Malenadu Mitra
ರಾಜ್ಯ ಶಿಕಾರಿಪುರ ಶಿವಮೊಗ್ಗ

ಕಾಳೇನಹಳ್ಳಿ ಪೀಠಕ್ಕೆ ಗೋಣಿಬೀಡು ಶ್ರೀ ಉತ್ತರಾಧಿಕಾರಿ

ಶಿಕಾರಿಪುರ ತಾಲೂಕು ಕಾಳೇನಹಳ್ಳಿಯ ಶಿವಯೋಗ ಮಂದಿರಕ್ಕೆ ಉತ್ತರಾಧಿಕಾರಿಯಾಗಿ ಭದ್ರಾವತಿ ತಾಲೂಕು ಗೋಣಿಬೀಡು ಶೀಲಸಂಪಾದನಾ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಅವರನ್ನು ಉತ್ತರಾಧಿಕಾರಿಯಾಗಿ ಘೋಷಣೆ ಮಾಡಲಾಗಿದೆ.


ಮಂಗಳವಾರ ಲಿಂಗೈಕ್ಯರಾದ ಶಿವಯೋಗ ಆಶ್ರಮದ ಶ್ರೀ ರೇವಣಸಿದ್ದ ಸ್ವಾಮೀಜಿ ಅವರು ಬರೆದಿಟ್ಟಿದ್ದ ಮರಣ ಪತ್ರದಂತೆ ಬುಧವಾರ ನೆರೆದಿದ್ದ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಉಯಿಲು ಪತ್ರವನ್ನು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರು ಪ್ರಕಟಿಸಿದರು. ರೇವಣಸಿದ್ಧ ಸ್ವಾಮೀಜಿಗಳ ಅಂತಿಮ ನಮನ ಹಾಗೂ ಶ್ರದ್ದಾಂಜಲಿ ಸಭೆಯಲ್ಲಿ ರಾಜ್ಯದ ಅನೇಕ ಪ್ರತಿಷ್ಠಿತ ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದರು.

ಮೂರುಸಾವಿರ ಮಠ, ತೋಂಟದಾರ್ಯ, ಬೆಕ್ಕಿನಕಲ್ಮಠದ ಗುರುಗಳ ನೇತೃತ್ವದಲ್ಲಿ ಲಿಂಗೈಕ್ಯ ಸ್ವಾಮೀಜಿಗಳಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಸಂಸದ ಬಿ.ವೈ.ರಾಘವೇಂದ್ರ ಅವರು ಮೃತ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ನೆನಪು ಮಾಡಿಕೊಂಡರು.

Ad Widget

Related posts

ಶಾಲಾ ಶಿಕ್ಷಣ ವಿಕಾಸಕ್ಕೆ ಕ್ರಮ : ಮಧುಬಂಗಾರಪ್ಪ,ಸಾಗರ ತಾಲೂಕು ಪ್ರಗತಿಪರಿಶೀಲನಾ ಸಭೆಯಲ್ಲಿ ಸಚಿವರ ಹೇಳಿಕೆ

Malenadu Mirror Desk

ಕಾರು ಅಪಘಾತ: ಮಾಜಿ ಶಾಸಕಿ ಶಾರದಾ ಪೂರ್ಯನಾಯ್ಕರಿಗೆ ಗಾಯ

Malenadu Mirror Desk

ರಾಜ್ಯಪಾಲರ ಮಲ್ನಾಡ್ ಟೂರ್ ಹೇಗಿತ್ತು ಗೊತ್ತಾ ? ಮಳೆನಾಡಿನ ಸಿರಿ ಸವಿದ ಥಾವರ್‌ಚಂದ್ ಗೆಹ್ಲೋಟ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.