ಮಲೆನಾಡಿನಲ್ಲಿ ಕೊರೊನ ಆರ್ಭಟ ಜೋರಾಗಿದ್ದು, ಬುಧವಾರ ಒಂದೇ ದಿನ ಐವರು ಸಾವಿಗೀಡಾಗಿದ್ದಾರೆ. ಸೋಂಕಿತರ ಸಂಖ್ಯೆ 457 ಆಗಿದ್ದು, ಎರಡನೇ ಅಲೆಯಲ್ಲಿ ಇಷ್ಟು ಸಂಖ್ಯೆಯ ಸೋಂಕಿತರು ಪತ್ತೆಯಾಗಿರುವುದು ಇದೇ ಮೊದಲಾಗಿದೆ. ಇದೇ ವೇಳೆ 296 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಶಿವಮೊಗ್ಗ ತಾಲೂಕಿನಲ್ಲಿ ಅತಿಹೆಚ್ಚು ಅಂದರೆ 240 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಭದ್ರಾವತಿಯಲ್ಲಿ 39,ಶಿಕಾರಿಪುರದಲ್ಲಿ 56, ತೀರ್ಥಹಳ್ಳಿಯಲ್ಲಿ 30 ,ಸೊರಬ 45 ಸಾಗರದಲ್ಲಿ 14, ಹೊಸನಗರದಲ್ಲಿ 12 ಸೋಂಕು ಪತ್ತೆಯಾಗಿದೆ. ಹೊರಜಿಲ್ಲೆಯಿಂದ ಬಂದ 21 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 17 ಮಂದಿ ವಿದ್ಯಾರ್ಥಿಗಳಲ್ಲೂ ಸೋಂಕು ಕಂಡುಬಂದಿದೆ. ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 2152 ಸಕ್ರಿಯ ಕೋವಿಡ್ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
next post