್ತಿಯ ಕೊರೊನ ಪರೀಕ್ಷಾ ಫಲಿತಾಂಶ ಹನ್ನೆರಡು ದಿನಗಳ ಬಳಿಕ ಗೊತ್ತಾಗಿದ್ದು, ದಕ್ಷಿಣಾ ಆಫ್ರಿಕಾ ರೂಪಾಂತರಿ ವೈರಸ್ ಇರುವುದು ಗೊತ್ತಾಗಿದೆ. ವಿಷಯ ತಿಳಿದ ಜಿಲ್ಲಾ ಆರೋಗ್ಯ ಇಲಾಖೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಯನ್ನು ದಾಖಲಿಸಿದೆ. ವ್ಯಕ್ತಿಯ ಪ್ರಾಥಮಿ ಸಂಪರ್ಕಕ್ಕೆ ಬಂದಿದ್ದ ಹಲವರನ್ನು ತಪಾಸಣೆಗೊಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಬೆಂಗಳೂರಿನಿಂದ ಶಿವಮೊಗ್ಗ ಬರುವಾಗ ಸೋಂಕಿತ ವ್ಯಕ್ತಿಯು ಬಸ್‌ನಲ್ಲಿ ಬಂದಿದ್ದರು. ಆ ಸಂದರ್ಭದಲ್ಲಿ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಹುಡುಕುವುದು ದೊಡ್ಡ ಸವಾಲಾಗಿದೆ. ಅಲ್ಲದೆ ದಿನಸಿ ಅಂಗಡಿ ಇರುವುದರಿಂದ ದಿನಸಿ ಜೊತೆ ವೈರಸ್ ಹೋಗಿದೆಯಾ ಎಂಬ ಅನುಮಾನವಿದೆ. ಆದರೆ ಸ್ವಯಂ ಕ್ವಾರಂಟೈನ್‌ನಲ್ಲಿ ವ್ಯಕ್ತಿ ಇದ್ದ ಕಾರಣ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜೆ.ಪಿ ನಗರದ ವ್ಯಕ್ತಿಯ ಏರಿಯಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಸಾರ್ವಜನಿಕರು ತಾವಾಗಿಯೇ ಬಂದು ಚಿಕಿತ್ಸೆ ಮಾಡಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
previous post
next post