ವೃತ್ತಿಪರ ಛಾಯಾಗ್ರಾಹಕರಿಗೆ ಲಾಕ್‍ಡೌನ್ ಅವಧಿಯಲ್ಲಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾ ಛಾಯಾಗ್ರಾಹಕರ ಸಂಘ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಬುಧವಾರ ಎಡಿಸಿ ಅನುರಾಧಾ ಅವರಿಗೆ ಮನವಿ ಸಲ್ಲಿಸಿದ ಸಂಘ, ಪೂರ್ವ ನಿಗದಿತವಾದ ಮದುವೆಗಳಲ್ಲಿ ಛಾಯಾಚಿತ್ರ ತೆಗೆಯಲು ಅವಕಾಶ ಮಾಡಿಕೊಡಬೇಕು. ಸ್ಟುಡಿಯೊಗಳನ್ನು ಓಪನ್ ಮಾಡಲು ಅವಕಾಶ ಮಾಡಿಕೊಡಬೇಕು. ಕಳೆದ ಸೀಜನ್‍ನಲ್ಲಿಯೂ ಉದ್ಯೋಗವಿಲ್ಲದೆ ಜೀವನ ನಿರ್ವಹಣೆಯೇ ಕಷ್ಟವಾಗಿತ್ತು. ಈ ಬಾರಿಯೂ ಹಾಗಾದರೆ ವೃತ್ತಿ ನಂಬಿ ಬದುಕುತ್ತಿರುವವರು ತೊಂದರೆಗೊಳಗಾಗುತ್ತಾರೆ ಆದ್ದರಿಂದ ಜಿಲ್ಲಾಡಳಿತ ಸುಗಮ ಕರ್ತವ್ಯಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಈ ಸಂದರ್ಭ ರೆಡ್ಸನ್ ಶ್ರೀಧರ್, ಶಿವಮೊಗ್ಗ ನಂದನ್, ಯೋಗರಾಜ್, ಶಿವಮೊಗ್ಗ ನಾಗರಾಜ್, ಸೋಮನಾಥ್ ಮತ್ತಿತರರಿದ್ದರು.
previous post