Malenadu Mitra
ರಾಜ್ಯ ಶಿವಮೊಗ್ಗ

ಪದವೀಧರ ಸಹಕಾರ ಸಂಘದಿಂದ ಒಂದು ಟ್ಯಾಂಕರ್ ಆಕ್ಸಿಜನ್

ಶಿವಮೊಗ್ಗ ಪದವೀಧರ ಸಹಕಾರ ಸಂಘ ನಿ., ಸಂಘವು ಶನಿವಾರ ಸಿಮ್ಸ್ ನಿರ್ದೇಶಕರಿಗೆ ಒಂದು ಟ್ಯಾಂಕರ್ ಆಕ್ಸಿಜನ್ ಖರೀದಿ ಮೌಲ್ಯದ (2.10 ಲಕ್ಷ) ಚೆಕ್ ಹಸ್ತಾಂತರಿಸಿದರು.
ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್ ಮಾತನಾಡಿ, ಕೊರೋನಾ ಕಾಲದಲ್ಲಿ ಜನರು ಆತಂಕ ಪಡುವುದು ಬೇಡ. ಅವರಿಗೆ ನೆರವಾಗಲು ನಾವು ಸಿದ್ಧರಿದ್ದೇವೆ. ಪದವೀಧರರ ಸಹಕಾರ ಸಂಘವು ಶಿವಮೊಗ್ಗದ ಕೊರೋನಾ ಸೋಂಕಿತರಿಗೆ ನೆರವಾಗಲು, ಅವರ ಬಂಧುಗಳಿಗೆ ಅಭಯ ನೀಡಲು ಬದ್ಧವಾಗಿದೆ. ಆದ್ದರಿಂದಲೇ ಮೆಗ್ಗಾನ್ ಆಸ್ಪತ್ರೆಗೆ ಒಂದು ಟ್ಯಾಂಕರ್ ಖರೀದಿಗೆ ಬೇಕಾಗಿರುವಷ್ಟು ನೆರವಿನ ಹಣ ವನ್ನು ನೀಡಿದ್ದೇವೆ. ಮೊದಲ ಅಲೆ ಸಂದರ್ಭ ದಲ್ಲಿಯೂ ಸಹ ನಮ್ಮ ಸಂಘವು ನೆರವಿಗೆ ನಿಂತಿತ್ತು. ಈ ಬಾರಿಯೂ ನೆರವು ನೀಡಿದ್ದೇವೆ.
ವ್ಯವಹಾರದ ಜೊತೆಗೆ ಹಲವಾರು ವರ್ಷಗಳಿಂದ ಹಲವಾರು ಸಮಾಜ ಮುಖ ಕಾರ್ಯಗಳನ್ನು ಮಾಡುತ್ತಾ, ಸಂಕಷ್ಟದಲ್ಲಿರುವ ಶಿವಮೊಗ್ಗ ನಗರದ ಸಾರ್ವಜನಿಕರಿಗೆ ಸಹಾಯ ನೀಡುತ್ತಾ ಬಂದಿದೆ. ಕಳೆದ ವರ್ಷ ಕೋವಿಡ್- 19ರ ಲಾಕ್ ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೊಳಗಾದವರಿಗೆ ಸಂಘ ಮತ್ತು ಸದಸ್ಯರು ನೀಡಿದ ದೇಣಿಗೆಯಿಂದ ಸುಮಾರು 3 ಲಕ್ಷ ರೂ.ಗಳ ಆಹಾರ ಕಿಟ್ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಸಾವಿರ ರೂ.ಗಳನ್ನು ದೇಣಿಗೆಯಾಗಿ ನೀಡಿರುತ್ತೇವೆ. 2ನೇ ಅಲೆಯಲ್ಲಿ ಸಿಲುಕಿ ಆಕ್ಸಿಜನ್ ಕೊರತೆಯಿಂದ ಬಳಷ್ಟು ಜನ ಜೀವ ಕಳೆದು ಕೊಳ್ಳುತ್ತಿದ್ದಾರೆ ಎಂದರು.
ಉಪಾಧ್ಯಕ್ಷೆ ಎಸ್. ಮಮತಾ, ನಿರ್ದೇಶಕರಾದ ಜೋಗದ ವೀರಪ್ಪ, ಪಿ. ರುದ್ರೇಶ್, ಎಸ್. ಹೆಚ್. ಪ್ರಸನ್ನ, ಹೆಚ್.ಸಿ. ಸುರೇಶ್, ಎಸ್.ಕೆ. ಕೃಷ್ಣಮೂರ್ತಿ, ಎಸ್. ರಾಜಶೇಖರ್, ಟಿ. ಜಗದೀಶ್, ಡಾ.ಯು. ಚಂದ್ರಶೇಖರಪ್ಪ, ಡಿ.
ಎಸ್. ಭುವನೇಶ್ವರಿ, ಯು. ರಮ್ಯ, ಮತ್ತು ಕಾರ್ಯದರ್ಶಿ ಟಿ.ವಿ. ಗೋಪಾಲಕೃಷ್ಣ , ಸಿಬ್ಬಂದಿ ಇದ್ದರು.

ಕೊರೋನಾ ಕಾಲದಲ್ಲಿ ಜನರು ಆತಂಕ ಪಡುವುದು ಬೇಡ. ಅವರಿಗೆ ನೆರವಾಗಲು ನಾವು ಸಿದ್ಧರಿದ್ದೇವೆ

ಎಸ್.ಪಿ.ದಿನೇಶ್, ಅಧ್ಯಕ್ಷ ,ಪದವೀಧರ ಸಹಕಾರ ಸಂಘ

Ad Widget

Related posts

ಗಲ್ಲಿ ಹುಡುಗರ ವೈಷಮ್ಯ ಗಲಭೆ ರೂಪ ಪಡೆಯಿತೆ ?, ರಾಗಿಗುಡ್ಡ ಕಲ್ಲುತೂರಾಟ, ಪ್ರಕ್ಷುಬ್ಧತೆ ಹಿಂದಿನ ಅಸಲಿಯತ್ತೇನು ಗೊತ್ತೇ ?

Malenadu Mirror Desk

ಕೊರೊನ ಸಂಕಟ ನಿವಾರಣೆಗೆ ಸರಕಾರ ಸರ್ವಪ್ರಯತ್ನ: ಕುಮಾರ್ ಬಂಗಾರಪ್ಪ

Malenadu Mirror Desk

ಕಲ್ಲುತೂರಾಟ ಖಂಡಿಸಿ ಅ.12 ಕ್ಕೆ ಬಿಜೆಪಿ ಪ್ರತಿಭಟನಾ ಸಭೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.