Malenadu Mitra
ರಾಜ್ಯ ಶಿವಮೊಗ್ಗ

ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ 18 ಎಕರೆ ಭೂಮಿ ಕೊಡಿ ವಿವಿ ಕುಲಪತಿಗೆ ಜಿಲ್ಲಾಧಿಕಾರಿ ಪತ್ರ

ಶಿವಮೊಗ್ಗದ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಖೇಲೋ ಇಂಡಿಯಾ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಿರುವುದು ವಿಶೇಷ ಕ್ರೀಡಾ ತರಬೇತಿ ಕೇಂದ್ರವಾಗಿದ್ದು, ಇದಕ್ಕೆ18.4 ಎಕರೆ ಭೂಮಿಯನ್ನು ಕೊಡುವಂತೆ ವಿವಿ ಕುಲಪತಿಗೆ ಜಿಲ್ಲಾಡಳಿತ ಪತ್ರ ಬರೆದಿದೆ.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಕುವೆಂಪುವಿವಿ ಕುಲಪತಿಯವರಿಗೆ ದಿನಾಂಕ 16-04-2021ರಂದು ಪತ್ರ(ಸನಿ:ಯುಸಕ್ರೀಇ/ಎಸ್.ಟಿ.ಸಿ/2021) ಬರೆದಿದ್ದಾರೆ.

ಕೇಂದ್ರ ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವರಾದ ಕಿರಣ್ ರಿಜಿಜು ಅವರು ಶಿವಮೊಗ್ಗ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡುವಾಗ ಶಿವಮೊಗ್ಗ ನಗರಕ್ಕೆ ವಿಶೇಷ ಕ್ರೀಡಾ ತರಬೇತಿ ಕೇಂದ್ರ ಮಂಜೂರು ಮಾಡುವುದಾಗಿ ಘೋಷಿಸಿದ್ದಾರೆ. ಅದರಂತೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವರು,ಸಂಸದರು, ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಹ್ಯಾದ್ರಿಕಾಲೇಜಿನಲ್ಲಿ ತರಬೇತಿ ಕೇಂದ್ರಕ್ಕೆ ಅಗತ್ಯವಿರುವ ಜಾಗ ಇದೆ ಎಂದು ತಿಳಿಸಿರುತ್ತಾರೆ.

ತರಬೇತಿ ಕೇಂದ್ರಕ್ಕೆ 18.4 ಎಕರೆ ಜಾಗದ ಅಗತ್ಯವಿದೆ. ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆಯಿಂದ ಸ್ಥಳೀಯ, ರಾಜ್ಯಮಟ್ಟದ ಹಾಗೂ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಳುಗಳಿಗೆ ವಿಶೇಷ ತರಬೇತಿ ನೀಡಿ ಉತ್ತಮ ಫಲಿತಾಂಸ ಪಡೆಯಲು ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಈ ರೀತಿಯ ಮಹತ್ವ ಯೋಜನೆಗೆ ಅಗತ್ಯವಿರುವ ಜಾಗವು ಕುವೆಂಪು ವಿವಿ ಹೆಸರಿನಲ್ಲಿದೆ. ಅದನ್ನು ಯುವಜನ ಸಬಲೀಕರಣ ಇಲಾಖೆಗೆ ಹಸ್ತಾಂತರ ಮಾಡುವ ಅಗತ್ಯವಿದೆ. ಆದ್ದರಿಂದ ಸ್ಥಳವನ್ನು ಅತಿಶೀಘ್ರವಾಗಿ ಹಸ್ತಾಂತರಿಸಬೇಕೆAದು ಜಿಲ್ಲಾಧಿಕಾರಿ ಶಿವಕುಮಾರ್ ಅವರು ಕುಲಪತಿಯನ್ನು ಕೋರಿದ್ದಾರೆ.

ಗಟ್ಟಿಯಾಗಲಿರುವ ಆಂದೋಲನ

ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಕ್ರೀಡಾ ತರಬೇತಿ ಕೇಂದ್ರಕ್ಕೆ ೧೮ ಎಕರೆ ಜಾಗ ಪಡೆಯುವಲ್ಲಿ ಜಿಲ್ಲಾಡಳಿತ ಮುಂದಾಗಿರುವುದು ಅಧಿಕೃತವಾಗಿರುವ ಬೆನ್ನಲ್ಲೇ ಸಂಸದ ರಾಘವೇಂದ್ರ ಅವರು ಕಾಲೇಜಿನ ಪ್ರಾಚಾರ್ಯರಿಗೆ ವಾಸ್ತವ ಸ್ಥಿತಿ ಮನವರಿಕೆ ಮಾಡಿದ್ದಾರೆ. ಈ ನಡುವೆ ಸಹ್ಯಾದ್ರಿ ಕ್ಯಾಂಪಸ್ ಉಳಿಸಿ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿಯೇ ನಡೆಯುತ್ತಿದೆ. ನಗರದೊಳಗೆ ವಿಶಾಲವಾಗಿದ್ದ ಕಾಲೇಜಿನ ಕ್ಯಾಂಪಸ್ ಈಗಾಗಲೇ ಹರಿದು ಹಂಚಿಹೋಗಿದೆ. ಕ್ರೀಡಾ ತರಬೇತಿ ಕೇಂದ್ರವನ್ನು ನಗರದ ಹೊರವಲಯದಲ್ಲಿ ಎಲ್ಲಾದರೂ ನಿರ್ಮಿಸಲಿ ಎಂಬ ಆಗ್ರಹ ಕೇಳಿಬಂದಿದೆ.

Ad Widget

Related posts

ಶಿವಮೊಗ್ಗದಲ್ಲಿ 54 ಕೊರೊನ ಸೋಂಕು

Malenadu Mirror Desk

ಕನಸು ಕಟ್ಟುವ ಮುನ್ನವೇ ಕರೆದುಕೊಂಡ ಕ್ರೂರ ವಿಧಿ, ಊರಿಗೇ ಬೆಳಕುಕೊಡುತಿದ್ದವ ಕತ್ತಲೆಗೆ ಸರಿದದ್ದು ಸರಿಯೇ ?

Malenadu Mirror Desk

ಈಶ್ವರಪ್ಪರನ್ನೇ ಈಡಿಗ ಎನ್ನಬೇಕಂತೆ, ಯಾಕೆ ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.