Malenadu Mitra
ರಾಜ್ಯ ಶಿವಮೊಗ್ಗ

ಪ್ರತಿ ತಾಲೂಕಲ್ಲೂ ಆಮ್ಲಜನಕ ಘಟಕ

ಶಿವಮೊಗ್ಗಜಿಲ್ಲೆಯಲ್ಲಿ ಆಮ್ಲಜನಕದ ಕೊರತೆ ನೀಗಿಸಲು ಪ್ರತಿ ತಾಲ್ಲೂಕಿನಲ್ಲಿ ಮುಂಜಾಗ್ರತೆ ಕ್ರಮವಾಗಿ ಆಮ್ಲಜನಕ ಉತ್ಪಾದಕ ಘಟಕಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಕೊರೊನಾ 2ನೇ ಅಲೆ ಭೀಕರವಾಗಿ ಆಮ್ಲಜನಕದ ಕೊರತೆಯಿಂದಾಗಿ ಸಾವಿರಾರು ಸೋಂಕಿತರು ಮೃತರಾಗುತ್ತಿದ್ದು, ಆರೋಗ್ಯ ಕ್ಷೇತ್ರಕ್ಕೆ ಇದೊಂದು ಸವಾಲಾಗಿದೆ. ಜಿಲ್ಲೆಯಲ್ಲಿ ಆಮ್ಲಜನಕದ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಭದ್ರಾವತಿಯ ವಿಐಎಸ್‍ಎಲ್ ಕಾರ್ಖಾನೆಯಲ್ಲಿ ಕಳೆದ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ಆಮ್ಲಜನಕ ಉತ್ಪಾದನಾ ಘಟಕವನ್ನು ಪುನರ್ ನಿರ್ಮಾಣ ಮಾಡಿ ಉತ್ಪಾದನೆ ಮಾಡಲು ಈಗಾಗಲೇ ಹಿಂದೆ ಉತ್ಪಾದಿಸುತ್ತಿದ್ದ ಕಂಪನಿಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತುಕತೆ ನಡೆಸಿ 150 ಕೆ.ಎಲ್.ಆಮ್ಲಜನಕ ಉತ್ಪಾದಿಸಲು ನಿರ್ಧರಿಸಿದ್ದು, ಇನ್ನೆರಡು ದಿನದಲ್ಲಿ ಉತ್ಪಾದನೆ ಆರಂಭಿಸುವುದಾಗಿ ಕಂಪನಿ ತಿಳಿಸಿದೆ. ಉತ್ಪಾದಿಸಿದ ಆಮ್ಲಜನಕವನ್ನು ಜಂಬೋ ಸಿಲಿಂಡರ್‍ಗೆ ತುಂಬಿಸಿ ವಿತರಣೆ ಮಾಡಲಿದೆ. ಇದಕ್ಕೆ ಎಷ್ಟೇ ಖರ್ಚು ಬಂದರೂ ಸರ್ಕಾರ ನೀಡಲು ಸಿದ್ಧವಿದೆ ಎಂದರು.
ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರು ಪ್ರತಿ ತಾಲ್ಲೂಕಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಲಭ್ಯ ಕೊರತೆಯಾಗದಂತೆ ಸೂಚನೆ ನೀಡಿದ್ದಾರೆ. ರಾಜ್ಯದ 4 ಕಡೆ ಪ್ರಕೃತಿದತ್ತ ಆಮ್ಲಜನಕ ಶೇಖರಣಾ ಘಟಕ ಸ್ಥಾಪಿಸಲು ಮಂಜೂರಾಗಿದ್ದು, ಶಿಕಾರಿಪುರದಲ್ಲೂ ಸಹ ಈ ಘಟಕ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು.

ಪ್ರತಿ ತಾಲೂಕಲ್ಲಿ 50 ಬೆಡ್ ಕೋವಿಡ್‍ಗೆ

ಪ್ರಪಂಚದಲ್ಲಿ ಈಗಾಗಲೇ ಕೊರೊನಾದ 3 ಮತ್ತು 4ನೇ ಅಲೆ ಕಾಣಿಸಿಕೊಂಡಿದ್ದು, ದೇಶದಲ್ಲೂ ಕಾಣಿಸಿಕೊಳ್ಳುವ ಸಂಭವವಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಪ್ರತಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ 50 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗಾಗಿ ಮೀಸಲಿಡಲು ಚಿಂತಿಸಲಾಗಿದೆ ಎಂದರು.
ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ಔಷಧಿ ಬೇಕಾದವರೂ ಮಾತ್ರ ಹೊರಗೆ ಬಂದು ಔಷಧಿ ಖರೀದಿಸಬೇಕೆ ಹೊರತು ಮನೆಯಿಂದ ಯಾರೂ ಹೊರಗೆ ಬರದೆ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಮೇಯರ್ ಸುನಿತಾ ಅಣ್ಣಪ್ಪ, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಡಿ.ಎಸ್.ಅರುಣ್, ಎಸ್.ದತ್ತಾತ್ರಿ, ಎಸ್.ಜ್ಞಾನೇಶ್ವರ್, ಜಗದೀಶ್, ಕೆ.ಎಲ್.ಅಣ್ಣಪ್ಪ ಇದ್ದರು.

ಫೇಸ್ ಮಾಸ್ಕ್ ವಿತರಣೆ

ಶಿವಮೊಗ್ಗದ ಸಂಸ್ಕøತಿ ಫೌಂಡೇಷನ್ ಉಚಿತ 10 ಸಾವಿರ ಎನ್-95 ಫೇಸ್ ಮಾಸ್ಕ್ ವಿತರಣೆ ಹಾಗೂ ಕೋವಿಡ್ ಲಸಿಕಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.ಸುಧೀಂದ್ರ, ಸಂಸ್ಕøತಿ ಫೌಂಡೇಷನ್ ಸಂಸ್ಥಾಪಕರಾದ ಶರಣ್ ಸಿದ್ಧಾರ್ಥ್, ಉಪಾಧ್ಯಕ್ಷರಾದ ಪ್ರದೀಪ್ ಎಲ್.ಇ,, ಡಾ.ಎನ್.ಶ್ರೀಕಾಂತ್ ಹೆಗಡೆ. ಗೂ ಸದಸ್ಯರಾದ ಜಿ.ಎಸ್.ಸುಬ್ಬುರಾವ್, ಪ್ರವೀಣ್ ಮತ್ತು ಕೆ.ಆರ್.ಅನುಪ್ ಮತ್ತಿತರರಿದ್ದರು.

Ad Widget

Related posts

ಷೇರುದಾರರ ಸಹಕಾರದಿಂದ ಸಂಘದ ಪ್ರಗತಿ

Malenadu Mirror Desk

ಮಾದ್ಯಮ ಅಕಾಡೆಮಿ ಪ್ರಶಸ್ತಿ ಘೋಷಣೆ:೧೨೪ ಪತ್ರಕರ್ತರ ಆಯ್ಕೆ-೨೧ ಪತ್ರಕರ್ತರಿಗೆ ದತ್ತಿ ಪ್ರಶಸ್ತಿ

Malenadu Mirror Desk

ಮುಂದುವರಿದ ಕೊರೊನ ಶತಕದಾಟ:ಶಿವಮೊಗ್ಗ ಭದ್ರಾವತಿಯಲ್ಲಿ ಹೆಚ್ಚು ಪ್ರಕರಣ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.