ಶಿವಮೊಗ್ಗದ ಪಿಇಎಸ್ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ವರದಿಯಾಗಿದೆ.
ಗಾಂಧಿ ಬಜಾರ್‌ನ ತಿಗಳಯ್ಯನ ಕೇರಿಯ ನಿವಾಸಿಯಾಗಿದ್ದ ಜೆ.ಸ್ವಾತಿ (೨೬) ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಪಿಇಎಸ್ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಆಗಿರುವ ಪ್ರಾಧ್ಯಾಪಕಿ ಸ್ವಾತಿ, ೫ ವರ್ಷದಿಂದ ಕೆಲಸ ಮಾಡುತ್ತಿದ್ದಾರೆ.
ಇವರಿಗೆ ಕಳೆದ ಒಂದು ತಿಂಗಳ ಹಿಂದಷ್ಟೆ ಮದುವೆ ನಿಶ್ಚಿತಾರ್ಥವಾಗಿತ್ತು. ಈ ಮದುವೆ ವಿಚಾರದಲ್ಲಿ ಶಿಕ್ಷಕಿ ನೇಣಿಗೆ ಶರಣಾಗಿರಬಹುದು ಎಂಬುದು ಸ್ಥಳೀಯರ ಅನುಮಾನವಾಗಿದೆ.
ಬುಧವಾರ ಮಧ್ಯಾಹ್ನ ಪ್ರಾಧ್ಯಾಪಕಿ ನೇಣು ಬಿಗಿದು ಕೊಂಡು ಸಾವನ್ನಪ್ಪಿದ್ದಾಳೆ. ತಕ್ಷಣವೇ ಮೆಗ್ಗಾನ್‌ಗೆ ಸಾಗಿಸ ಲಾದರೂ ಮಾರ್ಗ ಮಧ್ಯದಲ್ಲಿ ಆಕೆ ಅಸುನೀಗಿದ್ದಾರೆ
previous post