Malenadu Mitra
ರಾಜ್ಯ ಶಿವಮೊಗ್ಗ

ಎಸ್‌ಐಟಿಯಿಂದ ಪಾರದರ್ಶಕ ತನಿಖೆ:ಪ್ರವೀಣ್ ಸೂದ್

ಶಿವಮೊಗ್ಗ ಏ.೬: ಹುಣಸೋಡು ಜಿಲೆಟಿನ್ ಸ್ಫೋಟ ಪ್ರಕರಣದ ತನಿಖೆಯಾಗಿದ್ದು, ಶೀಘ್ರವೇ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದರು.
ಇಲಾಖೆ ಹಿರಿಯ ಅಧಿಕಾರಿಗಳ ಸಭೆಯ ಬಳಿಕ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಣಸೋಡು ಪ್ರಕರಣ ನೆರೆಯ ರಾಜ್ಯಗಳಿಗೂ ವಿಸ್ತರಿಸಿದ್ದರಿಂದ ನಮ್ಮ ಅಧಿಕಾರಿಗಳು ಎಲ್ಲವನ್ನೂ ತನಿಖೆ ಮಾಡಿದ್ದು, ಶೀಘ್ರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದರು.

ಶಿವಮೊಗ್ಗದ ಪೊಲೀಸ್ ಇಲಾಖೆಯಲ್ಲಿ ಕೆಲವು ಸಮಸ್ಯೆಗಳಿವೆ.ಸಿಬ್ಬಂಧಿಗಳಿಗೆ ಕ್ವಾಟ್ರಸ್ ಸಮಸ್ಯೆ ಇದೆ.ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗಳ ಕೊರತೆ ಇದೆ.ಅದೆಲ್ಲಕ್ಕೂ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಪ್ರವೀಣ್ ಸೂದ್ ಹೇಳಿದರು.ಶಿವಮೊಗ್ಗದ ಹಲವು ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ಇನ್ ಸ್ಪೆಕ್ಟರ್ ಗಳನ್ನು ನೀಡಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ತಹಬದಿಗೆ ಬರಬೇಕು ಹಾಗು ಪೆಂಡಿಂಗ್ ಇರುವ ಕ್ರಿಮನಲ್ ಕೇಸುಗಳನ್ನು ಬೇಗ ಮುಗಿಸಬೇಕು. ಹಿಂದಿನ ಎಸ್ಪಿ ಎಸ್ಪಿ ಶಾಂತರಾಜು ಅವರ ನೇತ್ರತ್ವದಲ್ಲಿ ಶಿವಮೊಗ್ಗದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ ಅವರಿಗೆ ವಿಶೇಷ ಅಭಿನಂದನೆಗಳು ಎಂದು ಪ್ರವೀಣ್ ಸೂದ್ ಹೇಳಿದರು.

ಎಸ್‌ಐಟಿ ಸ್ವಂತಂತ್ರ ತನಿಖೆ


ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭಾಗಿಯಾಗಿದ್ದಾರೆನ್ನಲಾದ ಸಿಡಿ ಪ್ರಕರಣದ ತನಿಖೆಗಾಗಿಯೇ ಎಸ್‌ಐಟಿ ರಚನೆ ಮಾಡಲಾಗಿದೆ. ಅದು ಸ್ವತಂತ್ರ ಹಾಗೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದೆ. ಅದರ ಕಾರ್ಯ ಚಟುವಟಿಕೆ ಬಗ್ಗೆ ಬೆಂಗಳೂರು ಪೊಲೀಸ್ ಕಮೀಷನರ್ ಈಗಾಗಲೇ ಮಾಹಿತಿ ನೀಡಿದ್ದಾರೆ. ತನಿಖೆ ಎಲ್ಲಾ ಆಯಾಮಗಳಲ್ಲೂ ನಡೆಯುತ್ತಿದೆ. ವಿಚಾರಣೆ ಹಂತದಲ್ಲಿ ತನಿಖೆಯ ದಿಕ್ಕು-ದೆಸೆಗಳ ಬಗ್ಗೆ ಕೇಳಬಾರದು, ಈ ಹಂತದಲ್ಲಿ ಹೇಳುವುದೂ ಸರಿಯಲ್ಲ. ತನಿಖಾ ವರದಿ ಸಲ್ಲಿಸುವಂತೆ ಹೈಕೋರ್ಟ್ ಕೇಳಿರುವುದರಿಂದ ಎಸ್‌ಐಟಿ ವರದಿ ಸಲ್ಲಿಸಲಿದೆ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಪ್ರವೀಣ್ ಸೂದ್ ಹೇಳಿದರು.

ಕಮಿಷನರೇಟ್ ಸರಕಾರಕ್ಕೆ ಬಿಟ್ಟಿದ್ದು

ಶಿವಮೊಗ್ಗ ಪೊಲೀಸ್ ಕಮಿಷನರೇಟ್ ಮಾಡುವ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಮಿಷನರೇಟ್ ಮಾಡಲು ಜನಸಂಖ್ಯೆ, ಕ್ರೈಮ್ ರೇಟ್ ಇತ್ಯಾದಿ ಮಾನದಂಡಗಳಿರುತ್ತವೆ. ಈ ವಿಚಾರ ಸರಕಾರಕ್ಕೆ ಬಿಟ್ಟಿದ್ದು ಎಂದು ಪ್ರವೀಣ್ ಸೂದ್ ಹೇಳಿದರು. ಇದಕ್ಕೂ ಮುನ್ನ ಶಿವಮೊಗ್ಗ ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಯಿತು. ದಾವಣಗೆರೆ ಪೂರ್ವವಲಯ ಐಜಿ ರವಿ, ಎಸ್ಪಿ ಲಕ್ಷ್ಮೀ ಪ್ರಸಾದ್, ಎ ಎಸ್ಪಿ ಶೇಖರ್ ಸೇರಿದಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.  

Ad Widget

Related posts

ಬಿಜೆಪಿ ಸೇರಲ್ಲ ಆದರೆ ಪಕ್ಷದ ಪರ ಪ್ರಚಾರ ಮಾಡುವೆ: ಕಿಚ್ಚ ಸುದೀಪ್

Malenadu Mirror Desk

ಉದ್ರಿಕ್ತರ ನಿಯಂತ್ರಿಸಲು ಪೊಲೀಸರು ಹೈರಾಣ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ, ನಿಷೇಧಾಜ್ಞೆ ನಡುವೆಯೂ ಮೆರವಣಿಗೆ, ನೀವು ಹೇಳಿದಾಕ್ಷಣ ಎನ್‌ಕೌಂಟರ್ ಮಾಡಲಾಗದು: ಈಶ್ವರಪ್ಪ

Malenadu Mirror Desk

ಶಿವಮೊಗ್ಗದಲ್ಲಿ ಕೊರೊನ ಸೋಂಕಿತರ ಸಂಖ್ಯೆ ಹೆಚ್ಚಳ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.