Malenadu Mitra
ರಾಜ್ಯ ಶಿವಮೊಗ್ಗ

ಮಲೆನಾಡಿನಲ್ಲಿ ಲಾಕ್‍ಡೌನ್‍ಗೆ ಉತ್ತಮ ಪ್ರತಿಕ್ರಿಯೆ ಅನಗತ್ಯವಾಗಿ ರಸ್ತೆಗಿಳಿದವರಿಗೆ ಪೊಲೀಸರಿಂದ ಖಡಕ್ ಸೂಚನೆ

ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಜಾರಿಮಾಡಿರುವ ಸೆಮಿಲಾಕ್‍ಡೌನ್‍ಗೆ ಮಲೆನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರಕಾರದ ಮಾರ್ಗಸೂಚಿಯಂತೆ ಬೆಳಗ್ಗೆ 10 ಗಂಟೆಯೊಳಗೆ ಜನರು ತರಕಾರಿ ಹಾಲು,ಹಣ್ಣು ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಿದರು.
ಎಲ್ಲೆಡೆ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ಚೆಕ್ ಪೋಸ್ಟ್ ನಿರ್ಮಾಣ ಮಾಡಿ ಅನಗತ್ಯ ಓಡಾಟಕ್ಕೆ ತಡೆಹಾಖಲಾಯಿತು. ಆಸ್ಪತ್ರೆ ಸೇರಿದಂತೆ ಅಗತ್ಯ ಕೆಲಸಗಳಿಗೆ ºಹೋಗುವವರು ತಮ್ಮ ಗುರುತು ಪತ್ರ ನೀಡಿದ ಬಳಿಕ ಅನುವು ಮಾಡಿಕೊಡಲಾಯಿತು.
ಸರಕಾರ ವಾಹನಗಳನ್ನು ತರದೆ ನಡೆದು ಕೊಂಡೇ ಅಗತ್ಯ ವಸ್ತು ಖರೀದಿ ಮಾಡಬೇಕೆಂಬ ನಿಯಮಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಹಳ್ಳಿಗಳಿಂದ ತರಕಾರಿ ಸೊಪ್ಪು ಮಾರುವವರು ನಡೆದುಕೊಂಡು ಬರಲು ಸಾಧ್ಯವಿಲ್ಲ ಕಟ್ಟಡ ಕಾರ್ಮಿಕರಿಗೂ ಈ ನಿಯಮ ಪಾಲನೆ ಕಷ್ಟ ಸಾಧ್ಯವಾಗಿದೆ. ಇದರಿಂದ ದುಡಿಯುವ ವರ್ಗಕ್ಕೆ ತೊಂದರೆಯಾಗಿದೆ ಎಂದು ಅವರು ದೂರಿದ್ದಾರೆ.

ಚಿಕ್ಕಮಗಳೂರಿನಲ್ಲಿ ಅನಗತ್ಯವಾಗಿ ಬೈಕ್ ಮೇಲೆ ಬಂದವರನ್ನು ತಡೆದು ವಾಹನ ಸೀಜ್ ಮಾಡಲಾಗಿದೆ. ಮಲೆನಾಡಿನ ಬಹುತೇಕ ತಾಲೂಕುಗಳಲ್ಲಿ ಇದೇ ಪರಿಸ್ಥಿತಿ ಇತ್ತು. ಮಲೆನಾಡಿನ ಗ್ರಾಮಾಂತರ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಯಾವುದೇ ಅಡಚಣೆ ಇಲ್ಲದೆ ಮುಂದುವರಿದಿದೆ. ಆದರೆ ಕೂಲಿ ಕಾರ್ಮಿಕರನ್ನು ಅವಲಂಭಿಸಿದ್ದ ಕೃಷಿ ಚಟುವಟಿಕೆಗಳಿಗೆ ಕೊಂಚ ತೊಂದರೆಯಾಗಿದೆ.
ಶಿವಮೊಗ್ಗ ನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೇ ಫೀಲ್ಡಿಗಿಳಿದು ಬಿಗಿಕ್ರಮ ಕೈಗೊಂಡರು.

Ad Widget

Related posts

ಮಾರ್ಗಸೂಚಿ ಅನ್ವಯ ರಂಜಾನ್ ಆಚರಣೆ: ಚಿದಾನಂದ ವಟಾರೆ

Malenadu Mirror Desk

ಜಿಲ್ಕಾಡಳಿತದ ಭರವಸೆ , ಕಾರ್ಗಲ್ ಧರಣಿ ತಾತ್ಕಾಲಿಕ ವಾಪಸ್

Malenadu Mirror Desk

ಮಾಚಿದೇವ ಸರ್ವಕಾಲಕ್ಕೂ ಆದರ್ಶಪ್ರಾಯರು: ಸುಧಾಕರ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.