Malenadu Mitra
ಶಿವಮೊಗ್ಗ

ಪೋಲೀಸ್ ಇಲಾಖೆಯು ಘನತೆ ಹೊಂದಿರುವ ಇಲಾಖೆ: ಜಿ.ವಿ. ಗಣೇಶಪ್ಪ

ಪ್ರತಿವರ್ಷ ಏಪ್ರಿಲ್ -2ರಂದು ರಾಜ್ಯದ ಎಲ್ಲಾ ಪೊಲೀಸ್ ಘಟಕಗಳಲ್ಲಿ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತದೆ. 1965 ಏಪ್ರಿಲ್ 2ರಂದು ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ ಜಾರಿಯಲ್ಲಿ ಬಂದಿದ್ದು, ಈ ದಿನವನ್ನು ಪೊಲೀಸ್ ಧ್ವಜ ದಿನಾಚರಣೆಯನ್ನಾಗಿ ಆಚರಿಸಿ ಪೊಲೀಸ್ ಸೇವೆಯಲ್ಲಿ ಇರುವವರೆಲ್ಲರೂ ತಮ್ಮನ್ನು ಸೇವೆಗೆ ಪುನರ್ ಸಮರ್ಪಿಸಿಕೊಳ್ಳುವುದಲ್ಲದೇ, ಈ ದಿನವನ್ನು “ಪೊಲೀಸ್ ಕಲ್ಯಾಣ ದಿನ” ವನ್ನಾಗಿ ಕೂಡಾ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ನೆನಸಿ ಅವರ ಕಲ್ಯಾಣ ಕಾರ್ಯಕ್ರಮವನ್ನು ಚಿಂತಿಸಲಾಗುತ್ತದೆ. ಎಂದು ಶಿವಮೊಗ್ಗ ಜಿಲ್ಲೆಯ ನಿವೃತ್ತ ಸಿ.ಪಿ.ಐ ಜಿ.ವಿ. ಗಣೇಶಪ್ಪ ಇವರು ಹೇಳಿದರು.
ನಗರದ ಜಿಲ್ಲಾ ಪೋಲೀಸ್ ಕವಾಯತು ಮೈದಾನದಲ್ಲಿ ಪೋಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಇವರು ಮಾತನಾಡಿದರು.
ಜೀವನದಲ್ಲಿ ಅತ್ಯಂತ ಸುಂದರವಾದ ಘನತೆ ಹೊಂದಿರುವ ಇಲಾಖೆ ಪೊಲೀಸ್ ಇಲಾಖೆ. ಈ ಇಲಾಖೆಯ ಘನತೆ ಗೌರವಗಳನ್ನ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ದೇಶದಲ್ಲೆ ಅತ್ಯಂತ ಹೆಮ್ಮೆ ಪಡುವ ಇಲಾಖೆ ನಮ್ಮ ಕರ್ನಾಟಕ ಪೊಲೀಸ್ ಇಲಾಖೆ. ಈ ಒಂದು ರೀತಿಯಲ್ಲಿ ಹೆಸರುವಾಸಿಯಾಗಿರುವ ಇಲಾಖೆಯನ್ನು ಇದೇ ರೀತಿಯಾಗಿ ಮುಂದುವರೆಸಿಕೊಂಡು ಹೋಗಲು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಣತೂಟ್ಟು ಕಾರ್ಯ ನಿರ್ವಹಿಸಬೇಕು. ವೃತ್ತಿಯನ್ನು ಕಾರ್ಯ ನಿಷ್ಠೆಯಿಂದ ನಿರ್ವಹಿಸಿದ್ದೇ ಆದರೆ‌ ಜೀವನದಲ್ಲಿ ಒಂದು ಉನ್ನತ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಇವರು ಹೇಳಿದರು.
ಇದೇ ಸಂದರ್ಭದಲ್ಲಿ ಇಲಾಖೆಯಿಂದ ನಿವೃತ್ತಿಯಾದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ನಿವೃತ್ತಿ ಗುರುತಿನ ಚೀಟಿ, ಕಟ್ಟಡಗಳು,ಗ್ರಂಥಾಲಯ, ನಿವೃತ್ತ ಪೋಲಿಸ್ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಭವನ ಹಾಗೂ ಇನ್ನೂ ಹಲವು ಬೇಡಿಕೆಯನ್ನ ಅಧಿಕಾರಿಗಳ ಮುಂದಿಟ್ಟರು.
