Malenadu Mitra
ರಾಜ್ಯ ಶಿವಮೊಗ್ಗ

ಶಿವಮೊಗ್ಗದಲ್ಲಿ ಭಾರೀ ಮಳೆ,ಮನೆಗಳಿಗೆ ನೀರು

ಶಿವಮೊಗ್ಗ ನಗರದಲ್ಲಿ ಗುರುವಾರ ರಾತ್ರಿ ಭಾರೀ ಮಳೆ ಸುರಿದಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಸಂಜೆಯಿಂದ ಆರಂಭವಾದ ಗುಡುಗು ಸಿಡಿಲಿನ ಮಳೆ ಎರಡು ಹಂತದಲ್ಲಿ ಸುರಿಯಿತು.
ಶಿವಮೊಗ್ಗ ನಗರದ ಬಾಪೂಜಿನಗರ, ಗಾಂಧಿನಗರ,ಗೋಪಾಲಗೌಡ ಬಡಾವಣೆ, ವೆಂಕಟೇಶ್ ನಗರದ ಅನೇಕ ತಗ್ಗು ಪ್ರದೇಶಗಳಲ್ಲಿ ಮಳೆಯಿಂದಾಗಿ ಚರಂಡಿ ನೀರು ಸೇರಿ ಮನೆಗಳಿಗೆ ನುಗ್ಗಿದೆ. ಜಯನಗರದ ರಾಜಾಕಾಲುವೆಯಿಂದ ನುಗ್ಗಿದ ನೀರು ಮನೆಗಳಿಗೆ ಕೊಳಚೆಯನ್ನೂ ತಂದು ಹಾಕಿ ಜನರಿಗೆ ತೀವ್ರ ತೊಂದರೆಯಾಯಿತು.


ಸ್ಮಾರ್ಟ್‍ಸಿಟಿ ಕಾಮಗಾರಿ ಪ್ರಗತಿಯಲ್ಲಿರುವ ಕಡೆಗಳಲ್ಲಿ ನೀರು ರಸ್ತೆ ಮೇಲೆ ಹರಿಯುತ್ತಿರುವ ದೃಶ್ಯ ಕಂಡು ಬಂದಿತು. ಲಾಕ್‍ಡೌನ್ ನಿಮಿತ್ತ ಅನೇಕ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಮಳೆಯಿಂದಾಗಿ ನೀರು ತುಂಬಿದ ರಸ್ತೆಯಲ್ಲಿ ದ್ವಿಚಕ್ರವಾಹನಗಳನ್ನು ಚಲಾಯಿಸಲು ತೊಂದರೆ ಉಂಟಾಗಿತ್ತು. ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುವಾಗ ಕೊರೊನ ವಾರಿಯರ್ಸ್‍ಗಳಾದ ಆರೋಗ್ಯ ಕಾರ್ಯಕರ್ತರಿಗೆ ತೊಂದರೆಯಾಯಿತು.

Ad Widget

Related posts

ಜೋಕಾಲಿಯಲ್ಲಿದ್ದ ಜವರಾಯ, ಆಡುವ ಕಂದನ ಸಾವು ನ್ಯಾಯವೇ ?

Malenadu Mirror Desk

ಪಾಲಕರು ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸಬೇಕು , ಈಡಿಗ ಸಂಘದಿಂದ ಲಕ್ಷ್ಮಣ್ ಕೊಡಸೆ, ಗುರುರಾಜ್ ಅವರಿಗೆ ಸನ್ಮಾನ

Malenadu Mirror Desk

ಕಾಶೀನಾಥ್ ನಾಯ್ಕ್ ಅವರನ್ನು ಸನ್ಮಾನಿಸಿದ ಕ್ರೀಡಾ ಸಚಿವ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.