ರಾಜದಾನಿ ಬೆಂಗಳೂರಿಗೆ ಮಾತ್ರ ಕೊರೊನ ಆರ್ಭಟ ಸೀಮಿತವಾಗಿಲ್ಲ, ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿಯೂ ಇದು ವೇಗ ಪಡೆದುಕೊಳ್ಳುತ್ತಿದ್ದು, ಸಾರ್ವಜನಿಕರು ಸ್ವಯಂ ಜಾಗ್ರತೆ ವಹಿಸಬೇಕಾಗಿರುವ ಅಗತ್ಯವಿದೆ. ಭಾನುವಾರ ಒಂದೇ ದಿನ 155 ಸೋಂಕು ಪ್ರಕರಣಗಳು ಪತ್ತೆಯಾಗುವ ಮೂಲಕ ಆತಂಕ ಹೆಚ್ಚಿಸಿದೆ. ಜಿಲ್ಲಾಕೇಂದ್ರ ಶಿವಮೊಗ್ಗದಲ್ಲಿ 55, ಭದ್ರಾವತಿ ತಾಲೂಕಿನಲ್ಲಿ -47,ಶಿಕಾರಿಪುರ-7, ತೀರ್ಥಹಳ್ಳಿ-2,ಸೊರಬಾ-4 ಸಾಗರದಲ್ಲಿ-9,ಹೊಸನಗರ -22 ಹಾಗೂ ಅನ್ಯಜಿಲ್ಲೆಗಳಿಂದ ಬಂದವರಲ್ಲಿ 9 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 4 ಮಂದಿ ವಿದ್ಯಾರ್ಥಿಗಳೂ ಸೇರಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಒಟ್ಟು 731 ಸಕ್ರಿಯ ಪ್ರಕರಣಗಳಿವೆ. 466 ಮಂದಿಗೆ ಹೋಮ್ ಐಸೋಲೇಷನ್‌ಗೆ ಒಳಪಡಿಸಲಾಗಿದೆ.
previous post
next post