ಶಿವಮೊಗ್ಗದ ಶ್ರೀಗಂಧ,ಶ್ರೀ ಶನೈಶ್ಚರ ದೇವಾಲಯ ಸಮಿತಿ ಹಾಗೂ ನಾಟ್ಯಶ್ರೀ ಕಲಾ ತಂಡಗಳು ಸಂಯುಕ್ತಾಶ್ರಯದಲ್ಲಿ ಏಪ್ರಿಲ್ ೧೬ ರಿಂದ ೨೨ ರವರೆಗೆ ಶ್ರೀರಾಮಾಯಣ ಕಥಾಮೃತ ಸಪ್ತಾಹ ಆಯೋಜಿಸಲಾಗಿದೆ.
ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಂಧ ಸಂಸ್ಥೆಯ ಕಾರ್ಯದರ್ಶಿ ಬಿ.ಆರ್.ಮಧುಸೂದನ್ ಮಾತನಾಡಿ, ಶ್ರೀಗಂಧ ಸಂಸ್ಥೆ ಧಾರ್ಮಿಕ, ಆದ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನಮನ ಗೆದ್ದಿದೆ. ಈ ಬಾರಿ ಕಾರ್ಯಕ್ರಮದಲ್ಲಿ ಪ್ರತಿದಿನ ನಾಡಿನ ವಿವಿಧ ಮಠದ ಸ್ವಾಮೀಜಿಗಳಿಂದ ಉದ್ಗಾಟನೆ, ಆಶೀರ್ವಚನ ಮತ್ತು ಏಳೂಕಾಂಡಗಳ ಶ್ರೀರಾಮಾಯಣ ವ್ಯಾಖ್ಯಾನ, ಯಕ್ಷಗಾನ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮಕ್ಕೆ ನಾಡಿನ ಧರ್ಮಗುರುಗಳು ಭಾಗವಹಿಸುವರು. ವಿನೋಬನಗರ ಶನೈಶ್ಚರ ದೇಗುಲದ ಆವರಣದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಿದರು.
ವಿದ್ವಾನ್ ದತ್ತಮೂರ್ತಿ ಭಟ್, ಅಶ್ವತ್ಥನಾರಾಯಣ ಶೆಟ್ಟಿ, ವಿ.ರಾಜು, ಆಚಿ ಪ್ರಕಾಶ್ ಮತ್ತಿತರರಿದ್ದರು.
previous post