ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನ ಅಬ್ಬರ ಮುಂದುವರಿದಿದ್ದು, ಸೋಮವಾರ ಸೋಂಕಿತರ ಸಂಖ್ಯೆ ತ್ರಿಶತಕ ದಾಟಿದೆ. ಒಬ್ಬರು ಸೋಂಕಿನಿಂದಾಗಿ ಮೃತಪಟ್ಟಿದ್ದು, ಒಟ್ಟು 347 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ಕೊರೊನದಿಂದ ಸಾವಿಗೀಡಾದವರ ಸಂಖ್ಯೆ364 ಕ್ಕೇರಿದೆ.
ಶಿವಮೊಗ್ಗ ನಗರದಲ್ಲಿ ಒಟ್ಟು 146 ಮಂದಿಯಲ್ಲಿ ಪಾಸಿಟಿವ್ ವರದಿಯಾಗಿದ್ದು, ಭದ್ರಾವತಿ44ಶಿಕಾರಿಪುರ 42, ತೀರ್ಥಹಳ್ಳಿ4ಸೊರಬ18 ಹೊಸನಗರ 40,ಸಾಗರ 37 ಹಾಗೂ ಇತರೆ ಜಿಲ್ಲೆಯಿಂದ ಬಂದ 16ಮಂದಿಯಲ್ಲಿ ಕೊರೊನ ವೈರಸ್ ಪತ್ತೆಯಾಗಿದೆ.20 ವಿದ್ಯಾರ್ಥಿಗಳಿಗೆ ಸೋಂಕು ತಗಲಿದೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.