Malenadu Mitra
ರಾಜ್ಯ ಶಿವಮೊಗ್ಗ

ಭದ್ರಾವತಿಯಲ್ಲಿ ಬಿಜೆಪಿ ಮತಪ್ರಚಾರ

ಕೊರೊನ ಕಾವಲ್ಲೇ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರಸಭೆ ಹಾಗೂ ತೀರ್ಥಹಳ್ಳಿ ಪಟ್ಟಣಪಂಚಾಯಿತಿ ಚುನಾವಣೆ ಕಾವೂ ಏರಿದೆ. ಆಡಳಿತಾರೂಢ ಬಿಜೆಪಿಗೆ ಈ ಎರಡೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಕಾರಣಕ್ಕಾಗಿಯೇ ಬಿಜೆಪಿ ನಾಯಕರು ಕೊರೊನ ನಿಯಮಾವಳಿಯನ್ನೂ ಗಾಳಿಗೆ ತೂರಿ ಭರದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಸಚಿವ -ಸಂಸದರ ಪ್ರಚಾರ:
ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರು ಭದ್ರಾವತಿಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಪ್ರಬಲವಾಗಿರುವ ಬಿಜೆಪಿ ಭದ್ರಾವತಿಯಲ್ಲಿ ಮಾತ್ರ ಶೂನ್ಯ ಸಾಧನೆಯಲ್ಲಿದೆ. ಈ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿಗಳ ನಡುವೆ ಚುನಾವಣೆ ನಡೆಯುವುದರಿಂದ ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡರು ಹಾಗೂ ಹಾಲಿ ಶಾಸಕ ಬಿ.ಕೆ.ಸಂಗಮೇಶ್ ಅವರು ಉಕ್ಕಿನ ನಗರಿಯಲ್ಲಿ ಕಮಲದ ದಳಗಳು ಅರಳಲು ಅವಕಾಶವನ್ನೇ ನೀಡಿರಲಿಲ್ಲ.
ಅಪ್ಪಾಜಿಗೌಡರು ನಿಧನರಾದ ಬಳಿಕ ಆ ಜಾಗ ತುಂಬಲು ಬಿಜೆಪಿ ಹವಣಿಸುತ್ತಿದೆ. ಈ ಕಾರಣದಿಂದಲೇ ನಗರಸಭೆಯನ್ನು ತೆಕ್ಕೆಗೆ ಹಾಕಿಕೊಳ್ಳುವ ಉದ್ದೇಶ ಹೊಂದಿದೆ. ಇತ್ತೀಚೆಗೆ ನಡೆದಿದ್ದ ಕಬಡ್ಡಿ ಪಂದ್ಯಾವಳಿ ಸಂದರ್ಭದಲ್ಲಿನ ಗಲಾಟೆಯಲ್ಲಿ ರಾಜಕೀಯ ಫಸಲು ಕೊಯ್ಯುವ ಯತ್ನವೂ ಆಗಿತ್ತು.

ಮಂಗಳವಾರ ಸಚಿವ ಈಶ್ವರಪ್ಪ ಅವರು ನಗರದ ವಿವಿಧ ಬಡಾವಣೆಗಳಲ್ಲಿ ಪ್ರಚಾರ ಮಾಡಿ ಬಿಜೆಪಿಗೆ ಜತೆ ಕೈಜೋಡಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ. ಬುಧವಾರ ಸಂಸದ ಬಿ.ವೈ ರಾಘವೇಂದ್ರ ಅವರು ಧರ್ಮಪ್ರಸಾದ್, ಕದಿರೇಶ್ ಸೇರಿದಂತೆ ಪಕ್ಷದ ಹಿರಿಯರು ಸ್ಪರ್ಧೆ ಮಾಡಿರುವ ವಾರ್ಡುಗಳಲ್ಲಿ ಮತಯಾಚನೆ ಮಾಡಿದ್ದಾರೆ.

Ad Widget

Related posts

ಬಿಜೆಪಿ ಸಭೆಯಲ್ಲಿ ಮಲೆನಾಡಿನ ಸಮಸ್ಯೆಗಳೂ ಧ್ವನಿಸಲಿ

Malenadu Mirror Desk

ಶಾಸಕ ಅಶೋಕ್ ನಾಯ್ಕ ಭರದ ಪ್ರಚಾರ

Malenadu Mirror Desk

ಶಿವಮೊಗ್ಗದಲ್ಲಿ 1 ಸಾವು, 518 ಮಂದಿಗೆ ಸೋಂಕು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.