Malenadu Mitra
ರಾಜ್ಯ ಶಿವಮೊಗ್ಗ

ನಮ್ಮ ರಾಮ ಹೊಲಗದ್ದೆಗಳಲ್ಲಿದ್ದಾನೆ: ಯುದ್ಧವೀರ್ ಸಿಂಗ್

ರೈತ ನಾಶಕ ಕಂಪನಿಗಳಿಗೆ ಮೋದಿ ಸರಕಾರದ ಬೆಂಗಾವಲು

ದೇಶದಲ್ಲಿ ಕೃಷಿ ಮಾರುಕಟ್ಟೆ ಕಬಳಿಸಲು ಖಾಸಗಿ ಕಂಪೆನಿಗಳು ಸಾಲುಗಟ್ಟಿ ನಿಂತಿವೆ. ಅವುಗಳಿಗೆ ಬೆಂಗಾವಲಾಗಿ ಕೇಂದ್ರ ಸರಕಾರ ನಿಂತಿದೆ. ರೈತ ವಿರೋಧಿ ಕಾಯಿದೆಗಳನ್ನು ರದ್ದು ಮಾಡಬೇಕು ಮತ್ತು ಕನಿಷ್ಟ ಬೆಂಬಲ ಬೆಲೆ ನಿಗದಿಗೆ ಕಾನೂನು ಮಾಡಬೇಕೆಂಬ ನಮ್ಮ ಹೋರಾಟವನ್ನು ದೇಶವ್ಯಾಪಿ ವಿಸ್ತರಿಸುತ್ತೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನೇತಾರ ರಾಕೇಶ್ ಸಿಂಗ್ ಟಿಕಾಯತ್ ಹೇಳಿದರು.
ಭಾನುವಾರ ಶಿವಮೊಗ್ಗ ಪ್ರೆಸ್ ಟ್ರಸ್ಟ್‍ನಲ್ಲಿ ನಡೆದ ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡಿದರು. ನಮ್ಮದು ಯಾವುದೇ ರಾಜಕೀಯ ಪಕ್ಷ ಅಲ್ಲ, ರೈತರ ಪ್ರತಿನಿಧಿಯಾಗಿ ಇಡೀ ದೇಶದ ಅನ್ನದಾತರ ಸಮಸ್ಯೆ ಮುಂದಿಟ್ಟುಕೊಂಡು ಹೋರಾಡುತ್ತೇವೆ. ಕರ್ನಾಟಕ ರಾಜ್ಯದಲ್ಲಿಹೋರಾಟಕ್ಕೆ ವ್ಯಾಪಕ ಬೆಂಬಲ ಸಿಕ್ಕಿದೆ. ದೇಶದ ಉದ್ದಗಲಕ್ಕೂ ಸಂಚಾರ ಮಾಡಿ ರೈತರ ಮುಂದಿರುವ ಸವಾಲುಗಳ ಬಗ್ಗೆ ಹೇಳುತ್ತೇವೆ ಎಂದರು.
ಬಜಾರಿನಲ್ಲಿ ರೈತರಿಂದ ಅಗ್ಗದ ಬೆಲೆಗೆ ರೊಟ್ಟಿ ಕೊಂಡು ಅದನ್ನು ಪ್ರೀಜರ್ ಗೋಡಾನ್‍ನಲ್ಲಿಶೇಖರಿಸಿ ದುಬಾರಿ ಬೆಲೆಗೆ ಮಾರುವ ಅಂಶವೇ ಕೇಂದ್ರ ಸರಕಾರದ ನೂತನ ಕೃಷಿ ಕಾಯಿದೆಗಳಲ್ಲಿದೆ. ಅದಕ್ಕಾಗಿ ಕೇಂದ್ರ ಸರಕಾರ ತಮ್ಮ ವ್ಯಾಪಾರಿ ವರ್ಗವನ್ನು ಇಟ್ಟುಕೊಂಡಿದೆ. ಅವರ ಸಂತೃಪ್ತಿಗಾಗಿ ಕೃಷಿ ಕ್ಷೇತ್ರವನ್ನು ನಾಶ ಮಾಡಲು ಮುಂದಾಗಿದೆ ಎಂದು ಟಿಕಾಯತ್ ಆರೋಪಿಸಿದರು.
ಮತ್ತೊಬ್ಬ ಮುಖಂಡ ಯುದ್ದವೀರ್ ಸಿಂಗ್ ಮಾತನಾಡಿ, ರೈತರ ಸಾಲ ಮನ್ನಾ ಮಾಡದ ಸರಕಾರ ವ್ಯಾಪಾರಿಗಳ ಸಾಲ ಮನ್ನಾ ಮಾಡುತ್ತದೆ. ಅವರಿಗೇ ಅನುಕೂಲವಾದ ಕಾನೂನುಗಳನ್ನು ರಚಿಸಿ ರೈತರನ್ನು ಶೋಷಣೆ ಮಾಡುತ್ತಿದೆ ಎಂದು ಹೇಳಿದರು.
ಗುಜರಾತ್ ಗ್ಯಾಂಗ್‍ಗೆ ಲಾಭ
ಈ ದೇಶದಲ್ಲಿ ಹತ್ತು ಉದ್ಯಮಿಗಳಿಗೆ ಅನುಕೂಲವಾದ ಸರಕಾರ ಮತ್ತು ಕಾಯಿದೆಗಳಿವೆ. ಚುನಾವಣೆಯಲ್ಲಿ ಬಂಡವಾಳ ಹಾಕಿದ ಗುಜರಾತ್ ಉದ್ಯಮಿಗಳನ್ನು ಕಾಪಾಡಲು ಸರಕಾರ ನಿಂತಿದೆ. ಕೃಷಿ ತಿದ್ದುಪಡಿ ಕಾಯಿದೆಗಳೂ ಅವರಿಗೆ ಅನುಕೂಲವಾಗಿಯೇ ಇದೆ. ಇಲ್ಲಿ ಬಡಜನರ ಪರವಾದ ಸರಕಾರ ಇಲ್ಲ. ಸರಕಾರದಲ್ಲಿ ಇರುವವರೂ ಎಲ್ಲವನ್ನೂ ವ್ಯಾಪಾರಿ ಮನೋಭಾವದಿಂದ ನೋಡುತ್ತಾರೆ. ಈ ಕಾರಣದಿಂದಲೇ ಸಾಲು ಸಾಲು ಉದ್ಯಮಗಳನ್ನು ಖಾಸಗೀಕರಣ ಮಾಡಿ ಮಣ್ಣು ಮುಕ್ಕಿಸಲಾಗುತ್ತದೆ ಎಂದು ಯುದ್ದವೀರ್ ಆಕ್ರೋಶ ಹೊರಹಾಕಿದರು.