ಕಾರ್ಯಕ್ರಮದಲ್ಲಿ ಈವರೆಗೆ ಪೋಲಿಸ್ ಇಲಾಖೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸೇವೆಯನ್ನು ಸ್ಮರಿಸಿ ಅವರಿಗಾಗಿ ಹಲವಾರು ಯೋಜನೆಯನ್ನು ಮಾಡಲಾಗಿದೆ. ಇವರ ಕ್ಷೇಮಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪೋಲಿಸ್ ಕಲ್ಯಾಣ ನಿಧಿಯನ್ನು ಸ್ಥಾಪಿಸಲಾಗಿದೆ ಆದ ಕಾರಣ ಈ ದಿನದಂದು ಪೋಲಿಸ್ ಸಾಂಕೇತಿಕ ಧ್ವಜಗಳನ್ನು ಪೋಲಿಸ್ ಅಧಿಕಾರಿಗಳಿಗೆ ಆಹ್ವಾನಿತ ಗಣ್ಯರಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಿ ಸಂಗ್ರಹವಾದ ಹಣದಲ್ಲಿ ಶೇ.50%ರಷ್ಟು ಮೊತ್ತವನ್ನು ನಿವೃತ್ತ ಪೋಲಿಸ್ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. ಶೇ.25%ರಷ್ಟನ್ನು ಘಟಕದ ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಲಾಗುತ್ತದೆ. ಹಾಗೂ ಶೇ.25%ರಷ್ಟು ಮೊತ್ತವನ್ನು ಕೇಂದ್ರ ಕಲ್ಯಾಣ ನಿಧಿಗೆ ಬಳಸಲಾಗುತ್ತದೆ. ಹಾಗೂ ನಿವೃತ್ತ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತೀವ್ರವಾದ ಕಾಯಿಲೆಯಿಂದ ಬಳಲುತ್ತಿದ್ದರೆ ಅವರ ಔಷದೋಪಚಾರ ಖರ್ಚಿಗಾಗಿ ಧನ ಸಹಾಯ ಮಾಡಲಾಗುತ್ತದೆ. ನಿವೃತ್ತಿ ಹೊಂದಿದ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮರಣ ಹೂಂದಿದಾಗಾವರ ಶವ ಸಂಸ್ಕಾರಕ್ಕಾಗಿ ಧನ ಸಹಾಯ ನೀಡಲಾಗುವುದು. ಹಾಗೂ2020 ನೇ ಸಾಲಿನಲ್ಲಿ ಸಾರ್ವಜನಿಕರು ಪೋಲಿಸ್ ಕಲ್ಯಾಣ ನಿಧಿಗೆ ಧನ ಸಹಾಯ ಮಾಡಲಾಗಿದ್ದು ಇದರ ಮೊತ್ತವು 11,06,361 ರೂಗಳು ಸಂಗ್ರಹವಾಗಿದ್ದು ಎಲ್ಲಾ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ. ಹಾಗೂ ಜಿಲ್ಲೆಯ ನಿವೃತ್ತ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಜಾರಿ ಮಾಡಲಾಗಿರುವ ಹಲವಾರು ಯೋಜನೆಗಳನ್ನ ಕುರಿತಂತೆ ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಶೇಕರ್ ಹೆಚ್.ಟಿ ಇವರು ವರದಿಯನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಎಂಟು ತುಕಡಿಗಳು ಪತಸಂಚಲನದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಗಮನ ಸೆಳೆದರು. ಹಾಗೂ ಸಕಲ ಗೌರವಗಳೂಂದಿಗೆ ಜಿ.ವಿ ಗಣೇಶಪ್ಪರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪೋಲೀಸ್ ಅಧೀಕ್ಷಕರು ಕೆ.ಎಂ ಶಾಂತರಾಜು, ಮಹಾನಗರ ಪಾಲಿಕೆಯ ಮೇಯರ್ ಸುನಿತ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಮತ್ತು ನಿವೃತ್ತ ಪೋಲಿಸ್ ಅಧಿಕಾರಿಗಳು, ಸಿಬ್ಬಂದಿಗಳು, ಮತ್ತಿತರು ಹಾಜರಿದ್ದರು.

Ad Widget

Related posts

ಕೋವಿಡ್ ಚಿಕಿತ್ಸೆಗೆ 10 ವೈದ್ಯರ ನೇಮಕ

Malenadu Mirror Desk

ಪದವೀಧರ ಸಹಕಾರ ಸಂಘದ ಸುವರ್ಣ ಮಹೋತ್ಸವ

Malenadu Mirror Desk

ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಕುಡಿಯುವ ನೀರನ್ನು ಒದಗಿಸಲು  ಅಗತ್ಯ ಕ್ರಮ ಕೈಗೊಳ್ಳಿ ; ಮಧು ಬಂಗಾರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.