ಮಲೆನಾಡಿನಲ್ಲಿ ಕೊರೊನ ಅಟ್ಟಹಾಸ ಮುಂದುವರಿದಿದೆ. ಭಾನುವಾರ ಶಿವಮೊಗ್ಗ ಜಿಲ್ಲೆಯಲ್ಲಿ ಸೋಂಕಿತದ ಸಖ್ಯೆ 384 ಕ್ಕೆ ಏರಿಕೆಯಾಗಿದೆ. ಭಾನುವಾರವೂ ಒಬ್ಬರು ಸಾವಿಗೀಡಾಗಿದ್ದು, ಜಿಲ್ಲೆಯಲ್ಲಿ ಈವರೆಗೆ 363 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ. ಶಿವಮೊಗ್ಗ ತಾಲೂಕಿನಲ್ಲಿ ಅತಿಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಒಟ್ಟು 145ಜನರಲ್ಲಿ ಸೋಂಕು ಪತ್ತೆಯಾಗಿದೆ., ಭದ್ರಾವತಿಯಲ್ಲಿ69ಕೊರೊನ ಪಾಸಿಟಿವ್ ಪ್ರಕರಣಗಳಿವೆ. ಉಳಿದಂತೆ ಶಿಕಾರಿಪುರ 24, ತೀರ್ಥಹಳ್ಳಿ 33ಸೊರಬ 25ಸಾಗರ 55, ಹೊಸನಗರ 24 ಹಾಗೂ ಇತರೆ ಜಿಲ್ಲೆಯಿಂದ ಬಂದ 9ಮಂದಿಯಲ್ಲಿ ಕೊರೊನ ವೈರಸ್ ಪತ್ತೆಯಾಗಿದೆ. ಒಟ್ಟು 16 ,ವಿದ್ಯಾರ್ಥಿಗಳಲ್ಲಿ ಕೊರೊನ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ 1726 ಸಕ್ರಿಯ ಕೋವಿಡ್ ಪ್ರಕರಣಗಳಿವೆ ಎಂದು ಆರೊಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.