ನಮ್ಮ ರಾಮ ಹೊಲಗದ್ದೆಗಳಲ್ಲಿದ್ದಾನೆ


ಕೇಂದ್ರ ಸರಕಾರಕ್ಕೆ ರಾಮ ಮತ್ತು ಮಂದಿರ ಎರಡೇ ವಿಷಯಗಳು ಮುಖ್ಯವಾಗಿವೆ. ಅವರೀಗ ರಾಮಮಂದಿರ ಕಟ್ಟುವಲ್ಲಿ ಆಸಕ್ತರಾಗಿದ್ದಾರೆ. ರಾಮನ ಹೆಸರಲ್ಲಿ ಜನರನ್ನು ಭಾವನಾತ್ಮಕವಾಗಿ ಮೋಸಗೊಳಿಸುವುದು ಅವರ ಕಾಯಕ. ನಮ್ಮ ರೈತರ ರಾಮ ಹೃದಯಲ್ಲಿದ್ದಾನೆ. ಅವರಿಗೆ ಮಂದಿರಕ್ಕೆ ಹೋಗಲು ಸಮಯವಿಲ್ಲ. ಹೊಲ ಗದ್ದೆಗಳಲ್ಲಿ ದುಡಿಯುವ ಮೂಲಕ ರಾಮನನ್ನು ರೈತರು ಕಾಣುತ್ತಾರೆ. ಕೊಟ್ಟಿಗೆಯಲ್ಲಿರುವ ಎತ್ತು ಹಸುಗಳೇ ಅವರಿಗೆ ರಾಮ-ಸೀತೆಯರು ಅವರನ್ನೇ ನಿತ್ಯ ಪೂಜಿಸುವ ರೈತರನ್ನು ಕಾಣದ ರಾಮನ ಹೆಸರು ಹೇಳಿಕೊಂಡು ವಂಚನೆ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಈ ಬಗ್ಗೆ ನಮ್ಮ ಯುವ ರೈತರು ಎಚ್ಚರಿಕೆಯಿಂದಿರಬೇಕೆಂದು ಹೇಳಿದರು.


