ಶಿವಮೊಗ್ಗದ ಕುವೆಂಪು ವಿವಿ ಕಲಸಚಿವ (ಅಡಳಿತ) ಎಸ್.ಎಸ್.ಪಾಟೀಲ್ ಅವರನ್ನು ಬದಲಿಸಿದ್ದು, ಅವರ ಜಾಗಕ್ಕೆ ಕೆ.ಎಸ್.ಅಧಿಕಾರಿ ಶ್ರೀಧರ್ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಸಿ.ಎನ್ ಶ್ರೀಧರ ಅವರು ನೂತನ ಕುಲಸಚಿವರಾಗಿ ಮಂಗಳವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಎಸ್.ಎಸ್.ಪಾಟೀಲ್ ಮತ್ತು ಕುಲಪತಿ ಪ್ರೊ.ವೀರಭದ್ರಪ್ಪ ಅವರ ನಡುವೆ ಹೊಂದಾಣಿಕೆಯ ಕೊರತೆ ಇತ್ತೀಚೆಗೆ ಕಂಡುಬಂದಿತ್ತೆನ್ನಲಾಗಿದೆ. ಕುವೆಂಪು ವಿವಿ ಚಟುವಟಿಕೆಗಳ ಬಗ್ಗೆ ಹೊರಗಿನ ಸಂಘಟನೆಗಳು ಇಲ್ಲದ ತಗಾದೆ ತೆಗೆದು ವಿವಿಯ ಅಧ್ಯಾಪಕರು ಸೇರಿದಂತೆ ಅನೇಕರ ಮೇಲೆ ಪೊಲಿಸ್ ದೂರು ದಾಖಲಾಗಿತ್ತು. ಈ ಎಲ್ಲ ಬೆಳವಣಿಗೆಗಳಿಗೆ ವಿವಿಯಲ್ಲಿನ ಕೆಲವರ ಕುಮ್ಮಕ್ಕು ಇದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ವಿವಿಯ ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿಗಳು ದೂರು ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಎಸ್.ಎಸ್.ಪಾಟೀಲ್ ಅವರು ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಆಪ್ತರಾಗಿದ್ದರೂ, ಅವರನ್ನು ಕುಲಸಚಿವ ಹುದ್ದೆಯಿಂದ ವರ್ಗಾವಣೆ ಮಾಡಿರುವುದು ವಿವಿ ವಲಯದಲ್ಲಿ ಅಚ್ಚರಿ ಮೂಡಿದೆ.
ಸಿ.ಎನ್.ಶ್ರೀಧರ್ ಅವರು ಹಿರಿಯ ಶ್ರೇಣಿ ಕೆ.ಎ.ಎಸ್ ಅಧಿಕಾರಿಯಾಗಿದ್ದು, ಕುವೆಂಪು ವಿವಿಯ ಹಳೆಯ ವಿದ್ಯಾರ್ಥಿಯೂ ಆಗಿದ್ದಾರೆ.