Malenadu Mitra
ತೀರ್ಥಹಳ್ಳಿ ರಾಜ್ಯ ಹೊಸನಗರ

ಸಿಡಿಲು ಬಡಿದು ರೈತ ಮೃತ 36 ಗಂಟೆಯೊಳಗೆ ಪರಿಹಾರ ಕೊಡಿಸಿದ ಶಾಸಕ ಆರಗ ಜ್ಞಾನೇಂದ್ರ

ರಿಪ್ಪನ್‌ಪೇಟೆ;-ಕಳೆದ ಗುರುವಾರ ಸಂಜೆ ಸಿಡಿಲು ಬಡಿದು ಸಾವನ್ನಪ್ಪಿದ ರೈತ ಹೊಂಡ್ಲಗದ್ದೆ ಉಮೇಶ್ ಕುಟುಂಬಕ್ಕೆ ಸರ್ಕಾರದ ತುರ್ತು ಪರಿಹಾರ ನಿಧಿಯಿಂದ
5 ಲಕ್ಷ ರೂನ ಪರಿಹಾರ ಚಕ್‌ಯನ್ನು ಅವಘಡ ಸಂಭವಿಸಿ 36 ಗಂಟೆಯೊಳಗೆ ರೈತ ಕುಟುಂಬಕ್ಕೆ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ವಿತರಣೆ ಮಾಡಿದರು.
ಹುಂಚಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಂಡ್ಲಗದ್ದೆ ಗ್ರಾಮದ ಆದಿಗದ್ದೆ ನಿವಾಸಿ ಹೆಚ್.ಎಲ್.ಉಮೇಶ್ ಎಂಬುವರು ಜಮೀನಿನಲ್ಲಿ ಕೃಷಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುವ ಸಂದರ್ಭದಲ್ಲಿ ಸಿಡಿಲು ಬಡಿದು ಸ್ಥಳದಲ್ಲಿ ಸಾವನ್ನಪ್ಪಿದ್ದು ಅವರ ಕುಟುಂಬಕ್ಕೆ ಸರ್ಕಾರದ ಪರಿಹಾರ ಯೋಜನೆಯಡಿ 5 ಲಕ್ಷ ರೂ ಪರಿಹಾರ ಹಣವನ್ನು ನೀಡಲಾಗಿದೆ ಎಂದು ಆರಗ ಜ್ಞಾನೇಂದ್ರ ವಿವರಿಸಿ ಈ ಹಣವನ್ನು ಮಕ್ಕಳ ಹೆಸರಿನಲ್ಲಿ ಠೇವಣಿ ಇಟ್ಟುಕೊಳ್ಳುವಂತೆ ಸಲಹೆ ನೀಡಿದರು.
ಶಾಸಕ ಆರಗ ಜ್ಞಾನೇಂದ್ರ ಮೃತರ ಮನೆಗೆ ಭೇಟಿ ಸಾಂತ್ವನ ಹೇಳಿ ಆಕಸ್ಮಿಕ ಸಾವನ್ನಪ್ಪಿರುವ ಕುಟುಂಬದ ದುಡಿಯುವ ಶಕ್ತಿಯೇ ಇಲ್ಲದ ಸ್ಥಿತಿಯಲ್ಲಿ ಕುಟುಂಬಕ್ಕೆ ದೇವರು ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸಿ ಯಾವುದೇ ಕಾರಣಕ್ಕೂ ದೃತಿಗೆಡದೆ ತಾವು ತಮ್ಮ ಕೃಷಿ ಕಾಯಕವನ್ನು ಮಾಡಿ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

This image has an empty alt attribute; its file name is 14rpt1-1021x1024.jpg

ತಹಶೀಲ್ದಾರ್ ವಿ.ಎಸ್.ರಾಜೀವ್ ಗ್ರಾಮ ಪಂಚಾಯ್ತಿ ಅಡಳಿತ ವರ್ಗ ಇನ್ನಿತರ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Ad Widget

Related posts

ತುಂಗಾ ತಟದಲ್ಲಿ ಶಂಕಿತ ಉಗ್ರರ ಸ್ಫೋಟ ತಾಲೀಮು ?,ಸೊಪ್ಪುಗುಡ್ಡೆ ಶಾರೀಕ್‌ಗಾಗಿ ತೀವ್ರ ಶೋಧ, ಬಾಂಬ್ ತಯಾರಿ ತರಬೇತಿ ಆಗಿರುವ ಶಂಕೆ

Malenadu Mirror Desk

ಹಸೆಮಣೆ ಏರಬೇಕಿದ್ದವನ ಕರದೊಯ್ದ ಕ್ರೂರ ವಿದಿ

Malenadu Mirror Desk

ಶಿವಮೊಗ್ಗದಲ್ಲಿ ಭಾರೀ ಮಳೆ,ಮನೆಗಳಿಗೆ ನೀರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.