ಬೀಜ ಮೊಳಕೆಯೊಡೆದು ಫಸಲಾಗುತ್ತದೆ


ದೇಶದ ಅನ್ನದಾತರು ಕರಾಳ ಕಾಯಿದೆ ಮತ್ತು ಬ್ಲಾಕ್ ಮಾರ್ಕೆಟ್ ಸೂತ್ರದಾರರ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ಚಳವಳಿ ಎನ್ನುವುದು ನಿರಂತರ ಪ್ರಕ್ರಿಯೆ. ನಾಳೆನೇ ಗೆದ್ದುಬಿಡುವ ಭ್ರಮೆಯೂ ನಮಗಿಲ್ಲ. ಭೂಮಿಗೆ ಭೀಜ ಹಾಕಿ ಫಲಕೊಡುತ್ತದೆ ಎಂದು ಕಾಯುವ ರೈತರು ನಾವು . ಮೂರು ತಿಂಗಳಿಂದ ಹತ್ತು ವರ್ಷಗಳವರೆಗೆ ಬೆಳೆ ಬರುತ್ತದೆ ಎಂದು ನೀರು ಗೊಬ್ಬರ ಹಾಕುತ್ತಿರುತ್ತೇವೆ. ಈಗ ಈ ಹೋರಾಟದ ಬೀಜವನ್ನು ಹೊಲಕ್ಕೆ ಹಾಕಿದ್ದೇವೆ. ಅದನ್ನು ಬೆಳೆಸುವ ರೈತ ನಾಯಕರು, ಯುವಕರು ಹಾಗೂ ವಿದ್ಯಾವಂತರು ದೇಶಾದ್ಯಂತ ಇದ್ದಾರೆ ಎಂಬ ನಂಬಿಕೆ ಇದೆ. ಈ ಹೋರಾಟ ಮುಂದೊಂದು ದಿನ ಫಲಕೊಡುತ್ತದೆ. ಅಲ್ಲೀತನಕ ವಿರಮಿಸುವುದಿಲ್ಲ ಎಂದು ಯುದ್ದವೀರ್ ಸಿಂಗ್ ಹೇಳಿದರು.
ಪ್ರೆಸ್‍ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ರೈತಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಸುನಂದಾ ಜಯರಾಂ, ಕೆ.ಟಿ.ಗಂಗಾಧರ್, ಬಸವರಾಜಪ್ಪ, ಕೋಡಿಹಳ್ಳಿ ಚಂದ್ರಶೇಖರ್ ಇದ್ದರು.ವಿ.ಸಿ.ಪ್ರಸನ್ನ ಸ್ವಾಗತಿಸಿದರು.


ಶಿವಮೊಗ್ಗ ರೈತಮಹಾಪಂಚಾಯತ್ ಆಯೋಜಕರು ಇದೇ ಸಂದರ್ಭ ರೈತ ನಾಯಕರನ್ನು ಸನ್ಮಾನಿಸಿ ಬೀಳ್ಕೊಟ್ಟರು, ಎಂ.ಶ್ರೀಕಾಂತ್, ಎನ್.ರಮೇಶ್, ಯೋಗಿಶ್, ಕೆ.ಪಿಶ್ರೀಪಾಲ್, ಕಾಶಿ ವಿಶ್ವನಾಥ್, ಎಂ.ಗುರುಮೂರ್ತಿ ಅಶೋಕ್ ಮತ್ತಿತರರಿದ್ದರು.

Ad Widget

Related posts

ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆ ಮಾಡಬೇಕು: ಮಾಜಿ ಶಾಸಕ ಬಿ.ಸ್ವಾಮಿರಾವ್‌

Malenadu Mirror Desk

ಸಿದ್ದರಾಮಯ್ಯರಿಂದ ಕಾಂಗ್ರೆಸ್ ನಿರ್ನಾಮ

Malenadu Mirror Desk

ಶಿವಮೊಗ್ಗದಲ್ಲಿ ಶನಿವಾರ 14 ಸೋಂಕಿತರು ನಿಧನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.