ರಿಪ್ಪನ್‍ಪೇಟೆ: ಒಂದು ಕಡೆ ರಾಜ್ಯದ ನಾಗರೀಕರು ಕೊರೊನಾ ಸಂಕಷ್ಟದಿಂದ ಬಳಲುತ್ತಿದ್ದರೆ.ಇನ್ನೂಂದಡೆ ಅಶ್ಲೀಲ ಸಿಡಿ ಪ್ರಕರಣದಿಂದ ದೇಶದಲ್ಲಿ ರಾಜ್ಯದ ಮಾನ ಹರಾಜಾಗುತ್ತಿದೆ ಇದಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಮಾಜಿ ಶಾಸಕ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದಿನಬೆಳಗಾದರೆ ಮಾಜಿ ಸಚಿವ ರಮೇಶ್ ಜಾರಕಿಹೋಳಿಯವರದ್ದೆನ್ನಲಾದ ಮಾದ್ಯಮಗಳಲ್ಲಿ ಸಿಡಿಯದ್ದೆ ದೃಶ್ಯಾವಳಿಗಳ ಜೊತೆಗೆ ವಿವರಣೆ ಬರುತ್ತಿದೆ. ಇದರಿಂದ ಮನೆಮಂದಿಯೆಲ್ಲ ಮುಜುಗರ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಹಳಷ್ಟು ಮನೆಗಳಲ್ಲಿ ರಾಜ್ಯ ಸರ್ಕಾರದ ಸಿಡಿಯಿಂದ ಟಿವಿ ನೋಡುವುದನ್ನೆ ಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುವ ಮೂಲಕ ರಾಜ್ಯದ ಮರ್ಯಾದೆ ರಾಷ್ಟ್ರ ಮಟ್ಟದಲ್ಲಿ ಅಪಹಾಸ್ಯಕ್ಕೊಳಗಾಗಿದೆ ಎಂದರು.
ಶಾಸಕರ ನಿರ್ಲಕ್ಷ್ಯದ ವಿರುದ್ಧ ಬೃಹತ್ ಪ್ರತಿಭಟನೆ
ಸಾಗರ ವಿಧಾನಸಭಾ ಕ್ಷೇತ್ರದಲ್ಲಿನ ಹೊಸನಗರ ಮತ್ತು ಸಾಗರ ತಾಲೂಕಿನನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಗುಣಮಟ್ಟವಿಲ್ಲದ ವಿದ್ಯುತ್‍ನಿಂದ ರೈತರು ತಮ್ಮ ಹೊಲಗದ್ದೆಗಳಿಗೆ ನೀರುಣಿಸಲಾಗದೆ ಹೈರಾಣಾಗಿದ್ದಾರೆ. ಆದರೆ ಇಲ್ಲಿನ ಶಾಸಕರು ಮಾತ್ರ ಕಾಗೋಡು ತಿಮ್ಮಪ್ಪನವರು ಮಂಜೂರು ಮಾಡಿದ್ದ ವಿದ್ಯುತ್ ಪರಿವರ್ತಕಗಳನ್ನು ಉದ್ಘಾಟನೆ ಮಾಡಿ ಗುಣಮಟ್ಟದ ವಿದ್ಯುತ್ ನೀಡಿದ್ದೇನೆಂದು ನಾಟಕವಾಡುತ್ತಿದ್ದಾರೆ. ಇಲ್ಲಿಯವರೆಗೆ ಒಂದೇಒಂದು ವಿದ್ಯುತ್ ಸರಬರಾಜು ಘಟಕವಾಗಲೀ, ಉಪವಿದ್ಯುತ್ ವಿತರಣಾ ಘಟಕವಾಗಲೀ ಮಂಜೂರು ಮಾಡಿಸದ ಶಾಸಕರು ಜನರ ಮುಂದೆ ಹಗಲು ನಾಟಕ ಮಾಡುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ರಾಜ್ಯ-ಕೇಂದ್ರ ಸರಕಾರಗಳ ಜನರ ವಿರೋಧಿ ನೀತಿ, ಕ್ಷೇತ್ರ ಅಭಿವೃದ್ಧಿಯಲ್ಲಿ ಶಾಸಕರ ನಿರ್ಲಕ್ಷ್ಯದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.