ಗಾಂಜಾ ಸಾಗಣೆ ಮಾಡುತ್ತಿದ್ದ ಐದು ಜನ ಆರೋಪಿಗಳನ್ನು ಶುಕ್ರವಾರ ಬಂಧಿಸಿ, ಅವರಿಂ ದ 1 ಕೆ.ಜಿ ಗಾಂಜಾ, 3 ತಲ್ವಾರ್ ಹಾಗೂ 2,585 ರೂ. ನಗದು ವಶಕ್ಕೆ ಪಡೆಯಲಾಗಿದೆ.
ಅಣ್ಣಾನಗರದ ಅಬ್ದುಲ್ ಮುನಾಫ್(22), ಮಿಳ್ಳಘಟ್ಟದ ಅಸಾದಿ ಅಲಿಯಾಸ್ ಅಸಾದುಲ್ಲಾಖಾನ್(22), ಮಂಜುನಾಥ ಬಡಾವಣೆಯ ಮಹಮದ್ ಅನಾಸ್(18), ಟಿಪ್ಪುನಗರದ ನಿವಾಸಿಗಳಾದ ಸೈಯ್ಯದ್ ಇಬ್ರತ್ ಖಾನ್(19), ಸಾದತ್ ಇಮ್ತಿಯಾಜ್(23), ಗುಲಾಮ್ ನಾಜ್(34) ಬಂಧಿತ ಆರೋಪಿಗಳು.
ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಟಿಪ್ಪುನಗರದಲ್ಲಿಗಾಂಜಾ ಮಾರಾಟ ಮಾಡುವುದಕ್ಕಾಗಿ ತೆಗೆದುಕೊಂಡು ಹೋಗುವಾಗ ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ, ತುಂಗಾನಗರ ಪೊಲೀಸ್ ಠಾಣೆ ಪಿಐ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.